Just In
Don't Miss!
- News
ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ತೃತೀಯಲಿಂಗಿ ನಾಮನಿರ್ದೇಶನ ಮಾಡಿದ ಬೈಡನ್
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಟೋಮ್ಯಾಟಿಕ್ ಆಗಿ ಚಲಿಸುತ್ತದೆ ಟೊಯೊಟಾ ಕಂಪನಿಯ ಈ ಎಲೆಕ್ಟ್ರಿಕ್ ವಾಹನ
ಟೊಯೊಟಾ ಕಂಪನಿಯು ಆಟೋಮ್ಯಾಟಿಕ್ ಆಗಿ ಚಲಿಸುವ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ವಾಹನವನ್ನು ಕಮರ್ಷಿಯಲ್ ಹಾಗೂ ವಿತರಣಾ ಕಾರ್ಯಗಳಿಗಾಗಿ ಬಳಸಬಹುದು.

ಟೊಯೊಟಾ ಕಂಪನಿಯು ಹಲವು ವರ್ಷಗಳಿಂದ ಈ ವಾಹನವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈಗ ಟೊಯೊಟಾ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಚಾಲಕರಹಿತ ಆಟೋಮ್ಯಾಟಿಕ್ ಆಗಿ ಚಲಿಸುವ ಕಾರಿನ ಮಾಹಿತಿಯನ್ನು ಬಿಡುಗಡೆಗೊಳಿಸಲಾಗಿದೆ.

ಈ ಆಟೋಮ್ಯಾಟಿಕ್ ವಾಹನಕ್ಕೆ ಇ-ಪ್ಯಾಲೆಟ್ ಎಂಬ ಹೆಸರನ್ನಿಡಲಾಗಿದೆ. ಟೊಯೊಟಾ ಕಂಪನಿಯು ಈ ಆಟೋಮ್ಯಾಟಿಕ್ ಎಲೆಕ್ಟ್ರಿಕ್ ವಾಹನವನ್ನು ಅಗತ್ಯಬಿದ್ದಾಗ ಕಚೇರಿಯಾಗಿಯೂ ಬಳಸಬಹುದು ಎಂದು ಹೇಳಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ವಾಹನದಲ್ಲಿ 20 ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದು. ಇ-ಪ್ಯಾಲೆಟ್ ವಾಹನವನ್ನು ಹಲವಾರು ವಿಶೇಷ ಫೀಚರ್'ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ವಾಹನದಲ್ಲಿರುವ ಸೀಟುಗಳನ್ನು ಮಡಚುವಂತೆ ವಿನ್ಯಾಸಗೊಳಿಸಲಾಗಿದೆ.

ಇದರಿಂದಾಗಿ ಅಗತ್ಯವಿರುವಾಗ ಮಡಚಿಟ್ಟು, ಅಗತ್ಯವಿಲ್ಲದಿರುವಾಗ ಬಿಚ್ಚಿಡಬಹುದು. ಟೊಯೊಟಾ ಕಂಪನಿಯು ಶೀಘ್ರದಲ್ಲೇ ಈ ವಾಹನವನ್ನು ಕಮರ್ಷಿಯಲ್ ವಾಹನವಾಗಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ವಾಹನವನ್ನು 2018ರಲ್ಲಿ ಅನಾವರಣಗೊಳಿಸಲಾಗಿತ್ತು. ಟೊಯೊಟಾ ಕಂಪನಿಯು ಈ ವಾಹನದ ಉತ್ಪಾದನೆಯನ್ನು ಆರಂಭಿಸಿದೆ. ಸಾಕಷ್ಟು ಜನರು ಈ ವಾಹನದ ಬಗ್ಗೆ ಇಂಟರ್'ನೆಟ್ ಹಾಗೂ ಇ-ಮೇಲ್ ಮೂಲಕ ವಿಚಾರಿಸುತ್ತಿದ್ದಾರೆ ಎಂದು ಟೊಯೊಟಾ ಕಂಪನಿಯು ಹೇಳಿದೆ.

ಜನರು ಈ ವಾಹನದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ. ಆಟೋಮ್ಯಾಟಿಕ್ ವಾಹನವಾದ ಇ-ಪ್ಯಾಲೆಟ್ ಅನ್ನು ವಿತರಣೆ ಹಾಗೂ ಟ್ಯಾಕ್ಸಿ ಸೇವೆಗಳಲ್ಲಿ ಬಳಸಲಾಗುವುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟೊಯೊಟಾ ಕಂಪನಿಯ ಈ ಆಟೋಮ್ಯಾಟಿಕ್ ವಾಹನವನ್ನು ಅಮೆಜಾನ್, ಪಿಜ್ಜಾ ಹಟ್ ಕಂಪನಿಯ ವಿತರಣೆ ಸೇವೆಗಳಲ್ಲಿ ಹಾಗೂ ಉಬರ್‌ನಂತಹ ಕ್ಯಾಬ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುವುದು. ಇದರಿಂದಾಗಿ ಈ ವಾಹನವು ವೈಯಕ್ತಿಕ ಬಳಕೆಗೆ ಲಭ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.

ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಫಾರ್ಚೂನರ್ ಲೆಜೆಂಡರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಎಸ್‌ಯುವಿಯು ದೇಶದಲ್ಲಿ ಮಾರಾಟವಾಗುವ ಸ್ಟ್ಯಾಂಡರ್ಡ್ ಎಸ್‌ಯುವಿಗಿಂತ ಹೆಚ್ಚು ಪವರ್ ಫುಲ್ ಹಾಗೂ ಪ್ರೀಮಿಯಂ ಆಗಿರಲಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಶ್ವಾದ್ಯಂತ ಪ್ರಮುಖ ವಾಹನ ತಯಾರಕ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವತ್ತ ಗಮನ ಹರಿಸುತ್ತಿವೆ. ಜಪಾನ್ ಮೂಲದ ಟೊಯೊಟಾ ಕೂಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ದತೆಯನ್ನು ನಡೆಸಿದೆ.