ಇದೇ ತಿಂಗಳು 18ಕ್ಕೆ ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಜರ್ಮನ್ ಕಾರು ಉತ್ಪಾದನಾ ಕಂಪನಿ ಫೋಕ್ಸ್‌ವ್ಯಾಗನ್ ಇದೇ ತಿಂಗಳು 18ರಂದು ತನ್ನ ಬಹುನೀರಿಕ್ಷಿತ ಟಿ-ರಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರು ಹಲವಾರು ಐಷಾರಾಮಿ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹೊಸ ಟಿ-ರಾಕ್ ಕಾರು ಮಾದರಿಯು ಫೋಕ್ಸ್‌ವ್ಯಾಗನ್ ನಿರ್ಮಾಣದ ಕಾರುಗಳಲ್ಲಿ ಅತಿಹೆಚ್ಚು ಮಾರಾಟಗೊಂಡ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿದ್ದು, ಈ ಕಾರು ಈಗಾಗಲೇ ಯುರೋಪಿನ್ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದೀಗ ಭಾರತದಲ್ಲಿ ಜಾರಿಗೆ ತರಲಾಗಿರುವ ಹೊಸ ಆಮದು ನೀತಿಯಡಿ ಟಿ-ರಾಕ್ ಕಾರನ್ನು ಮಾರಾಟ ಮಾಡಲು ನಿರ್ಧರಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗಾಗಿ ಈಗಾಗಲೇ ಅಧಿಕೃತ ಬುಕ್ಕಿಂಗ್ ಕೂಡಾ ಆರಂಭವಾಗಿದ್ದು, ದುಬಾರಿ ಬೆಲೆಯ ನಡುವೆಯೂ ಹೊಸ ಕಾರು ಖರೀದಿಗಾಗಿ ಈಗಾಗಲೇ 500ಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಸಲ್ಲಿಸಿದ್ದಾರೆ. ಬಿಡುಗಡೆಯ ವೇಳೆಗೆ ಇದು ಇನ್ನಷ್ಟು ಹೆಚ್ಚಾಗಲಿದ್ದು, ಹೊಸ ಕಾರು ಮಾದರಿಯ ಬಗ್ಲೆ ಈಗಾಗಲೇ ಸಾವಿರಾರು ಗ್ರಾಹಕರು ಮಾಹಿತಿ ಪಡೆದುಕೊಂಡಿದ್ದಾರಂತೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಫೋಕ್ಸ್‌ವ್ಯಾಗನ್ ಸಂಸ್ಥೆಯು ಸ್ಕೋಡಾ ಜೊತೆಗೂಡಿ ಕಾರು ಉತ್ಪಾದನೆ ಮಹತ್ವದ ಬದಲಾವಣೆ ತರುತ್ತಿರುವುದಲ್ಲದೇ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿ ಹಲವು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಟಿ-ರಾಕ್ ಕಾರು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟಗೊಳ್ಳಲಿದ್ದು, ಟಾಪ್ ಎಂಡ್ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಗಳಿಗೆ ಈ ಹೊಸ ಕಾರು ಪ್ರಬಲ ಪೈಪೋಟಿಯಾಗಲಿದೆ. ಹೊಸ ಕಾರಿನಲ್ಲಿ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೌಲಭ್ಯಗಳಿವೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಹಾಗೆಯೇ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದ್ದು, ಇದು ಕಾರಿನ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇಎಸ್‌ಪಿ(ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಹಾಗೆಯೇ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಡೀಪ್ ಬ್ಲ್ಯಾಕ್ ಪರ್ಲ್, ಕರ್ಕ್ಯುಮಾ ಯೆಲ್ಲೋ/ಬ್ಲ್ಯಾಕ್, ಎನೆರ್ಜಿಟಿಕ್ ಆರೇಂಜ್/ಬ್ಲ್ಯಾಕ್, ಪ್ಯೂರ್ ವೈಟ್/ಬ್ಲ್ಯಾಕ್, ರವೆನಾ ಬ್ಲ್ಯೂ/ಬ್ಲ್ಯಾಕ್ ಮತ್ತು ಇಂಡಿಯಂ ಗ್ರೇ/ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಎಂಜಿನ್ ಸಾಮರ್ಥ್ಯ

ಹೊಸ ಟಿ-ರಾಕ್ ಕಾರು 1.5-ಲೀಟರ್ ಫೋರ್ ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 150-ಬಿಎಚ್‌ಪಿ ಮತ್ತು 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಇನ್ನು ಹೊಸ ಟಿ-ರಾಕ್ ಕಾರು ಫೋಕ್ಸ್‌ವ್ಯಾಗನ್ ಸಂಸ್ಥೆಯ ಎಂಕ್ಯೂಬಿ ಕಾರು ಉತ್ಪಾದನಾ ಪ್ಲ್ಯಾ‌ಟ್‌ಫಾರ್ಮ್ ಮೇಲೆ ಅಭಿವೃದ್ದಿಗೊಂಡಿದ್ದು, ಗುಣಮಟ್ಟ ಮತ್ತು ಅತ್ಯಧಿಕ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರು ಐಷಾರಾಮಿ ಕಾರುಗಳ ವಿಭಾಗದಲ್ಲಿ ಗುರುತಿಸಿಕೊಂಡಿದೆ.

ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾರಿಗೆ ಭರ್ಜರಿ ಬೇಡಿಕೆ

ಟಿ-ರಾಕ್ ಬೆಲೆ(ಅಂದಾಜು)

ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುವ ಹೊಸ ಟಿ-ರಾಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.20 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.23 ಲಕ್ಷ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Article Published On: Tuesday, March 10, 2020, 8:45 [IST]
English summary
According to report, Volkswagen has recieved 300 plus pre bookings for the T-Roc SUV ahead of its launch in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+