ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಟೊಯೊಟಾ ಯಾರಿಸ್

ಕೇಂದ್ರ ಸರ್ಕಾರವು ಇ-ಕಾಮರ್ಸ್ ವ್ಯಾಪಾರ ವಹಿವಾಟಿಗಾಗಿ ಪ್ರತ್ಯೇಕವಾದ ಇ-ಮಾರ್ಕೆಟ್‌ಪ್ಲೇಸ್ ಜಾಲತಾಣವನ್ನು ಹೊಂದಿದ್ದು, ಇತರೆ ಖಾಸಗಿ ಇ-ಕಾಮರ್ಸ್ ಮಳಿಗೆಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಆಟೋ ಮೊಬೈಲ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಇ-ಮಾರ್ಕೆಟ್‌ಪ್ಲೇಸ್‌ನಲ್ಲಿ ಇದೀಗ ಟೊಯೊಟಾ ನಿರ್ಮಾಣದ ಯಾರಿಸ್ ಸೆಡಾನ್ ಕಾರು ಸಹ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ರೂ.9.12 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ ಇದೇ ಕಾರನ್ನು ಶೋರೂಂನಲ್ಲಿ ನೇರವಾಗಿ ಖರೀದಿ ಮಾಡಿದ್ದಲ್ಲಿ ಆನ್‌ರೋಡ್ ಪ್ರಕಾರ ರೂ.10.74 ಲಕ್ಷ ಬೆಲೆ ಪಾವತಿ ಮಾಡಬೇಕಾಗುತ್ತದೆ. ಇದನ್ನು ಇ-ಮಾರ್ಕೆಟ್‌ಪ್ಲೇಸ್‌ನಲ್ಲಿ ಖರೀದಿ ಮಾಡಿದ್ದಲ್ಲಿ ಸಾಕಷ್ಟು ಉಳಿತಾಯವಾಗಲಿದೆ.

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಸದ್ಯ ಟೊಯೊಟಾ ಕಂಪನಿಯು ಇ-ಮಾರ್ಕೆಟ್‌ಪ್ಲೇಸ್‌ನಲ್ಲಿ ಯಾರಿಸ್ ಎಂಟ್ರಿ ಲೆವಲ್ ವೆರಿಯೆಂಟ್ ಅನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಹೊಸ ಕಾರನ್ನು ಫ್ಲಿಟ್ ಸರ್ವೀಸ್ ಮತ್ತು ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನಕ್ಕಾಗಿ ಖರೀದಿ ಮಾಡಬಹುದಾಗಿದೆ.

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಇ-ಮಾರ್ಕೆಟ್‌ಪ್ಲೇಸ್‌ನಲ್ಲಿ ಟೊಯೊಟಾ ಕಾರುಗಳು ಮಾತ್ರವಲ್ಲದೇ ಹಲವು ಕಾರು ಕಂಪನಿಗಳು ತಮ್ಮ ವಿವಿಧ ಬ್ರಾಂಡ್ ಕಾರನ್ನು ಮಾರಾಟ ಮಾಡುತ್ತಿದ್ದು, ಇ-ಮಾರ್ಕೆಟ್‌ಪ್ಲೇಸ್‌ನಲ್ಲಿ ಲಭ್ಯವಿರುವ ಕಾರು ಬೆಲೆಯು ಹೊರಗೆ ಖರೀದಿ ಮಾಡುವುದಕ್ಕಿಂತಲೂ ಸಾಕಷ್ಟು ಕಡಿಮೆ ಬೆಲೆ ಹೊಂದಿರುತ್ತವೆ.

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಎಜಿಐ ಅಡಿ ಕಾರ್ಯನಿರ್ವಹಿಸುವ ಪಬ್ಲಿಕ್ ಸೆಕ್ಟರ್ ಯುನಿಟ್ ವಿಭಾಗವು ಇ-ಮಾರ್ಕೆಟ್‌ಪ್ಲೇಸ್‌ ನಿರ್ವಹಣೆ ಮಾಡುತ್ತಿದ್ದು, ನೋಂದಾಯಿತ ಸಂಸ್ಥೆಗಳಿಗೆ ಮತ್ತು ಫ್ಲಿಟ್ ನಿರ್ವಹಣೆ ಮಾಡುವ ಕಂಪನಿಗಳಿಗೆ ಮಾತ್ರವೇ ಇಲ್ಲಿ ಖರೀದಿ ಅವಕಾಶವಿದೆ.

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಇನ್ನು ಟೊಯೊಟಾ ಕಂಪನಿಯು ತನ್ನ ಬಹುತೇಕ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಬಿಎಸ್-6 ಎಂಜಿನ್ ಮಾದರಿಗಳ ಬಿಡುಗಡೆಯ ನಂತರ ಇದು ಎರಡನೇ ಬಾರಿಗೆ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಹೊಸ ದರ ಪಟ್ಟಿದಲ್ಲಿ ಟೊಯೊಟಾ ಎಂಟ್ರಿ ಲೆವಲ್ ಸೆಡಾನ್ ಮಾದರಿಯಾದ ಯಾರಿಸ್ ಕೂಡಾ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಬೆಲೆ ಹೆಚ್ಚಳ ನಂತರ ಕಾರಿನ ಬೆಲೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.86 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನ ರೂ. 14.30 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಬೆಲೆ ಹೆಚ್ಚಳ ನಂತರ ಯಾರಿಸ್ ಕಾರಿನ ಬೆಲೆಯಲ್ಲಿ ಆರಂಭಿಕವಾಗಿ ರೂ. 10 ಸಾವಿರ ಮತ್ತು ಮಧ್ಯಮ ಕ್ರಮಾಂಕದ ಜೆ ಎಂಟಿ/ಸಿವಿಟಿ ಕಾರಿನ ಬೆಲೆಯಲ್ಲಿ ರೂ.1.68 ಲಕ್ಷ ಬೆಲೆ ಹೆಚ್ಚಿಸಲಾಗಿದ್ದು, ಯಾರಿಸ್ ಕೂಡಾ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕೇಂದ್ರ ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ನಲ್ಲೂ ಖರೀದಿಗೆ ಲಭ್ಯ ಯಾರಿಸ್

ಲಾಕ್‌ಡೌನ್ ಸಂಕಷ್ಟದಿಂದಾಗಿ ವಾಹನಗಳ ಬಿಡಿಭಾಗಗಳ ವೆಚ್ಚ ನಿರ್ವಹಣೆಯು ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ಟೊಯೊಟಾ ಸೇರಿದಂತೆ ಬಹುತೇಕ ಆಟೋ ಕಂಪನಿಗಳು ಬಿಎಸ್-6 ವಾಹನಗಳ ಬೆಲೆಯಲ್ಲಿ ಎರಡನೇ ಬಾರಿಗೆ ಬೆಲೆ ಹೆಚ್ಚಳ ಮಾಡಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Yaris Available On Government e-Marketplace. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X