ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಈಗಾಗಲೇ ಟಿ-ರಾಕ್ ಎಸ್‌ಯುವಿ ಬಿಡುಗಡೆಗೊಳಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬ್ಲ್ಯಾಕ್ ಎಡಿಷನ್ ಅನಾವರಣಗೊಳಿಸಿದೆ.

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಕಳೆದ ಮಾರ್ಚ್ ಆರಂಭದಲ್ಲಿ ಟಿ-ರಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದ ಫೋಕ್ಸ್‌ವ್ಯಾಗನ್ ಕಂಪನಿಯು ಇದೀಗ ಹೊಸ ಕಾರಿನಲ್ಲಿ ಹೈ ಪರ್ಫಾಮೆನ್ಸ್ ಆವೃತ್ತಿಯಲ್ಲಿ ಬ್ಲ್ಯಾಕ್ ಎಡಿಷನ್ ಅಭಿವದ್ದಿಗೊಳಿಸಿದ್ದು, ಸಂಪೂರ್ಣವಾಗಿ ಕಪ್ಪು ಬಣ್ಣದ ಹೊರ ಮತ್ತು ಒಳ ವಿನ್ಯಾಸಗಳನ್ನು ಪಡೆದುಕೊಂಡಿದೆ. ಸದ್ಯ ಹೊಸ ಎಡಿಷನ್ ಯುಕೆನಲ್ಲಿ ಬಿಡುಗಡೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತ ಸೇರಿದಂತೆ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲೂ ಬಿಡುಗಡೆಯಾಗಲಿದೆ.

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಟಿ-ರಾಕ್ ಕಾರು ಸದ್ಯ ಭಾರತದಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.19.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಹೊಸ ಕಾರು ಒಂದೇ ಒಂದು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದೆ.

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯ ಮಾರ್ಡನ್ ಡಿಸೈನ್ ಪ್ರೇರಣೆ ಹೊಂದಿರುವ ಟಿ-ರಾಕ್ ಕಾರು ಯುರೋಪಿನ್ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಎಸ್‌ಯುವಿ ಕಾರು ಮಾದರಿಗಳಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ದೇಶಿಯ ಮಾರುಕಟ್ಟೆಗೂ ಲಗ್ಗೆಯಿಡುವ ಮೂಲಕ ಐಷಾರಾಮಿ ಫೀಚರ್ಸ್ ಇಷ್ಟಪಡುವ ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿದೆ.

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಈಗಾಗಲೇ ಹೊಸ ಕಾರು ಖರೀದಿಗಾಗಿ 2 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಕೇವಲ ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಹೊಸ ಕಾರು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಇನ್ನು ಟಿ-ರಾಕ್ ಕಾರು ದುಬಾರಿ ಬೆಲೆಗೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಆಕರ್ಷಕ ಮುಂಭಾಗದ ಗ್ರಿಲ್ ಜೊತೆಗೆ ಫೋಕ್ಸ್‌ವ್ಯಾಗನ್ ಲೊಗೊ, ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಕಾರ್ನರಿಂಗ್ ಲೈಟ್ಸ್, ಎಲ್ಇಡಿ ಫಾಗ್ ಲ್ಯಾಂಪ್ಸ್ ಹೊಂದಿದೆ.

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಹಾಗೆಯೇ ಹಲವಾರು ಸ್ಪೋರ್ಟಿ ಫೀಚರ್ಸ್‌ಗಳನ್ನು ಹೊಂದಿರುವ ಟಿ-ರಾಕ್ ಕಾರಿನಲ್ಲಿ 17-ಇಂಚಿನ ಅಲಾಯ್ ವೀಲ್ಹ್, ಆಕರ್ಷಕವಾದ ವೀಲ್ಹ್ ಆರ್ಚ್, ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಟೈಲಿಷ್ ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್‌ಗಳು ಗಮನಸೆಳೆಯಲಿದ್ದು, ಕಾರಿನ ಒಳಭಾಗದ ಫೀಚರ್ಸ್‌ಗಳ ಸಹ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನಲ್ಲಿ ವರ್ಚುವಲ್ ಕುಕ್‌ಪಿಟ್ ಜೋಡಿಸಲಾಗಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್‍ಟೈನ್‌ಮೆಂಟ್ ಸಿಸ್ಟಂ, ಅತ್ಯುತ್ತಮ ಲೆದರ್ ಆಸನಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಅಳವಡಿಸಲಾಗಿದೆ.

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ 6-ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಜೊತೆಗೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ನೀಡಲಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಟಿ-ರಾಕ್ ಎಸ್‌ಯುವಿ ಕಾರಿನಲ್ಲಿ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್ ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಟಿಎಸ್ಐ(ಇವೊ) ಪೆಟ್ರೋಲ್ ಎಂಜಿನ್ ಹೊಂದಿರುವ ಟಿ-ರಾಕ್ ಕಾರು 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 148-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಗಂಟೆಗೆ ಗರಿಷ್ಠ 204 ಕಿ.ಮೀ ಟಾಪ್ ಸ್ಪೀಡ್‌ ಪಡೆದುಕೊಂಡಿದೆ.

More from DriveSpark

Article Published On: Tuesday, May 26, 2020, 16:42 [IST]
English summary
Volkswagen T-Roc Black Edition unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+