ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಯು ಸಹಭಾಗಿತ್ವ ಯೋಜನೆ ಅಡಿ ವಿಟಾರಾ ಬ್ರೆಝಾ ರೀಬ್ಯಾಡ್ಜ್ ಆವೃತ್ತಿಯಾದ ಅರ್ಬನ್ ಕ್ರೂಸರ್ ಬಿಡುಗಡೆ ಮಾಡುತ್ತಿದ್ದು, ಅಗಸ್ಟ್‌ನಲ್ಲಿ ಗ್ರಾಹಕರ ಕೈ ಸೇರಬೇಕಿದ್ದ ಹೊಸ ಕಾರಿನ ಬಿಡುಗಡೆಯು ಕರೋನಾ ವೈರಸ್ ಭೀತಿಯಿಂದಾಗಿ ಮುಂದೂಡಿಕೆಯಾಗಿದೆ.

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಕರೋನಾ ವೈರಸ‌್‌ ಭೀತಿಯಿಂದಾಗಿ ಆಟೋ ಉದ್ಯಮವು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಆಟೋ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಹಲವಾರು ಹೊಸ ಕಾರು ಮಾದರಿಗಳ ಬಿಡುಗಡೆಯು ಮುಂದೂಡಿಕೆಯಾಗಿರುವುದಲ್ಲದೆ ಕೆಲ ಕಾರು ಮಾದರಿಗಳ ಬಿಡುಗಡೆಯ ಯೋಜನೆಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಿದ್ದು, ಟೊಯೊಟಾ ಕೂಡಾ ಅರ್ಬನ್ ಕ್ರೂಸರ್ ಬಿಡುಗಡೆ ಯೋಜನೆಯನ್ನು ಮುಂದೂಡಿಕೆ ಮಾಡಿದೆ.

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್ ಕಾರನ್ನು ಗ್ಲಾಂಝಾ ಎನ್ನುವ ಹೆಸರಿನೊಂದಿಗೆ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಮುಂಬರುವ ಮತ್ತಷ್ಟು ಹೊಸ ರೀಬ್ಯಾಡ್ಜ್ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿಯಾಗಿ ಅರ್ಬನ್ ಕ್ರೂಸರ್ ವರ್ಷಾಂತ್ಯಕ್ಕೆ ಇಲ್ಲವೇ 2021ರಲ್ಲಿ ಬಿಡುಗಡೆಯಾಗಲಿದೆ.

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಆರಂಭಿಕವಾಗಿ ರೂ.9 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಅರ್ಬನ್ ಕ್ರೂಸರ್ ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗಲಿರುವ ಹೊಸ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಅರ್ಬನ್ ಕ್ರೂಸರ್ ಮಾದರಿಯು ಇತ್ತೀಚೆಗೆ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ರೈಜ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆದುಕೊಂಡಿದ್ದು, ಮೂಲ ಮಾದರಿಯಾದ ವಿಟಾರಾ ಬ್ರೆಝಾಗಿಂತಲೂ ತುಸು ವಿಭಿನ್ನ ಹೋಲಿಕೆಯನ್ನು ಪಡೆದುಕೊಳ್ಳಲಿದೆ.

MOST READ: ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕಾರುಗಳಿವು

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಸೆಲ್ಟೊಸ್, ಕ್ರೆಟಾ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ನಿರ್ಮಾಣದ ಹೊಸ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಇನ್ನು ಜಾರಿಗೆ ಬಂದಿರುವ ಹೊಸ ಬಿಎಸ್-6 ನಿಯಮದಿಂದಾಗಿ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆ ತಂದಿರುವ ಟೊಯೊಟಾ ಕಂಪನಿಯು ಯಾರಿಸ್ ಸೆಡಾನ್‌ಗಿಂತಲೂ ಕೆಳಗಿನ ಬಹುತೇಕ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕಾರುಗಳನ್ನೇ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡಲು ನಿರ್ಧರಿಸಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕರೋನಾ ಭೀತಿ: ಮತ್ತಷ್ಟು ತಡವಾಗಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಬಿಡುಗಡೆ

ಸದ್ಯ ಟೊಯೊಟಾ ಕಂಪನಿಯು ಮಾರುತಿ ಸುಜುಕಿಯ ರೀಬ್ಯಾಡ್ಜ್ ಕಾರುಗಳ ಉತ್ಪಾದನೆಗಾಗಿ ಬೆಂಗಳೂರಿನ ಬಿಡದಿ ಘಟಕದಲ್ಲೇ ಅವಕಾಶ ನೀಡಿದ್ದು, ದಕ್ಷಿಣ ಭಾರತದಲ್ಲಿ ಹೊಸ ಕಾರು ಘಟಕ ಸ್ಥಾಪನೆ ಮುಂದಾಗಿದ್ದ ಮಾರುತಿ ಸುಜುಕಿ ಕಂಪನಿಗೆ ತನ್ನದೆ ಘಟಕದಲ್ಲೇ ಅವಕಾಶ ನೀಡುವ ಮೂಲಕ ಜಪಾನ್ ಬ್ರಾಂಡ್‌ಗಳು ಭಾರತದಲ್ಲಿ ಮತ್ತಷ್ಟು ಜನಪ್ರಿಯಗೊಳ್ಳುತ್ತಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Urban Cruiser SUV India Launch Delayed By A Few Months. Read in Kannada.
Story first published: Monday, June 29, 2020, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X