ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಟೊಯೊಟಾ ಬಹುನೀರಿಕ್ಷಿತ ವೆಲ್‌ಫೈರ್ ಐಷಾರಾಮಿ ಕಾರು ಮಾದರಿಯು ದೆಹಲಿ ಆಟೋ ಎಕ್ಸ್‌ಪೋ ಆರಂಭಕ್ಕೂ ಮುನ್ನವೇ ಬಿಡುಗಡೆಯ ಸುಳಿವು ನೀಡಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಟೊಯೊಟಾ ಡೀಲರ್ಸ್‌ಗಳಲ್ಲಿ ವೆಲ್‌ಫೈರ್ ಖರೀದಿಗೆ ಬುಕ್ಕಿಂಗ್ ಶುರುವಾಗಿದೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಮಲ್ಟಿ ಪ್ಯಾಸೆಂಜರ್ ವೆಹಿಕಲ್ ಮಾದರಿಯಾಗಿರುವ ವೆಲ್‌ಫೈರ್ ಕಾರು ಟೊಯೊಟಾ ನಿರ್ಮಾಣದ ಐಷಾರಾಮಿ ಕಾರು ಆವೃತ್ತಿಯಾಗಿದ್ದು, ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಈ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ. ಈ ಲಗ್ಷುರಿ ವ್ಯಾನ್ ಅನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿದ್ದು, ಇದೀಗ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಹಲವು ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ವೆಲ್‌ಫೈರ್ ಕಾರು ಟೊಯೊಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದ್ದು, ಕೇಂದ್ರ ಸರ್ಕಾರವು ಬದಲಾವಣೆ ಮಾಡಿರುವ ಆಮದು ನೀತಿಯ ಪರಿಣಾಮವೇ ಟೊಯೊಟಾ ಸೇರಿದಂತೆ ಹಲವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಐಷಾರಾಮಿ ವಾಹನಗಳನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿವೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಕೇಂದ್ರ ಸರ್ಕಾರವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದ್ದು, ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೇ ವಾರ್ಷಿಕವಾಗಿ 2,500 ವಾಹನಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಈ ಹಿನ್ನಲೆಯಲ್ಲಿ ಜಪಾನ್ ಆಟೋ ದಿಗ್ಗಜ ಸಂಸ್ಥೆಯಾದ ಟೊಯೊಟಾ ಸೇರಿದಂತೆ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ವಿದೇಶಿ ಮಾರುಕಟ್ಟೆಯಲ್ಲಿರುವ ತಮ್ಮ ಜನಪ್ರಿಯ ವಾಹನಗಳನ್ನು ಭಾರತದಲ್ಲೂ ಮಾರಾಟ ಮಾಡಲು ಸಿದ್ದವಾಗುತ್ತಿದ್ದು, ವೆಲ್‌ಫೈರ್ ಹಲವು ವಿಶೇಷತೆಗಳೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದೆ. ಟೊಯೊಟಾ ವೆಲ್‌ಫೈರ್ ಕಾರು ಈಗಾಗಲೇ ಆಯ್ದ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, 4,935 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,935 ಎಂಎಂ ಎತ್ತರವಿದೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಆರು ಆಸನ ಸೌಲಭ್ಯವಿರುವ ವೆಲ್‌ಫೈರ್ ಕಾರಿನಲ್ಲಿ ಪ್ರತಿ ಆಸನವು ಪ್ರತ್ಯೇಕ ಕಂಟ್ರೋಲ್ ಹೊಂದಿದ್ದು, ಆರಾಮದಾಯಕವಾಗಿ ಪ್ರಯಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇದು ಐಷಾರಾಮಿ ಪ್ರಯಾಣವನ್ನು ಬಯಸುವ ಗ್ರಾಹಕರಿಗೆ ವಿಶೇಷವಾಗಿ ನಿರ್ಮಾಣ ಮಾಡಲಾಗಿದ್ದು, ಬೆರಳತುದಿಯಲ್ಲೇ ಹಲವು ತಾಂತ್ರಿಕ ಸೌಲಭ್ಯಗಳು ಲಭ್ಯವಿರಲಿವೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ ಕೇವಲ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್ ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮಾದರಿಯು 150-ಬಿ‍‍ಹೆಚ್‍‍ಪಿ ಮತ್ತು 197-ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ನಾಲ್ಕು ಚಕ್ರಗಳಿಗೂ ಪ್ರತ್ಯೇಕವಾಗಿ ಪವರ್ ಒದಗಿಸುವ ಎಲೆಕ್ಟ್ರಿಕ್ ಸಿ‍‍ವಿ‍‍ಟಿ ಗೇರ್‍‍ಬಾಕ್ಸ್ ತಂತ್ರಜ್ಞಾನವನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಎಲ್‍ಇ‍‍ಡಿ ಹೆಡ್‍‍ಲೈಟ್, ಕಾರ್ನರಿಂಗ್ ಲೈಟ್, ಇನ್‍‍ಕ್ಯಾಂಡಿಸೆಂಟ್ ಲೈಟ್, ಇಂಡಿಕೇಟರ್ ಲೈಟ್, ವೆಂಟಿಲೇಟೆಡ್ ಸೀಟಿಂಗ್, ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮರಾ, ಡ್ಯುಯಲ್ ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಹಾಗೆಯೇ ಈ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ 7 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹಿಲ್ ಅಸಿಸ್ಟ್, ತ್ರಿ ಜೋನ್ ಆಟೋ ಕ್ಲೈಮೆಟ್ ಕಂಟ್ರೊಲ್, ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿ ಹಲವು ಸೆಫ್ಟಿ ಫೀಚರ್ಸ್‌ಗಳಿದ್ದು, ಭಾರತದಲ್ಲಿ ಬೆಲೆ ಕಡಿತಗೊಳಿಸುವುದಕ್ಕಾಗಿ ಕೆಲವು ಹೈ ಎಂಡ್ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಬಿಡುಗಡೆಗೆ ಸಜ್ಜಾದ ಟೊಯೊಟಾ ವೆಲ್‌ಫೈರ್- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು..

ಒಟ್ಟಿನಲ್ಲಿ ಹೊಸ ಟೊಯೊಟಾ ವೆಲ್‍‍ಫೈರ್ ಲಗ್ಷುರಿಯ ಎಂ‍ಪಿವಿಯ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಸದ್ಯ ಮಾರುಕಟ್ಟೆರುವ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್‌ಗೆ ಪೈಪೋಟಿ ನೀಡಲಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರವೇ ರೂ.75 ಲಕ್ಷದಿಂದ ರೂ.80 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
According to report, Toyota dealers have started pre bookings for Vellfire luxury MPV in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more