ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಕರೋನಾ ವೈರಸ್‌ ವಿಶ್ವಾದ್ಯಂತವಿರುವ ಕೋಟ್ಯಂತರ ಜನರ ಜೀವನವನ್ನು ತತ್ತರಿಸುವಂತೆ ಮಾಡಿದೆ. ಅದರಲ್ಲೂ ಪ್ರತಿದಿನದ ಆದಾಯವನ್ನೇ ನಂಬಿಕೊಂಡಿರುವ ಜನರಿಗೆ ಹೆಚ್ಚಿನ ಹಾನಿಯನ್ನುಂಟು ಮಾಡಿದೆ. ಇವರಲ್ಲಿ ಕೂಲಿ ಕಾರ್ಮಿಕರು, ಟ್ರಕ್ ಚಾಲಕರು ಮುಂತಾದವರು ಸೇರಿದ್ದಾರೆ.

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ದೇಶಾದ್ಯಂತ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಟ್ರಕ್ ಚಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟವನ್ನು ಎದುರಿಸಿದವರಲ್ಲಿ ಟ್ರಕ್ ಡ್ರೈವರ್‌ಗಳು ಸಹ ಸೇರಿದ್ದಾರೆ. ದೇಶದ ಪ್ರತಿಷ್ಠಿತ ಆಟೋ ಮೊಬೈಲ್ ಕಂಪನಿಯಾದ ಟಾಟಾ ಮೋಟಾರ್ಸ್ ಟ್ರಕ್ ಚಾಲಕರ ನೆರವಿಗೆ ಧಾವಿಸಿದೆ.

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಟ್ರಕ್ ಚಾಲಕರಿಗೆ ದೇಶದ ಮೂಲೆ ಮೂಲೆಗೆ ಅಗತ್ಯ ವಸ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸಲು ನೆರವಾಗುತ್ತಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ಸಣ್ಣ ಸಾರಿಗೆ ಹಾಗೂ ಫ್ಲೀಟ್ ಆಪರೇಟರ್‌ಗಳೊಂದಿಗೂ ಕಾರ್ಯನಿರ್ವಹಿಸುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಹಲವಾರು ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ಹಾಗೂ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲಿ ಶರತಿ ಆಶ್ರಮ ಕೇಂದ್ರಗಳನ್ನು ತೆರೆದಿದೆ. ಈ ಕೇಂದ್ರಗಳಲ್ಲಿ ಟ್ರಕ್ ಚಾಲಕರಿಗೆ ಬಿಸಿ ಬಿಸಿಯಾದ ಆಹಾರ, ಕುಡಿಯುವ ನೀರಿನ ಜೊತೆಗೆ ಫೇಸ್ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ಒದಗಿಸಲಾಗುತ್ತಿದೆ.

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‌ನ ಈ ಅಭಿಯಾನದಿಂದ ಸಾವಿರಾರು ಟ್ರಕ್ ಚಾಲಕರು ಲಾಭ ಪಡೆದಿದ್ದಾರೆ. ಟಾಟಾ ಮೋಟಾರ್ಸ್ ಟ್ರಕ್ಕರ್‌ಗಳು ಹಾಗೂ ಸಾಗಣೆದಾರರಿಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶೇಷ ಟೋಲ್-ಫ್ರೀ ಸಹಾಯವಾಣಿ 1800209797 ಸಂಖ್ಯೆಯನ್ನು ಬಿಡುಗಡೆಗೊಳಿಸಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಟ್ರಕ್ ಚಾಲಕರು ಯಾವುದೇ ಸಮಯದಲ್ಲಿ ಈ ನಂಬರ್ ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ದೇಶದ ಪ್ರಮುಖ ಸಾರಿಗೆ ಕೇಂದ್ರಗಳು ಹಾಗೂ ಕಾರಿಡಾರ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟ್ರಕ್ ಚಾಲಕರ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲು 900 ತುರ್ತು ಪ್ರತಿಕ್ರಿಯೆ ತಂಡವನ್ನು ರಚಿಸಲಾಗಿದೆ.

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‌ನ ವಿಶೇಷ ತಂಡವು ತಕ್ಷಣವೇ ಟ್ರಕ್‌ಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಈ ತಂಡಗಳು ಇದುವರೆಗೂ 10,000ಕ್ಕೂ ಹೆಚ್ಚು ಟ್ರಕ್ ಚಾಲಕರಿಗೆ ನೆರವನ್ನು ನೀಡಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಲಾರಿಗಳು ಹಾಗೂ ಸಣ್ಣ ವಾಹನಗಳ ದುರಸ್ತಿ ಮತ್ತು ಸೇವೆಗಾಗಿ ಸೇವಾ ಕೇಂದ್ರಗಳನ್ನು ವೇಗವಾಗಿ ತೆರೆಯಲಾಗುತ್ತಿದೆ. ಟಾಟಾ ಮೋಟಾರ್ಸ್, ಲಾಕ್‌ಡೌನ್ ವೇಳೆಯಲ್ಲಿ ಅವಧಿ ಮೀರಿದ ಗ್ರಾಹಕರಿಗಾಗಿ ವಾರಂಟಿ ಹಾಗೂ ಫ್ರೀ ಸರ್ವೀಸ್ ಸೇವೆಗಳನ್ನು ವಿಸ್ತರಿಸಿದೆ.

ಸಂಕಷ್ಟದಲ್ಲಿರುವ ಟ್ರಕ್ ಚಾಲಕರ ನೆರವಿಗೆ ಧಾವಿಸಿದ ಟಾಟಾ ಮೋಟಾರ್ಸ್

ಹೊಸ ವಾಹನಗಳನ್ನು ಸುಲಭವಾಗಿ ಖರೀದಿಸಲು ಟಾಟಾ ಮೋಟಾರ್ಸ್ ಆಕರ್ಷಕ ಹಣಕಾಸು ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ವಾಹನವನ್ನು ಖರೀದಿಸಿದ ನಂತರ ಪಾವತಿಸುವ ಸೌಲಭ್ಯವನ್ನು ನೀಡಲಾಗುತ್ತದೆ. ಇದರ ಜೊತೆಗೆ ಕೈಗೆಟುಕುವ ಇಎಂಐ ಆಯ್ಕೆಗಳನ್ನು ಪರಿಚಯಿಸಲಾಗಿದೆ.

Most Read Articles

Kannada
English summary
Truck Drivers get support from Tata Motors. Read in Kannada.
Story first published: Thursday, June 18, 2020, 9:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X