ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ ಮಾಹಿತಿ ಬಹಿರಂಗ
ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಟಾವೊಸ್ ಎಂಬ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ಒಂದಾಗಿದೆ.

ಈ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯು 2020ರ ಅಕ್ಟೋಬರ್ 13ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣವಾಗಲಿದೆ. ಈ ಹೊಸ ಮಿಡ್ ಎಸ್‍ಯುವಿಯು ಟಿಗ್ವಾನ್ ಎಸ್‍ಯುವಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಅಮೆರಿಕದ ಫೋಕ್ಸ್‌ವ್ಯಾಗನ್ ಹಿರಿಯ ಉಪಾಧ್ಯಕ್ಷ ಹೆನ್ ಶಾಫರ್ ಅವರು ಇತ್ತೀಚೆಗೆ ಮಾತನಾಡಿ, ಹೊಸ ಮಿಡ್ ಎಸ್‍ಯುವಿಯನ್ನು ಹೆಸರನ್ನು ಘೋಷಿಸಲು ಸಂತಸವಾಗುತ್ತಿದೆ.

ನ್ಯೂ ಮೆಕ್ಸಿಕೊದ ಟಾವೊಸ್ ಪಟ್ಟಣದ ಹೆಸರನ್ನು ಹೊಸ ಮಿಡ್ ಎಸ್‍ಯುವಿಗೆ ಇಡಲಾಗಿದೆ. ಅಡ್ವೆಂಜರ್ ಆರ್ಟ್ ಡಿಸೈನ್ ಹೊಂದಿರುವ ಆಕರ್ಷಕ ಎಸ್‍ಯುವಿಯಾಗಿದೆ ಟಾವೊಸ್ ಎಂದು ಅವರು ಹೇಳಿದರು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದೀಗ ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯ ಎಂಜಿನ್ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ ಇಎ 211 ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 158 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಹೊಸ ಎಂಜಿನ್ ಗಾತ್ರದಲ್ಲಿ 1.4 ರಿಂದ 1.5-ಲೀಟರ್ ವರೆಗೆ ಹೆಚ್ಚಾಗುತ್ತದೆ ಮತ್ತು ಅತ್ಯುತ್ತಮ ಮೈಲೇಜ್ ಅನ್ನು ನೀಡುತ್ತದೆ ಎಂದು ವರದಿಗಳಾಗಿದೆ. ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯ ಟೀಸರ್ ಚಿತ್ರದಲ್ಲಿ ತೆಳುವಾದ ಎಲ್ಇಡಿ ಲೈಟ್ ಗಳನ್ನು ಹೊಂದಿರುವ ಹೆಡ್‌ಲೈಟ್‌ಗಳು ಮತ್ತು ಎಸ್‍ಯುವಿ ಮೇಲಿನ ಭಾಗದ ಸಿಲೂಯೆಟ್ ಟಿ-ಕ್ರಾಸ್ ಮಾದರಿಗಿಂತ ಭಿನ್ನವಾಗಿ ಕಾಣುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯನ್ನು ನಿರ್ದಿಷ್ಟವಾಗಿ ಉತ್ತರ ಅಮೆರಿಕಾದ ಮಾರುಕಟ್ಟೆಗೆ ವಿನ್ಯಾಸಗೊಳಿಸಲಾಗಿದೆ. ಟಾವೊಸ್ ಚೀನಾದ ಥಾರು ಎಸ್‍ಯುವಿಯನ್ನು ಆಧರಿಸಿ ಅಭಿವೃದ್ದಿ ಪಡಿಸಲಾಗಿದೆ.

ಆದರೆ ಥಾರು ಎಸ್‍ಯುವಿಗೆ ಹೋಲಿಸಿದರೆ ಟಾವೊಸ್ ಕೆಲವು ವಿನ್ಯಾಸ ಬದಲಾವಣೆಗಳನ್ನು ಹೊಂದಿರುತ್ತದೆ. ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯು ಚೀನಾದ ತಾರೆಕ್ ಮತ್ತು ಥಾರು ಎಸ್‍ಯುವಿಗಳಿಗಿಂತ ಭಿನ್ನವಾಗಿ ಟೀಸರ್ ನಲ್ಲಿ ಕಾಣುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯ ಮುಂಭಾಗದಲ್ಲಿ ಎಲ್‌ಇಡಿಗಳ ಸ್ಟ್ರಿಪ್ ಅನ್ನು ಹೊಂದಿದೆ. ಹೊಸ ಟಾವೊಸ್ ಮಿಡ್ ಎಸ್‍ಯುವಿಯು ಮೆಕ್ಸಿಕೊದ ವಿಡಬ್ಲ್ಯೂ ಗ್ರೂಪ್‌ನ ಪ್ಯೂಬ್ಲಾ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ನಿರೀಕ್ಷೆಯಿದೆ, ಪ್ಯೂಬ್ಲಾ ಕಾರ್ಖಾನೆಯನ್ನು ಮೊದಲು ಬೀಟಲ್ ಉತ್ಪಾದಿಸಲು ಬಳಸಲಾಗುತ್ತಿತ್ತು.

ಈ ಹೊಸ ಟಾವೊಸ್ ಮಿಡ್ ಎಸ್‍ಯುವಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು 2021ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇನ್ನು ಫೋಕ್ಸ್‌ವ್ಯಾಗನ್ ಮುಂದಿನ ವರ್ಷ ಭಾರತದಲ್ಲಿ ಟಿಗ್ವಾನ್ ಫೇಸ್‌ಲಿಫ್ಟ್ ಮತ್ತು ಟೈಗನ್ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಲಿದೆ.


Click it and Unblock the Notifications








