ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಮಾದರಿಗಳಲ್ಲಿ ಒಂದಾಗಿರುವ ಯಾರಿಸ್ ಫೇಸ್‌ಲಿಫ್ಟ್ ಮಾದರಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಹೊಸ ಕಾರಿನ ಮೊದಲ ಟೀಸರ್ ಚಿತ್ರವನ್ನು ಬಹಿರಂಗಗೊಳಿಸಲಾಗಿದೆ.

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಯಾರಿಸ್ ಸೆಡಾನ್ ಮಾದರಿಯು ಭಾರತದಲ್ಲಿ ಬಹುಬೇಡಿಕೆಯ ಕಾರು ಮಾದರಿ ಆಗಿಲ್ಲವಾದರೂ ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಲ್ಲಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಇದೀಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಿದ್ದವಾಗಿದೆ. ಯಾರಿಸ್ ಫೇಸ್‌ಲಿಫ್ಟ್ ಮಾದರಿಯು ಭಾರತದಲ್ಲೂ ಬಿಡುಗಡೆಯಾಗಲಿದ್ದು, ಕರೋನಾ ವೈರಸ್ ಪರಿಣಾಮ ಹೊಸ ಕಾರಿನ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡುವ ಸಾಧ್ಯತೆಗಳಿವೆ.

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಆದರೆ ಕರೋನಾ ವೈರಸ್‌ನಿಂದಾಗಿ ಸಹಜ ಸ್ಥಿತಿಯತ್ತ ಮರಳಿರುವ ಥೈಲ್ಯಾಂಡ್‌ನಲ್ಲಿ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿರುವುದರಿಂದ ಅಲ್ಲಿ ಯಾರಿಸ್ ಫೇಸ್‌ಲಿಫ್ಟ್ ಅಗಸ್ಟ್ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರಿನ ವಿನ್ಯಾಸದಲ್ಲಿ ಈ ಬಾರಿ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಹೊಸ ಫೇಸ್‌ಲಿಫ್ಟ್ ಮಾದರಿಯಲ್ಲಿ ಈ ಬಾರಿ 2020ರ ಫಾರ್ಚೂನರ್ ಮಾದರಿಯಲ್ಲಿ ಫ್ರಂಟ್ ಫಾಸಿಯಾ ವಿನ್ಯಾಸವನ್ನು ನೀಡಲಾಗಿದ್ದು, ಮರವಿನ್ಯಾಸಗೊಳಿಸಲಾದ ಬಂಪರ್, ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ತರಲಾಗಿದೆ.

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಹ್, ಫಾಗ್ ಲ್ಯಾಂಪ್‌ ಹೌಸಿಂಗ್ ನೀಡಲಾಗಿದ್ದು, ಹೊಸ ಕಾರನ ಹಿಂಭಾಗದ ವಿನ್ಯಾಸದಲ್ಲಿ ಈ ಹಿಂದಿನಂತೆಯೇ ಮುಂದುವರಿಸಲಾಗಿದೆ. ಇದರ ಜೊತೆಗೆ ಕಾರಿನ ಒಳ ವಿನ್ಯಾಸದಲ್ಲೂ ಕೆಲವು ಬದಲಾವಣೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ತಾಂತ್ರಿಕ ಅಂಶಗಳನ್ನೇ ಮುಂದುವರಿಸಲಾಗಿದೆ.

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಇನ್ನು ಯಾರಿಸ್ ಕಾರು ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಫೇಸ್‌ಲಿಫ್ಟ್ ಮಾದರಿಯಲ್ಲೂ ಕೂಡಾ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-6 ಮಾದರಿಯನ್ನೇ ಮುಂದುವರಿಸಲಿದೆ. ಭಾರತದಲ್ಲಿ ಸದ್ಯ ಯಾರಿಸ್ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಬಿಎಸ್-6 ಅಪ್‌ಡೇಟ್ ನಂತರ ಯಾರಿಸ್ ಕಾರಿನಲ್ಲಿ ಐದು ಮ್ಯಾನುವಲ್ ಮತ್ತು ಆರು ಆಟೋಮ್ಯಾಟಿಕ್ ಆವೃತ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಮೇಲೆ ಹೇಳಿದ ಹಾಗೆ ಯಾರಿಸ್ ಕಾರು ಪೆಟ್ರೋಲ್ ಆವೃತ್ತಿಯನ್ನು ಮಾತ್ರ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮ್ಯಾನುವಲ್ ಅಥವಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಮಾತ್ರವೇ ಖರೀದಿಸಬಹುದಾಗಿದೆ.

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಈ ಮೊದಲು ಮ್ಯಾನುವಲ್ ಆವೃತ್ತಿಯಲ್ಲಿ ಏಳು ಮತ್ತು ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಏಳು ವೆರಿಯೆಂಟ್ ಹೊಂದಿದ್ದ ಯಾರಿಸ್ ಕಾರು ಬಿಎಸ್-6 ನಂತರ ಮ್ಯಾನುವಲ್ ವರಿಯೆಂಟ್‌ನಲ್ಲಿ ವಿ, ವಿಎಕ್ಸ್ ಸ್ಥಗಿತಗೊಳಿಸಲಾಗಿದ್ದು, ಆಟೋಮ್ಯಾಟಿಕ್ ಆವೃತ್ತಿಯಲ್ಲಿ ವಿ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆಯಾಗಲಿರುವ ಯಾರಿಸ್ ಫೇಸ್‌ಲಿಫ್ಟ್ ಟೀಸರ್ ಅನಾವರಣ

ಹೊಸ ಎಂಜಿನ್ ನಂತರ ಸೆಡಾನ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.86 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನ ರೂ. 14.30 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಹೊಸ ಕಾರು ಬಿಎಸ್-4 ಮಾದರಿಗಿಂತಲೂ ಭಾರೀ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಪಡೆದುಕೊಂಡಿದೆ.

Most Read Articles

Kannada
English summary
Toyota Yaris Facelift Teased Ahead Of International Unveil. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X