ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಟಿಗ್ವಾನ್ ಎಕ್ಸ್ ಎಸ್‍ಯುವಿಯನ್ನು ಅಧಿಕೃತವಾಗಿ ಚೀನಾದಲ್ಲಿ ಅನಾವರಣಗೊಳಿಸಿದೆ. ಕೆಲವು ವಾರಗಳ ಹಿಂದೆ ಈ ಹೊಸ ಕೂಪೆ ಶೈಲಿಯ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯ ಚಿತ್ರಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿತ್ತು.

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಇದೀಗ ಈ ಹೊಸ ಟಿಗ್ವಾನ್ ಎಕ್ಸ್ ಎಸ್‍ಯುವಿಯ ವಿನ್ಯಾಸ ಮತ್ತು ತಾಂತ್ರಿಕ ಮಾಹಿತಿಗಳು ಬಹಿರಂಗವಾಗಿದೆ. ಸಾಮಾನ್ಯ ಟಿಗ್ವಾನ್ ಮಾದರಿಗೆ ಹೋಲಿಸಿದರೆ ಈ ಎಸ್‍ಯುವಿಯ ಮುಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲಾಗಿಲ್ಲ. ಈ ಹೊಸ ಎಸ್‍ಯುವಿಯ ಮುಂಭಾಗದಲ್ಲಿ ಗ್ರಿಲ್ ಸಾಕಷ್ಟು ಅಗಲವಾಗಿದ್ದು, ಅದರ ಉದ್ದಕ್ಕೂ ಕ್ರೋಮ್ ಸ್ಲ್ಯಾಟ್‌ಗಳನ್ನು ಅಳವಡಿಸಿದೆ. ಇನ್ನು ಈ ಎಸ್‍ಯುವಿಯ ಮುಂಭಾಗ ಬಂಪರ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಇನ್ನು ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿಯಲ್ಲಿ ಅಗಲವಾದ ಏರ್ ಡ್ಯಾಮ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಬದಿಗಳಲ್ಲಿ ಸಿ-ಆಕಾರದ ಕ್ರೋಮ್ ಅಂಶಗಳಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಟಿಗ್ವಾನ್ ಎಕ್ಸ್ ಎಸ್‍ಯುವಿಯ ಸೈಡ್ ಪ್ರೊಫೈಲ್ ನಲ್ಲಿ ಸಿಲೂಯೆಟ್ ಅನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯ ಮೇಲ್ಭಾಗದಲ್ಲಿ ರೂಫ್ ಲೈನ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಹೊಸ ಅಲಾಯ್ ವ್ಹೀಲ್ ಅನ್ನು ಅಳವಡಿಸಿದೆ.

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ಹೊಸ ಟೈಲ್‌ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನು ಬೂಟ್ ಲಿಡ್ ನೊಂದಿಗೆ ಸಂಯೋಜಿಸಲ್ಪಟ್ಟ ಸ್ಪಾಯ್ಲರ್ ಹೊಂದಿದೆ. ಹಿಂಭಾಗದ ಎರಡು ಕಡೆಗಳಲ್ಲಿ ಎಕ್ಸಾಸ್ಟ್ ಟಿಪ್ಸ್ ನೀಡಿದೆ. ಬಂಪರ್‌ಗೆ ಫಾಕ್ಸ್ ರಿಯರ್ ಡಿಫ್ಯೂಸರ್ ಸಹ ನೀಡಲಾಗಿದೆ. ಇದು ಎಸ್‍ಯುವಿಯ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಟಿಗ್ವಾನ್ ಎಕ್ಸ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬೇಸ್ ಸ್ಪೆಕ್ ಮಾದರಿಯಲ್ಲಿ 186 ಬಿಹೆಚ್‍ಪಿ ಪವರ್ ಮತ್ತು 330 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಟಾಪ್ ಸ್ಪೆಕ್ ಮಾದರಿಯಲ್ಲಿ 220 ಬಿಹೆಚ್‍ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಎಸ್ಜಿ (ಡ್ಯುಯಲ್-ಕ್ಲಚ್) ಆಟೋ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ರೇಂಜ್-ಟಾಪಿಂಗ್ ಮಾದರಿಯು ವಿಡಬ್ಲ್ಯೂನ ‘4 ಮೋಷನ್' ಆಲ್-ವೀಲ್ ಡ್ರೈವ್ ಸೆಟಪ್ ಅನ್ನು ಪಡೆಯುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಟಿಗ್ವಾನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2007ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದರು. ಹಿಂದಿನ ಮಾದರಿ ಟಿಗ್ವಾನ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದಾಗ 6 ದಶಲಕ್ಷಕ್ಕೂ ಹೆಚ್ಚಿನ ಯುನಿಟ್ ಗಳು ಮಾರಾಟವಾಗಿತ್ತು.

ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಕ್ಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಂಪನಿಯು ಇದೀಗ ಚೀನಾದ ಮಾರುಕಟ್ಟೆಯಲ್ಲಿ ಟಿಗ್ವಾನ್ ಎಕ್ಸ್ ಎಸ್‍ಯುವಿಯನ್ನು ಪ್ರತ್ಯೇಕವಾಗಿ ಅನಾವರಣಗೊಳಿಸಿದೆ. ಇತರ ದೇಶಗಳಲ್ಲಿ ಈ ಎಸ್‍ಯುವಿಯನ್ನು ಅನಾವರಣಗೊಳಿಸುವುದರ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

More from DriveSpark

Article Published On: Monday, September 7, 2020, 17:30 [IST]
English summary
New Volkswagen Tiguan X Coupe-SUV Officially Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+