ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಮಾದರಿಗಳಲ್ಲಿ ಒಂದಾಗಿರುವ ಯಾರಿಸ್ ಫೇಸ್‌ಲಿಫ್ಟ್ ಮಾದರಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಮೊದಲ ಬಾರಿಗೆ ಫಿಲಿಫೀನ್ಸ್‌‌ನಲ್ಲಿ ಹೊಸ ಕಾರನ್ನು ಅನಾವರಣಗೊಳಿಸಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಭಾರತವನ್ನು ಹೊರತುಪಡಿಸಿ ವಿದೇಶಿ ಮಾರುಕಟ್ಟೆಗಳಲ್ಲಿ ವಿಯೊಸ್ ಹೆಸರಿನೊಂದಿಗೆ ಮಾರಾಟವಾಗುವ ಯಾರಿಸ್ ಕಾರು ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದು, ಹೊಸ ಕಾರು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಯಾರಿಸ್ ಸೆಡಾನ್ ಮಾದರಿಯು ಭಾರತದಲ್ಲಿ ಬಹುಬೇಡಿಕೆಯ ಕಾರು ಮಾದರಿ ಆಗಿಲ್ಲವಾದರೂ ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಫಿಲಿಫೀನ್ಸ್‌ನಲ್ಲಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಇದೀಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಿದ್ದವಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಯಾರಿಸ್ ಫೇಸ್‌ಲಿಫ್ಟ್ ಮಾದರಿಯು ಭಾರತದಲ್ಲೂ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಕರೋನಾ ವೈರಸ್ ಪರಿಣಾಮ ಹೊಸ ಕಾರಿನ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಆದರೆ ಕರೋನಾ ವೈರಸ್‌ನಿಂದಾಗಿ ಸಹಜ ಸ್ಥಿತಿಯತ್ತ ಮರಳಿರುವ ಫಿಲಿಫೀನ್ಸ್‌, ಥೈಲ್ಯಾಂಡ್‌ನಲ್ಲಿ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿರುವುದರಿಂದ ಅಲ್ಲಿ ಯಾರಿಸ್ ಫೇಸ್‌ಲಿಫ್ಟ್ ಕಾರು ಮಾದರಿಯನ್ನು ಅಗಸ್ಟ್ ಮಧ್ಯಂತರದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ವಿನ್ಯಾಸದಲ್ಲಿ ಈ ಬಾರಿ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಹೊಸ ಫೇಸ್‌ಲಿಫ್ಟ್ ಮಾದರಿಯಲ್ಲಿ ಈ ಬಾರಿ 2020ರ ಫಾರ್ಚೂನರ್ ವಿನ್ಯಾಸದ ಫ್ರಂಟ್ ಫಾಸಿಯಾ ವಿನ್ಯಾಸವನ್ನು ನೀಡಲಾಗಿದ್ದು, ಮರುವಿನ್ಯಾಸಗೊಳಿಸಲಾದ ಬಂಪರ್, ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ತರಲಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಹ್, ಫಾಗ್ ಲ್ಯಾಂಪ್‌ ಹೌಸಿಂಗ್ ನೀಡಲಾಗಿದ್ದು, ಹೊಸ ಕಾರನ ಹಿಂಭಾಗದ ವಿನ್ಯಾಸದಲ್ಲಿ ಈ ಹಿಂದಿನಂತೆಯೇ ಮುಂದುವರಿಸಲಾಗಿದೆ. ಇದರ ಜೊತೆಗೆ ಕಾರಿನ ಒಳ ವಿನ್ಯಾಸದಲ್ಲೂ ಕೆಲವು ಬದಲಾವಣೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ತಾಂತ್ರಿಕ ಅಂಶಗಳನ್ನೇ ಮುಂದುವರಿಸಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಇನ್ನು ಯಾರಿಸ್ ಕಾರು ಸದ್ಯ ಭಾರತದಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಫೇಸ್‌ಲಿಫ್ಟ್ ಮಾದರಿಯಲ್ಲೂ ಕೂಡಾ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-6 ಮಾದರಿಯನ್ನೇ ಮುಂದುವರಿಸಲಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಬಿಎಸ್-6 ಅಪ್‌ಡೇಟ್ ನಂತರ ಯಾರಿಸ್ ಕಾರಿನಲ್ಲಿ ಐದು ಮ್ಯಾನುವಲ್ ಮತ್ತು ಆರು ಆಟೋಮ್ಯಾಟಿಕ್ ಆವೃತ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಯಾರಿಸ್ ಕಾರು ಪೆಟ್ರೋಲ್ ಆವೃತ್ತಿಯನ್ನು ಮಾತ್ರ ಹೊಂದಿದೆ. ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮಾದರಿಯಲ್ಲೇ ಮ್ಯಾನುವಲ್ ಅಥವಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಖರೀದಿಸಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಭಾರತದಲ್ಲಿ ಬಿಡುಗಡೆಗೂ ಮುನ್ನ ಫಿಲಿಫೀನ್ಸ್‌ನಲ್ಲಿ ಅನಾವರಣಗೊಂಡ ಯಾರಿಸ್ ಫೇಸ್‌ಲಿಫ್ಟ್

ಬಿಎಸ್-6 ಎಂಜಿನ್ ನಂತರ ಸೆಡಾನ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.86 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನ ರೂ. 14.30 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಫೇಸ್‌ಲಿಫ್ಟ್ ಮಾದರಿಯು ಮತ್ತಷ್ಟು ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

Article Published On: Sunday, July 26, 2020, 8:45 [IST]
English summary
Toyota has introduced Vios facelift model in Philippines market today. It expected to launch in india with Yaris nameplate by end of this year.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+