ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಟೊಯೊಟಾ ಕಂಪನಿಯು ಹೊಸ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ವರ್ಷನ್ ಕಾರನ್ನು ಯುರೋಪಿಯನ್ ಮಾರುಕಟ್ಟೆಗಳಿಗೆ ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಹೆಚ್ಚು ಸ್ಪೋರ್ಟಿಯರ್ ಆಗಿದೆ. ಈ ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಜಪಾನ್‌ನಲ್ಲಿ ಮೊದಲು ಬಿಡುಗಡೆಯಾದ ಸ್ಪೋರ್ಟ್ ಆವೃತ್ತಿಯೊಂದಿಗೆ ಕ್ರಾಸ್‌ಒವರ್ ಆಗಿದೆ. ಈ ಸ್ಪೋರ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ಪರಿಚಯಿಸಲಾಗಿಲ್ಲ. ಆದರೆ ಟೊಯೊಟಾ ಕಂಪನಿಯು ಸಿ-ಹೆಚ್‌ಆರ್ ಸ್ಟ್ಯಾಂಡರ್ಡ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಟೊಯೊಟಾ ಕಂಪನಿಯು ಇತ್ತೀಚೆಗೆ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ತನ್ನ ಮೊದಲ ಮಾದರಿಯಾಗಿ ಅರ್ಬನ್ ಕ್ರೂಸರ್ ಅನ್ನು ಬಿಡುಗಡೆಗೊಳಿಸಿತ್ತು. ಅರ್ಬನ್ ಕ್ರೂಸರ್ ಮಾರುತಿ ಸುಜುಕಿಯ ವಿಟಾರಾ ಬ್ರೆಝಾವನ್ನು ಆಧರಿಸಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಇನ್ನು ಸಿ-ಹೆಚ್‌ಆರ್ ಜಿಆರ್ ಕಾರಿನಲ್ಲಿ ಲೀಟರ್ ಮತ್ತು 2.0-ಲೀಟರ್ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಹೊಂದಿದೆ. ಸುಧಾರಿತ ಬಾಡಿ ರೋಲ್ ಮತ್ತು ಪಿಚ್ ನಿಯಂತ್ರಣವನ್ನು ನೀಡುತ್ತದೆ. ಇನ್ನು ತ್ವರಿತ ಪ್ರತಿಕ್ರಿಯೆಗಳಿಗಾಗಿ ಟ್ಯೂನ್ ಮಾಡಲಾದ ಸ್ಟೀರಿಂಗ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ.

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಸಾಕಷ್ಟು ಗಮನಾರ್ಹವಾಗಿದೆ ಮತ್ತು ಹೆಡ್ ಲೈಟ್, ಫಾಗ್ ಲೈಟ್ ಹೌಸಿಂಗ್ ಮತ್ತು ಫ್ರಂಟ್ ಗ್ರಿಲ್‌ನಲ್ಲಿ ಬ್ಲ್ಯಾಕ್ ಅಸೆಂಟ್ ಗಳನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ 19 ಇಂಚಿನ ಡ್ಯುಯಲ್-ಟೋನ್ ಕಲರ್ ಥೀಮ್ ಹೊಂದಿರುವ ವ್ಹೀಲ್ ಗಳನ್ನು ಹೊಂದಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕ್ಯಾಬಿನ್ ಅಲ್ಕಾಂಟರಾ ಸಜ್ಜುಗೊಳಿಸುವಿಕೆಯನ್ನು ಹೊಂದಿದೆ. ಈ ಸ್ಪೋರ್ಟ್ ಕಾರಿನ ಹಲವು ಕಡೆಗಳಲ್ಲಿ ಜಿಆರ್ ಲೋಗೊಗಳನ್ನು ಇರಿಸಲಾಗಿದೆ. ಎಲೆಕ್ಟ್ರಿಕ್ ಮಿರರ್ ಗಳು, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಹೊಂದಿದೆ. ಇದರೊಂದಿಗೆ ಟೊಯೊಟಾ ಕಂಪನಿಯು ಒಂಬತ್ತು ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂನ್ನು ಹೆಚ್ಚುವರಿ ವೆಚ್ಚದಲ್ಲಿ ನೀಡುತ್ತಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಟೊಯೊಟಾ ಸಿ-ಹೆಚ್‌ಆರ್ ಮಿಡ್ ಎಸ್‍ಯುವಿಯ ಬಾಡಿಯನ್ನು ಕವರ್ ಮಾಡಿ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಆದರೆ ಕಲವು ವಿನ್ಯಾಸ ಅಂಶಗಳನ್ನು ಬಹಿರಂಗವಾಗಿದೆ. ಈ ಟೊಯೊಟಾ ಸಿ-ಹೆಚ್‌ಆರ್ ಮಿಡ್ ಎಸ್‍ಯುವಿ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಸಿ-ಹೆಚ್‌ಆರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜೀಪ್ ಕಂಪಾಸ್, ಫೋಕ್ಸ್ ವ್ಯಾಗನ್ ಟಿ-ರಾಕ್ ಮತ್ತು ಸ್ಕೋಡಾ ಕರೋಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಅನಾವರಣವಾಯ್ತು ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು

ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು ಭಾರತೀಯ ಮಾರುಕಟ್ಟೆಯ ಗ್ರಾಹಕರು ಸೆಳೆಯುವಂತಹ ಆಕರ್ಷಕ ಸ್ಪೋರ್ಟಿ ಲುಕ್ ಮತ್ತು ಪರ್ಫಾರ್ಮೆನ್ಸ್ ಹೊಂದಿದೆ. ಆದರೆ ಹೊಸ ಟೊಯೊಟಾ ಸಿ-ಹೆಚ್‌ಆರ್ ಜಿಆರ್ ಸ್ಪೋರ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದ ಬಗ್ಗೆ ಟೊಯೊಟಾ ಕಂಪನಿಯು ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ.

Most Read Articles

Kannada
Read more on ಟೊಯೊಟಾ toyota
English summary
Toyota C-HR GR Sport Revealed. Read In Kannada.
Story first published: Tuesday, November 10, 2020, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X