ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿ
ಫೋಕ್ಸ್‌ವ್ಯಾಗನ್ ಕಂಪನಿಯು 2020ರ ಆಟೋ ಎಕ್ಸ್ ಪೋ ಹಿನ್ನೆಲೆಯಲ್ಲಿ ಪ್ರಪಂಚಾದ್ಯಂತ ವಿವಿಧ ಸಮಾರಂಭಗಳನ್ನು ಏರ್ಪಡಿಸುತ್ತಿದೆ. ಇದೇ ರೀತಿಯ ಫೋಕ್ಸ್‌ವ್ಯಾಗನ್ ಗ್ರೂಪ್ ನೈಟ್ ಎಂಬ ಸಮಾರಂಭವನ್ನು ನಿನ್ನೆ ದೆಹಲಿಯಲ್ಲಿ ಆಯೋಜಿಸಲಾಗಿತ್ತು.

ಇದರಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯ ಎಲ್ಲಾ ಹೊಸ ಕಾರುಗಳನ್ನು ಪ್ರದರ್ಶಿಸಲಾಯಿತು. ಫೋಕ್ಸ್‌ವ್ಯಾಗನ್ ಜೊತೆಗೆ ಸ್ಕೋಡಾ, ಲ್ಯಾಂಬೊರ್ಗಿನಿ ಹಾಗೂ ಆಡಿ ಕಂಪನಿಗಳೂ ಸಹ ಭಾರತದಲ್ಲಿ ಬಿಡುಗಡೆಗೊಳಿಸಲಿರುವ ತಮ್ಮ ಹೊಸ ಕಾರುಗಳನ್ನು ಈ ಮೇಳದಲ್ಲಿ ಪ್ರದರ್ಶಿಸಿದವು.

ಫೋಕ್ಸ್‌ವ್ಯಾಗನ್ ಕಂಪನಿಯು ಈ ಮೇಳದಲ್ಲಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಅನಾವರಣಗೊಳಿಸಿತು. ಈ ಹೊಸ ಎಸ್‍ಯುವಿ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ ಹಾಗೂ ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಫೋಕ್ಸ್‌ವ್ಯಾಗನ್ ಕಂಪನಿಯು ಈ ಎಸ್‍ಯುವಿಯನ್ನು ಕಾನ್ಸೆಪ್ಟ್ ಮಾದರಿ ಎಂದು ಹೇಳಿದೆ. ಈ ಎಸ್‍ಯುವಿಯಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಈ ಎಸ್‍ಯುವಿಯನ್ನು ಫೋಕ್ಸ್‌ವ್ಯಾಗನ್‍ನ ಹೊಸ ಎಂಕ್ಯೂಬಿ ಎ0 ಪ್ಲಾಟ್‍ಫಾರಂನಡಿಯಲ್ಲಿ ತಯಾರಿಸಲಾಗುವುದು.

ಈ ಮಧ್ಯಮ ಗಾತ್ರದ ಎಸ್‍ಯುವಿ ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಸ್‍ಯುವಿಗಳಿಗಿಂತ ಹೆಚ್ಚಿನ ಪ್ರಮಾಣದ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚುವರಿ ವ್ಹೀಲ್‍ಬೇಸ್ ಅನ್ನು ಹೊಂದಿರಲಿದೆ.

ಈ ಹೊಸ ಕಾರು ಫೋಕ್ಸ್‌ವ್ಯಾಗನ್‍ನಲ್ಲಿರುವಂತಹ ಡಿಸೈನ್ ಫೀಚರ್‍ಗಳನ್ನು ಹೊಂದಿದೆ. ಈ ಫೀಚರ್‍ಗಳಲ್ಲಿ ಎಲ್‍ಇಡಿ ಟೇಲ್ ಲೈಟ್ ಹಾಗೂ ಎಲ್‍ಇಡಿ ಲೈಟ್ ಬಾರ್‍ಗಳು ಸೇರಿವೆ.

ಆಕರ್ಷಕವಾಗಿರುವ ಈ ಕಾರಿನ ಇಂಟಿರಿಯರ್ ಅಡ್ವಾನ್ಸ್ ಟೆಕ್ನಿಕಲ್ ಫೀಚರ್‍ಗಳಾದ ಟಚ್ ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ಗಳನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಕಾರಿನಲ್ಲಿ 1.5 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 130 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಈ ಕಾರ್ ಅನ್ನು ಡೀಸೆಲ್ ಎಂಜಿನ್‍ನಲ್ಲಿ ಬಿಡುಗಡೆಗೊಳಿಸುವುದಿಲ್ಲ.

ಇನ್ನು ಈ ಹೊಸ ಎಸ್‍ಯುವಿಯನ್ನು ಫೋಕ್ಸ್‌ವ್ಯಾಗನ್‍ನ ಇಂಡಿಯಾ 2.0 ಯೋಜನೆಯಡಿ ಸ್ಕೋಡಾ ಸಹಭಾಗಿತ್ವದೊಂದಿಗೆ ಉತ್ಪಾದನೆ ಮಾಡಲಿದ್ದು, ಹೊಸ ಯೋಜನೆಗಾಗಿ ಭಾರತದಲ್ಲಿ ಬರೋಬ್ಬರಿ ರೂ.7,900 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ.


Click it and Unblock the Notifications








