ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯ ಜೊತೆಗೆ ಟೊಯೊಟಾದೊಂದಿಗಿನ ರೀಬ್ಯಾಡ್ಜ್ ಆವೃತ್ತಿ ಅರ್ಬನ್ ಕ್ರೂಸರ್ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ಉತ್ಪಾದನಾ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಿದೆ.

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಕಾರುಗಳ ಮಾರಾಟವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಪರಿಣಾಮ ಇದೇ ಮೊದಲ ಬಾರಿಗೆ ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿಯು ಪೆಟ್ರೋಲ್ ಮತ್ತು ಪೆಟ್ರೋಲ್ ಸ್ಮಾರ್ಟ್ ಹೈಬ್ರಿಡ್ ಆವೃತ್ತಿಯನ್ನು ಅಭಿವೃದ್ದಿಗೊಳಿಸಿದೆ.

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ವಿಟಾರಾ ಬ್ರೆಝಾ ಪೆಟ್ರೋಲ್ ಮಾದರಿಯನ್ನು ಈಗಾಗಲೇ ಬಿಡುಗಡೆ ಮಾಡಿರುವ ಮಾರುತಿ ಸುಜುಕಿಯು ಇದೀಗ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಬ್ರೆಝಾ ಕಾರು ಮಾದರಿಯಲ್ಲಿ ಜೋಡಣೆ ಮಾಡಲಾಗಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 105-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಇದೇ ಎಂಜಿನ್ ಇದೀಗ ಎಸ್-ಕ್ರಾಸ್ ಮಾದರಿಯಲ್ಲಿ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದಲ್ಲದೆ ಟೊಯೊಟಾ ಜೊತೆಗೂಡಿ ಬಿಡುಗಡೆ ಮಾಡಲಾಗುತ್ತಿರುವ ರೀಬ್ಯಾಜ್ಡ್ ಅರ್ಬನ್ ಕ್ರೂಸರ್ ಮಾದರಿಯು ಕೂಡಾ ಇದೇ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಅರ್ಬನ್ ಕ್ರೂಸರ್ ಮಾದರಿಯು ಲೋಗೋ ಮತ್ತು ಮುಂಭಾಗದ ಗ್ರಿಲ್ ಡಿಸೈನ್ ಹೊರತುಪಡಿಸಿ ಬ್ರೆಝಾ ಪೆಟ್ರೋಲ್ ಮಾದರಿಯಲ್ಲಿರುವ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಿರಲಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಬಿಎಚ್‌ಪಿ ಉತ್ಪಾದನೆಯಲ್ಲಿ ತುಸು ಹೆಚ್ಚಳ ಮಾಡಬಹುದಾಗಿದೆ.

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಮಾರುತಿ ಸುಜುಕಿ ನಿರ್ಮಾಣದ ಬಲೆನೊ ಕಾರನ್ನು ಈಗಾಗಲೇ ಗ್ಲಾಂಝಾ ಎನ್ನುವ ಹೆಸರಿನೊಂದಿಗೆ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ರೀಬ್ಯಾಡ್ಜ್ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿಯಾಗಿ ಅರ್ಬನ್ ಕ್ರೂಸರ್ ರಸ್ತೆಗಿಳಿಸುತ್ತಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ರೀಬ್ಯಾಡ್ಜ್ ಕಾರು ಮಾದರಿಯಾಗಿ ಬಿಡುಗಡೆಯಾಗಲಿರುವ ಅರ್ಬನ್ ಕ್ರೂಸರ್ ಮಾದರಿಯ ಉತ್ಪಾದನೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿರುವ ಮಾರುತಿ ಸುಜುಕಿಯು, ಮೊದಲು ಎಸ್-ಕ್ರಾಸ್ ಮಾದರಿಯನ್ನ ತದನಂತರ ಅಗಸ್ಟ್ ಹೊತ್ತಿಗೆ ರೀಬ್ಯಾಡ್ಜ್ ಆವೃತ್ತಿಯನ್ನು ಟೊಯೊಟಾ ಜೊತೆಗೂಡಿ ಮಾರಾಟ ಮಾಡಲಿದೆ.

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಆರಂಭಿಕವಾಗಿ ರೂ.9 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಎಸ್-ಕ್ರಾಸ್ ಪೆಟ್ರೋಲ್ ಮತ್ತು ಅರ್ಬನ್ ಕ್ರೂಸರ್ ಉತ್ಪಾದನೆಗೆ ಸಿದ್ದವಾದ ಮಾರುತಿ ಸುಜುಕಿ

ಇನ್ನು ಸಹಭಾಗಿತ್ವದ ಯೋಜನೆ ಅಡಿ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಹೊಸ ವಾಹನಗಳ ಉತ್ಪಾದನಾ ವೆಚ್ಚ ತಗ್ಗಿಸುವ ಯೋಜನೆ ರೂಪಿಸಿದ್ದು, ಪ್ರೀಮಿಯಂ ಕಾರುಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಮಾರುತಿ ಸುಜುಕಿ ಬಳಕೆ ಮಾಡುವ ಬಿಡಿಭಾಗಗಳನ್ನು ಟೊಯೊಟಾ ಕಾರುಗಳನ್ನು ಬಳಕೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ.

Most Read Articles

Kannada
English summary
Toyota Urban Cruiser, Maruti S-Cross Petrol Production To start. Read in Kannada.
Story first published: Tuesday, May 19, 2020, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X