ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿರುವ ಪೊಲೊ ಮತ್ತು ವೆಂಟೊ ಕಾರುಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಜನಪ್ರಿಯ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು ಹೊಸ ವರ್ಷದಿಂದ ದುಬಾರಿಯಾಗಲಿವೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಭಾರತದಲ್ಲಿ ಜನಪ್ರಿಯ ಕಾರು ತಯಾರಕ ಕಂಪನಿಗಳು ಜನರಿಗೆ ಹೊಸ ವರ್ಷ ಪ್ರಾರಂಭವಾಗುವ ಮುನ್ನವೇ ಶಾಕ್ ನೀಡಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ ಮತ್ತು ಇನ್-ಪುಟ್ ವೆಚ್ಚವನ್ನು ಸರಿದೂಗಿಸಲು ಹಲವು ವಾಹನ ಕಂಪನಿಗಳು ಹೊಸ ವರ್ಷದ ಆರಂಭದಿಂದ ತಮ್ಮ ಸರಣಿಯ ಕಾರುಗಳ ಬೆಲೆಯನ್ನು ಹೆಚಿಸುತ್ತಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಕೂಡ ತನ್ನ ಪೊಲೊ ಮತ್ತು ವೆಂಟೊ ಕಾರುಗಳ ಬೆಲೆಯನ್ನು ಶೇ.2.5 ರಷ್ಟು ಹೆಚ್ಚಿಸಲಾಗಿದೆ. ಈ ಹೊಸ ದರ 2021ರ ಜನವರಿ 1 ರಿಂದ ಜಾರಿಯಾಗುತ್ತದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಮತ್ತು ವೆಂಟೊ ಕಾರುಗಳನ್ನು ಸ್ಥಳಿಯವಾಗಿ ತಯಾರಿಸಲಾಗುತ್ತಿದೆ. ಇನ್ನು ಫೋಕ್ಸ್‌ವ್ಯಾಗನ್ ತನ್ನ ಟಿಗ್ವಾನ್ ಆಲ್‌ಸ್ಪೇಸ್ ಮತ್ತು ಟಿ-ರಾಕ್ ಎಸ್‍ಯುವಿಗಳನ್ನು ಭಾರತಕ್ಕೆ ಸಿಬಿಯು ಆಗಿ ಆಮಾದು ಮಾದಿಕೊಳುತ್ತಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ವಾಹನ ತಯಾರಕರು ಸಾಮಾನ್ಯವಾಗಿ ವರ್ಷದ ಆರಂಭದಲ್ಲಿ ಬೆಲೆಗಳನ್ನು ಪರಿಷ್ಕರಿಸುತ್ತಾರೆ. ಆದರೆ ಈ ಬಾರಿ ವಾಹನ ತಯಾರಕ ಕಂಪನಿಯು ಹಲವು ಕಾರಣಗಳಿಂದ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಹಲವು ಜನಪ್ರಿಯ ಕಾರುಗಳು ಬಿಎಸ್ 6 ಮಾನದಂಡಗಳಿಗೆ ಪರಿವರ್ತನೆಯೊಂದಿಗೆ ಬೆಲೆಗಳು ಬಲವಾದ ಏರಿಕೆಯನ್ನು ಕಂಡಿತ್ತು. ಆದರೆ ಕಚ್ಚಾ ವಸ್ತುಗಳ ಬೆಲೆಗಳು ದುಬಾರಿ ಮತ್ತು ಕರೋನಾ ಆತಂಕದಿಂದ ಅದರ ಪೂರೈಕೆಗೆ ಹಲವು ಅಡೆತಡೆಗಳನ್ನು ಉಂಟುಮಾಡಿದೆ. ಇದರಿಂದ ಬೆಲೆ ಏರಿಕೆ ಮಾಡುವುದು ಅನಿವಾರ್ಯವೆಂದು ಕಾರು ತಯಾರಕ ಕಂಪನಿಗಳು ಹೇಳಿಕೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳಲ್ಲಿ 1.2 ಲೀಟರ್ ಎಂಜಿನ್ ಅನ್ನು ಬದಲಾಯಿಸಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹಿಂದಿನ ತಲೆಮಾರಿನ ಮಾದರಿಗಳಲ್ಲಿ ಇದ್ದ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಬದಲಾಯಿಸಿದೆ

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್‍‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇನ್ನು ಇದರಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ ಪ್ರತಿ ಲೀಟರ್‌ಗೆ 18.24 ಕಿ.ಮೀ ಮೈಲೇಜ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಈ 1.0 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಹೆಚ್ಚಿನ ಪವರ್ ಡ್ರೈವಿಬಿಲಿಟಿ, ಉತ್ತಮ ಕಾರ್ಯಕ್ಷಮತೆ, ಸುಧಾರಿತ ಇಂಧನ ದಕ್ಷತೆಯನ್ನು ನೀಡುತ್ತದೆ ಮತ್ತು ಹೆಚ್ಚು ಸಮರ್ಥನೀಯ ಎಂಜಿನ್ ಆಯ್ಕೆಯಾಗಿದೆ. ಈ ವೆಂಟೊ ಕಾರಿನಲ್ಲಿ ಫೋಕ್ಸ್‌ವ್ಯಾಗನ್‍ನ ಪ್ರಶಸ್ತಿ ವಿಜೇತ ಟಿ‍ಎಸ್‍ಐ ತಂತ್ರಜ್ಞಾನವನ್ನು ಒಳಗೊಂಡಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಝ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರು ಟ್ರೆಂಡ್‍‍‍ಲೈನ್, ಜಿಟಿ-ಲೈನ್, ಕಂಫರ್ಟ್‍‍ಲೈನ್ ಹೈಲೈನ್ ಮತ್ತು ಹೈಲೈನ್ ಪ್ಲಸ್ ಎಂಬ ರೂಪಾಂತಗಲ್ಲಿ ಲಭ್ಯವಿದೆ. ಇದರಲ್ಲಿ ಪೊಲೊ ಜಿಟಿ-ಲೈನ್ ಟಾಪ್-ಸ್ಪೆಕ್ ರೂಪಾಂತರವಾಗಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು

ಈ ಜನಪ್ರಿಯ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು ಹೊಸ ವರ್ಷದಿಂದ ದುಬಾರಿಯಾಗಲಿವೆ. ಇದರಿಂದಾಗಿ ಫೋಕ್ಸ್‌ವ್ಯಾಗನ್ ಪೊಲೊ ಅಥವಾ ವೆಂಟೊ ಕಾರುಗಳನ್ನು ಖರೀದಿಸಲು ಬಯಸುವವರು ಪ್ರಸ್ತುತ ಬೆಲೆಯಲ್ಲಿ ಇದೇ ತಿಂಗಳು ಖರೀದಿಸಬಹುದಾಗಿದೆ.

Most Read Articles

Kannada
English summary
Volkswagen India To Increase Prices For Polo And Vento From January 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X