ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಟಿಎಸ್‌ಐ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಪೊಲೊ ಮತ್ತು ವೆಂಟೊ ಟಿಎಸ್‌ಐ ಆವೃತ್ತಿಗಳು 'ಹೈಲೈನ್ ಪ್ಲಸ್' ಟ್ರಿಮ್ ಅನ್ನು ಆಧರಿಸಿವೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಫೋಕ್ಸ್‌ವ್ಯಾಗನ್ ಪೋಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಕಾರುಗಳ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.7.89 ಲಕ್ಷ ಮತ್ತು ರೂ.10.99 ಲಕ್ಷಗಳಾಗಿದೆ. ಎರಡು ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಮಾದರಿಗಳು ಸೀಮಿತ ಆವೃತ್ತಿಯಾಗಿದೆ. ಎರಡು ಕಾರುಗಳು ಕಾಸ್ಮೆಟಿಕ್ ನವೀಕರಣಗಳು ಮತ್ತು ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದೆ. ಮ್ಯಾಕನಿಕಲ್ ಅಂಶಗಳು ಒಂದೇ ಆಗಿದ್ದು, ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಕಾಸ್ಮೆಟಿಕ್ ನವೀಕರಣಗಳ ವಿಷಯದಲ್ಲಿ, ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಸೀಮಿತ ಮಾದರಿಗಳು ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ಡ್-ಔಟ್, ಒಆರ್‌ವಿಎಂಗಳು, ಬ್ಲ್ಯಾಕ್ ರೂಫ್ ಮತ್ತು ಸ್ಪಾಯ್ಲರ್ಗಳು, ಸ್ಟೈಲಿಶ್ ಹನಿಕ್ಯೂಬ್ ಗ್ರಿಲ್ ಮತ್ತು ಪ್ರಯಾಣಿಕರ ಡೋರ್ ನಲ್ಲಿ ದಪ್ಪ ಟಿಎಸ್‌ಐ ಬ್ಯಾಡ್ಜ್ ಗ್ರಾಫಿಕ್ಸ್ ಅನ್ನು ಒಳಗೊಂಡಿವೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಪೊಲೊ ಮಾದರಿಗಳಲ್ಲಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಪೊಲೊ ಮತ್ತು ವೆಂಟೊ ಮಾದರಿಗಳಳಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹಿಂದಿನ ಮಾದರಿಗಳಲ್ಲಿ ಇದ್ದ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಬದಲಾಯಿಸಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ನಿರ್ದೇಶಕ ಸ್ಟೆಫೆನ್ ನ್ಯಾಪ್ ಮಾತನಾಡಿ, ನಮ್ಮ ಜಾಗತಿಕವಾಗಿ ಪ್ರಸಿದ್ಧವಾದ ಟಿಎಸ್‌ಐ ತಂತ್ರಜ್ಞಾನವನ್ನು ಗ್ರಾಹಕರಿಗೆ ವಿಶ್ವಾಸಾರ್ಹತೆ ಮತ್ತು ಬೆಸ್ಪೋಕ್ ಚಾಲನಾ ಅನುಭವವನ್ನು ತರುವ ಪೆಟ್ರೋಲ್ ಎಂಜಿನ್‌ಗಳನ್ನು ಜರ್ಮನ್ ಎಂಜಿನಿಯರ್ ಗಳು ಅದ್ಭುತವಾಗಿ ತಯಾರಿಸಿದ್ದಾರೆಎಂದು ಹೇಳಿದರು.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಹೊಸ ಪೊಲೊ ಮಾದರಿಯ ಎಂಜಿನ್ ಪ್ರತಿ ಲೀಟರ್ ಗೆ 18.24 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ವೆಂಟೊ ಮಾದರಿಯು ಪ್ರತಿ ಲೀಟರ್ ಗೆ 17.69 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಹೊಸ ಸೀಮಿತ ಆವೃತ್ತಿಗಳಾದ ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಮಾದರಿಗಳಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಕಾರನ್ನು ಖರೀದಿಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದಾಗಿದೆ.

ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಫೋಕ್ಸ್‌ವ್ಯಾಗನ್ ಪೋಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಕಾರುಗಳು ಕೇವಲ ಕಾಸ್ಮೆಟಿಕ್ ನವೀಕರಣವನ್ನು ಮಾತ್ರ ಮಾಡಲಾಗಿದೆ. ಪೊಲೊ ಮತ್ತು ವೆಂಟೊ ಜರ್ಮನ್ ಬ್ರಾಂಡ್‌ನ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಗಳಾಗಿವೆ.

More from DriveSpark

Article Published On: Monday, May 11, 2020, 20:08 [IST]
English summary
Volkswagen Polo & Vento TSI Limited-Edition Models Launched: Prices Start At Rs 7.89 Lakh. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+