ಫಾರ್ಚೂನರ್ ಎಪಿಕ್ ಅನಾವರಣಗೊಳಿಸಿದ ಟೊಯೊಟಾ
ಟೊಯೊಟಾ ಕಂಪನಿಯು ಫಾರ್ಚೂನರ್ ಮಾದರಿಯ ಹೊಸ ಎಪಿಕ್ ಹಾಗೂ ಎಪಿಕ್ ಬ್ಲ್ಯಾಕ್ ಆವೃತ್ತಿ ಕಾರುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಫಾರ್ಚೂನರ್‌ನ ಈ ಹೊಸ ರೂಪಾಂತರಗಳನ್ನು ಮೊದಲು ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಟೊಯೊಟಾ, ಈ ಎರಡು ಹೊಸ ಫಾರ್ಚೂನರ್ ಕಾರುಗಳಲ್ಲಿ 2.8-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿದ್ದು, ಮಾರುಕಟ್ಟೆಯಲ್ಲಿರುವ ಫಾರ್ಚೂನರ್ ಕಾರುಗಳಿಗಿಂತ ವಿಭಿನ್ನವಾಗಿಸಲು ಹೆಚ್ಚುವರಿ ಕಾಸ್ಮೆಟಿಕ್ ಅಪ್ ಡೇಟ್ ಗಳನ್ನು ಮಾಡಿದೆ. ಫಾರ್ಚೂನರ್‌ನ ಈ ಹೊಸ ಎಪಿಕ್ ಮಾದರಿಗಳಲ್ಲಿ ಹೊಸ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಹೊಸ ಮಾದರಿಗಳ ಮುಂಭಾಗದಲ್ಲಿ ಎಪಿಕ್ ಬ್ರಾಂಡ್ ನೀಡಲಾಗಿದೆ. ಇಂಟಿರಿಯರ್ ಕ್ಯಾಬಿನ್ ನಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಫಾರ್ಚೂನರ್‌ನ ಈ ಎಪಿಕ್ ಮಾದರಿಗಳು ಮೆಟಲ್ ಸ್ಕಫ್ ಪ್ಲೇಟ್ ಹಾಗೂ ಎಪಿಕ್ ಬ್ರಾಂಡ್ ನ ಫ್ಲೋರ್ ಮ್ಯಾಟ್‌ಗಳನ್ನು ಹೊಂದಿವೆ.

ಎಪಿಕ್ ಬ್ಲ್ಯಾಕ್ ಮಾದರಿಯ ಕಾರಿನಲ್ಲಿ ಹೊಸ ಸ್ಪೋರ್ಟಿ ವಿನ್ಯಾಸದ ಕಪ್ಪು ಬಣ್ಣದಲ್ಲಿರುವ ರೂಫ್, ವಿಂಗ್ ಮಿರರ್ ಹಾಗೂ ಅಲಾಯ್ ವ್ಹೀಲ್ ಗಳಿವೆ.

ಎಪಿಕ್ ಮಾದರಿಯಲ್ಲಿ ಹಳೆಯ ಫಾರ್ಚೂನರ್ ಕಾರಿನಲ್ಲಿರುವಂತಹ ಎಲ್ಇಡಿ ಹೆಡ್ ಲ್ಯಾಂಪ್, ಆಟೋ ಕ್ಲೈಮೇಟ್ ಕಂಟ್ರೋಲ್, ಪವರ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್, ಕ್ಯಾಮೆರಾ ಹಾಗೂ ಇನ್ಫೋಟೇನ್ ಮೆಂಟ್ ಸಿಸ್ಟಂಗಳಿವೆ.

ಈ ಕಾರಿನಲ್ಲಿ ಅಳವಡಿಸಲಾಗಿರುವ 2.8-ಲೀಟರ್ ಡೀಸೆಲ್ ಎಂಜಿನ್, 177 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ಕಾರಿನ ಮುಂಭಾಗ ಅಥವಾ ಹಿಂಭಾಗದ ವ್ಹೀಲ್ ಗಳಿಗೆ ಅಥವಾ ಎಲ್ಲಾ ವ್ಹೀಲ್ ಗಳಿಗೆ ಒಂದೇ ಬಾರಿಗೆ ಪವರ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗುತ್ತದೆ.

ಮ್ಯಾನುವಲ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ನೀಡಲಾಗಿಲ್ಲ. ದಕ್ಷಿಣ ಆಫ್ರಿಕಾ ಮಾರುಕಟ್ಟೆಗಾಗಿ ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ 2.4-ಲೀಟರ್ ಎಂಜಿನ್ ನಲ್ಲಿ ಬಿಡುಗಡೆಗೊಳಿಸಲಾಗುವುದು. 2.4-ಲೀಟರ್ ಎಂಜಿನ್ ಅನ್ನು ಭಾರತದಲ್ಲಿ ಮಾರಾಟವಾಗುತ್ತಿರುವ ಇನ್ನೋವಾ ಕ್ರಿಸ್ಟಾದಲ್ಲಿ ಅಳವಡಿಸಲಾಗಿದೆ.

ದಕ್ಷಿಣ ಆಫ್ರಿಕಾದ ಮಾರುಕಟ್ಟೆಗಾಗಿ 2.4 ಲೀಟರಿನ ಡೀಸೆಲ್ ಎಂಜಿನ್ ಅನ್ನು ಲೋ ವೇರಿಯಂಟ್ ಗಳಲ್ಲಿ ಅಳವಡಿಸಲಾಗುವುದು. 2.7 ಲೀಟರ್ ಎಂಜಿನ್ ಅನ್ನು ಪೆಟ್ರೋಲ್ ಮಾದರಿಯಲ್ಲಿ ಅಳವಡಿಸಲಾಗುವುದು.

ಟೊಯೊಟಾ ಕಂಪನಿಯು ಫೆಬ್ರವರಿ ಆರಂಭದಲ್ಲಿ ಫಾರ್ಚೂನರ್ ಕಾರಿನ ಬಿಎಸ್ 6 ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಫಾರ್ಚೂನರ್ ಮಾದರಿಯಲ್ಲಿ ಮಿಡ್-ಸೈಕಲ್ ಅಪ್ ಡೇಟ್ ಗೊಳಿಸಿ ಬಿಡುಗಡೆಗೊಳಿಸಲು ಟೊಯೊಟಾ ಕಂಪನಿಯು ಚಿಂತನೆ ನಡೆಸಿದೆ.

ಬಿಎಸ್ 6 ನಿಯಮಗಳು ಜಾರಿಯಾಗಿರುವ ಹಿನ್ನೆಲೆಯಲ್ಲಿ ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಡೇಟ್ ಮಾಡಲಾಗದ ವಾಹನಗಳ ಮಾರಾಟವನ್ನೂ ಟೊಯೊಟಾ ಕಂಪನಿಯು ಸ್ಥಗಿತಗೊಳಿಸುತ್ತಿದೆ. ಇತ್ತೀಚಿಗಷ್ಟೇ ಎಟಿಯೋಸ್ ಹಾಗೂ ಲಿವಾ ಮಾದರಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.


Click it and Unblock the Notifications