ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ವೀಡಿಯೋ ಬಿಡುಗಡೆಗೊಳಿಸಿದ ಟೊಯೊಟಾ
ಟೊಯೊಟಾ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‍ಯುವಿಯಾದ ಯಾರೀಸ್ ಕ್ರಾಸ್ ಅನ್ನು ಇತ್ತೀಚೆಗೆ ಯುರೋಪಿನ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಟೊಯೊಟಾ ಕಂಪನಿಯು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಅಧಿಕೃತ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು 2020ರ ಜಿನೀವಾ ಮೋಟಾರು ಶೋನಲ್ಲಿ ಪ್ರದರ್ಶನ ಪಡಿಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ 2020ರ ಜಿನೀವಾ ಮೋಟಾರು ಶೋ ರದ್ದುಗೊಂಡಿತ್ತು. ಇದರಿಂದಾಗಿ ಈ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಪ್ರತ್ಯೇಕವಾಗಿ ಅನಾವರಣಗೊಳಿಸಲಾಗಿದೆ. ಯಾರೀಸ್ ಕ್ರಾಸ್ ಯೂರೋಪಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾರೀಸ್ ಹ್ಯಾಚ್‍ಬ್ಯಾಕ್ ಅನ್ನು ಆಧರಿಸಿದೆ. ಹೊಸ ಕಾಂಪ್ಯಾಕ್ಟ್ ಎಸ್‍ಯುವಿ ಕಂಪನಿಯ ಟಿಎನ್‌ಜಿಎ-ಬಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಜಪಾನ್ ಮೂಲದ ತಯಾರಕ ಕಂಪನಿಯಾದ ಟೊಯೊಟಾ ತನ್ನ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ವೀಡಿಯೋ ಬಿಡುಗಡೆಗೊಳಿಸಿದೆ. ಈ ವೀಡಿಯೋದಲ್ಲಿ ಕಾರಿನ ವಿನ್ಯಾಸ, ಎಂಜಿನ್, ಫೀಚರ್ ಗಳು ಮತ್ತು ಇತರ ಮಾಹಿತಿಗಳ ಬಗ್ಗೆ ವಿವರಿಸಿದ್ದಾರೆ.
MOST READ: ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಟೀಸರ್ ಬಿಡುಗಡೆ

ಯಾರೀಸ್ ಕ್ರಾಸ್ 4,180 ಎಂಎಂ ಉದ್ದ, 1765 ಎಂಎಂ ಅಗಲ, 1560 ಎಂಎಂ ಎತ್ತರ ಮತ್ತು 2560 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ಯಾರೀಸ್ ಕ್ರಾಸ್ ಜಾಗತಿಕವಾಗಿ ಜನಪ್ರಿಯ ಸಿ-ಎಚ್‌ಆರ್ ಕಾಂಪ್ಯಾಕ್ಟ್ ಎಸ್‍ಯುವಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ.

ಹೊಸ ಕಾಂಪ್ಯಾಕ್ಟ್ ಎಸ್‍ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟೊಯೊಟಾ ಎಸ್‍ಯಿವಿಗಳಿಗಿಂತ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗ ಟೊ-ಟೈರ್ ಗ್ರಿಲ್ ಅನ್ನು ಹೊಂದಿದೆ.
MOST READ: ಹೊಸ ಐ20 ಕಾರಿನ ವಾಕ್‍ರೌಂಡ್ ವೀಡಿಯೋ ಬಿಡುಗಡೆಗೊಳಿಸಿದ ಹ್ಯುಂಡೈ

ಈ ಹೊಸ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗೆ ಹೆಡ್ ಲ್ಯಾಂಪ್ ಮತ್ತು ಬಂಪರ್ ಕೆಳಭಾಗದಲ್ಲಿ ವೃತ್ತಾಕಾರದ ಫಾಂಗ್ ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಸ್ಕ್ವೇರ್ ಆಫ್ ವ್ಹೀಲ್ ಕಮಾನುಗಳು ಮತ್ತು ಬ್ಲ್ಯಾಕ್ ಪ್ಲೋಟಿಂಗ್ ರೂಪ್ ಅನ್ನು ಹೊಂದಿದೆ.

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಸ್ಲೀಕ್ ಟೇಲ್ ಲ್ಯಾಂಪ್ ಅನ್ನು ಹೊಂದಿದೆ, ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 18 ಇಂಚಿನ ವ್ಹೀಲ್ ಅನ್ನು ಅಳವಡಿಸಲಾಗಿದೆ. ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಂಬಿಯೆಂಟ್ ಲೈಟಿಂಗ್, ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ಡಿಸ್ ಪ್ಲೇ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೊಂದಿಗೆ ಆಕರ್ಷಕ ಇಂಟಿರಿಯರ್ ಅನ್ನು ಒಳಗೊಂಡಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6
ಇಂಟಿರಿಯರ್ ನಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆರಾಮದಾಯಕವಾಗಿ ದೂರ ಪ್ರಯಾಣ ಮಾಡಬಹುದು. ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ.

ಈ ಎಂಜಿನ್ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ. ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿನ್ಯಾಸವು ಆಕರ್ಷಕವಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.


Click it and Unblock the Notifications








