ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಇತ್ತೀಚಿನ ಅಧ್ಯಯನದ ಪ್ರಕಾರ ಹೊಸ ವಾಹನಗಳ ಮಾರಾಟದಲ್ಲಿ ಎಲೆಕ್ಟ್ರಿಕ್ ವಾಹನಗಳು 30%ನಷ್ಟು ಪಾಲನ್ನು ಹೊಂದಿದರೆ ಭಾರತವು 2030ರ ವೇಳೆಗೆ ಕಚ್ಚಾ ತೈಲ ಆಮದಿನ ಮೇಲೆ ಮಾಡುತ್ತಿರುವ ಹಣದಲ್ಲಿ ವರ್ಷಕ್ಕೆ 1 ಟ್ರಿಲಿಯನ್ ರೂಪಾಯಿ ಅಂದರೆ 14 ಬಿಲಿಯನ್ ಅಮೆರಿಕನ್ ಡಾಲರ್ ಗಳನ್ನು ಉಳಿಸಬಹುದು ಎಂದು ಹೇಳಲಾಗಿದೆ.

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ ಮೆಂಟ್ ಹಾಗೂ ವಾಟರ್ (ಸಿಇಇಡಬ್ಲ್ಯೂ) ಈ ಬಗ್ಗೆ ಅಧ್ಯಯನ ನಡೆಸಿ ಅದರ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಪವರ್‌ಟ್ರೇನ್, ಬ್ಯಾಟರಿ ಹಾಗೂ ಸಾರ್ವಜನಿಕ ಚಾರ್ಜರ್‌ಗಳ ಒಟ್ಟು ಮಾರುಕಟ್ಟೆ ಪಾಲು 2 ಟ್ರಿಲಿಯನ್ ರೂಪಾಯಿಗಳಿಗಿಂತ ಹೆಚ್ಚು ಅಂದರೆ 28 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ವಹಿವಾಟು ನಡೆಸುವ ನಿರೀಕ್ಷೆಗಳಿವೆ.

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಈ ವಲಯದಲ್ಲಿ ಹೆಚ್ಚುವರಿಯಾಗಿ 1.20 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಬ್ಯಾಟರಿ ಮರುಬಳಕೆ ಹಾಗೂ ಟೆಲಿಮ್ಯಾಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುವುದು ಅಧ್ಯಯನದಲ್ಲಿ ಕಂಡುಬಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಈ ವಾಹನಗಳಿಂದ ಪರಿಸರಕ್ಕೂ ಅನುಕೂಲವಾಗಲಿದೆ. ಇವುಗಳಲ್ಲಿ ನೈಟ್ರೊಜನ್ ಆಕ್ಸೈಡ್ ಹಾಗೂ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣವು 17%ನಷ್ಟು, ಕಾರ್ಬನ್ ಮಾನಾಕ್ಸೈಡ್ ಹೊರಸೂಸುವಿಕೆ ಪ್ರಮಾಣವು 18%ನಷ್ಟು ಹಾಗೂ ಗ್ರೀನ್ ಹೌಸ್ ಗ್ಯಾಸ್ ಹೊರಸೂಸುವಿಕೆ ಪ್ರಮಾಣವು 4%ನಷ್ಟು ಕಡಿಮೆಯಾಗಲಿದೆ.

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದಾಗಿ ಭಾರತಕ್ಕೆ ಆರ್ಥಿಕವಾಗಿ ಪ್ರಯೋಜನವಾಗುವುದರ ಜೊತೆಗೆ, ಪರಿಸರಕ್ಕೂ ಅನುಕೂಲವಾಗುವುದು ದೃಢಪಟ್ಟಿದೆ. ಭಾರತವು ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಕಚ್ಚಾ ತೈಲ ಆಮದಿಗಾಗಿ ಭಾರೀ ಪ್ರಮಾಣದಲ್ಲಿ ಹಣವನ್ನು ವ್ಯಯಿಸುತ್ತಿರುವುದರಿಂದ ಆರ್ಥಿಕ ಸಮಸ್ಯೆಯು ಎದುರಾಗುತ್ತಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ.

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಭಾರತದ ವಾಯುಮಾಲಿನ್ಯ ಸಮಸ್ಯೆಗೆ ಎಲೆಕ್ಟ್ರಿಕ್ ವಾಹನಗಳು ಪರಿಹಾರವಾಗಲಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಎಲೆಕ್ಟ್ರಿಕ್ ವಾಹನಗಳಿಗೆ ರಿಜಿಸ್ಟ್ರೇಷನ್ ಶುಲ್ಕ ಹಾಗೂ ರಸ್ತೆ ತೆರಿಗೆಯಿಂದ ವಿನಾಯಿತಿಯನ್ನು ಸಹ ನೀಡಲಾಗುತ್ತದೆ. ಈ ರೀತಿಯ ಕ್ರಮಗಳಿಂದಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಉಳಿಸಬಲ್ಲವು ಎಲೆಕ್ಟ್ರಿಕ್ ವಾಹನಗಳು

ಪ್ರಮುಖ ವಾಹನ ತಯಾರಕ ಕಂಪನಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Use of electric vehicles can save Rs 1 Lakh crore annually. Read in Kannada.
Story first published: Tuesday, November 10, 2020, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X