ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಖ್ಯಾತ ಕ್ರಿಕೆಟಿಗನ ಸಹೋದರ
ಕರೋನಾ ವೈರಸ್ ಭಯದಿಂದಾಗಿ ಒಂದು ರೀತಿಯ ಜಡತ್ವವನ್ನು ಎದುರಿಸುತ್ತಿದ್ದ ಭಾರತೀಯರು ಈಗ ಮೊದಲಿನಂತೆ ಓಡಾಡಲು ಆರಂಭಿಸಿದ್ದಾರೆ. ಈ ನಡುವೆ ಜನಪ್ರಿಯ ಕ್ರಿಕೆಟಿಗರೊಬ್ಬರ ಸಹೋದರರೊಬ್ಬರು ದುಬಾರಿ ಪೋರ್ಷೆ ಪನಾಮೆರಾ ಟರ್ಬೊ ಕಾರ್ ಅನ್ನು ಖರೀದಿಸಿದ್ದಾರೆ. ಈ ಕಾರಿನ್ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 306 ಕಿ.ಮೀಗಳಾಗಿದೆ.

ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಸಹೋದರನೇ ಈ ದುಬಾರಿ, ಅಲ್ಟ್ರಾ-ಐಷಾರಾಮಿ ಕಾರನ್ನು ಖರೀದಿಸಿದವರು. ಇತ್ತೀಚಿಗೆ ಈ ಕಾರ್ ಅನ್ನು ವಿರಾಟ್ ಕೊಹ್ಲಿಯವರ ಸಹೋದರ ವಿಕಾಶ್ ಕೊಹ್ಲಿಯವರಿಗೆ ವಿತರಿಸಲಾಯಿತು. ವಿರಾಟ್ ಕೊಹ್ಲಿ ಕ್ರಿಕೆಟ್ ಜೊತೆಗೆ ಕಾರುಗಳ ಬಗ್ಗೆ ವಿಪರೀತ ಕ್ರೇಜ್ ಹೊಂದಿದ್ದಾರೆ. ಇದಕ್ಕೆ ಅವರ ಗ್ಯಾರೇಜ್‌ನಲ್ಲಿರುವ ಕಾರುಗಳೇ ಸಾಕ್ಷಿಯಾಗಿವೆ. ವಿರಾಟ್ ಕೊಹ್ಲಿಯವರ ಬಳಿ ಅನೇಕ ಪ್ರಮುಖ ಕಂಪನಿಗಳ ಐಷಾರಾಮಿ ಕಾರುಗಳಿವೆ.

ವಿರಾಟ್ ಕೊಹ್ಲಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ಆಡಿ ಎಸ್ 5, ಆಡಿ ಆರ್‌ಎಸ್ 5, ಆಡಿ ಆರ್ 8, ಆಡಿ ಕ್ಯೂ 8 ಸೇರಿದಂತೆ ಹಲವಾರು ದುಬಾರಿ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಆಡಿ ಕಂಪನಿಯು ವಿರಾಟ್ ಕೊಹ್ಲಿಯವರನ್ನು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿರುವ ಕಾರಣಕ್ಕೆ ಕೊಹ್ಲಿ ಹೆಚ್ಚಿನ ಸಂಖ್ಯೆಯ ಆಡಿ ಕಾರುಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿಯವರ ಸಹೋದರ ವಿಕಾಶ್ ಕೊಹ್ಲಿ ಖರೀದಿಸಿರುವ ಪೋರ್ಷೆ ಪನಾಮೆರಾ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.93 ಕೋಟಿಗಳಾಗಿದೆ.

ಪೋರ್ಷೆ ಪನಾಮೆರಾ ಹಲವಾರು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ವಿಕಾಶ್ ಕೊಹ್ಲಿ ಖರೀದಿಸಿರುವ ಪೋರ್ಷೆ ಪನಾಮೆರಾ ಎರಡನೇ ತಲೆಮಾರಿನ ಕಾರ್ ಆಗಿದೆ. ಈ ಕಾರಿನಲ್ಲಿ ಮೊದಲ ತಲೆಮಾರಿನ ಕಾರಿಗಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್ ಅಳವಡಿಸಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಎಂಜಿನ್‌ನಲ್ಲಿ ಚಾಸಿಸ್ ಡಿಸೈನ್ ಹಾಗೂ ಟ್ರಾನ್ಸ್‌ಮಿಷನ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಪೋರ್ಷೆ ಕಂಪನಿಯು ಈ ಕಾರಿನ ಇಂಟಿರಿಯರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

ಡ್ರೈವರ್ ಹಾಗೂ ಪ್ರಯಾಣಿಕರು ಕಾರಿನೊಳಗೆ ಬಂದಾಗ ಅವರನ್ನು ವೆಲ್‌ಕಂ ಮಾಡುವ ಧ್ವನಿ ಎದುರಾಗುತ್ತದೆ. ಈ ಕಾರಿನಲ್ಲಿ ಹೊಸ ಸ್ಕ್ರೀನ್, ಟಚ್ ಪವರ್ ಟೂಲ್‌ಗಳನ್ನು ನೀಡಲಾಗಿದೆ. ಪೋರ್ಷೆ 918 ಸ್ಪೈಡರ್ ಕಾರಿನಲ್ಲಿಯೂ ಇದೇ ರೀತಿಯ ಫೀಚರ್‌ಗಳನ್ನು ನೀಡಲಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಕಾರ್ ಅನ್ನು ನಾಲ್ಕು ಡೋರ್‌ಗಳ ಮಾದರಿಯಲ್ಲಿ ಮಾರಾಟ ಮಾಡಲಾಗುವುದು. ಈ ಕಾರು ಕೇವಲ 3.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸೆಲರೇಟ್ ಮಾಡುತ್ತದೆ. ಪೋರ್ಷೆ ಪನಾಮೆರಾ ಕಾರಿನಲ್ಲಿ 4.0-ಲೀಟರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 5,750 ಆರ್‌ಪಿಎಂನಲ್ಲಿ 550 ಬಿಹೆಚ್‌ಪಿ ಪವರ್ ಹಾಗೂ 4,500 ಆರ್‌ಪಿಎಂನಲ್ಲಿ 770 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮೊದಲ ತಲೆಮಾರಿನ ಕಾರಿಗಿಂತ ಈ ಕಾರು 30 ಬಿಹೆಚ್‌ಪಿ ಹೆಚ್ಚು ಪವರ್ ಹಾಗೂ 70 ಹೆಚ್ಚು ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಕಾರನ್ನು ವಿಕಾಶ್ ಕೊಹ್ಲಿಯವರಿಗೆ ವಿತರಿಸುವಾಗ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಹೊಸ ವಾಹನಗಳನ್ನು ಮಾರಾಟ ಮಾಡುವಾಗ ಕಾರು ತಯಾರಕ ಕಂಪನಿಗಳು ಹಾಗೂ ಡೀಲರ್‌ಗಳು ಹೆಚ್ಚಿನ ಸುರಕ್ಷತೆಯನ್ನು ಪಾಲಿಸುತ್ತಿದ್ದಾರೆ.


Click it and Unblock the Notifications








