ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ 2021ರ ಔರಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಕೆಲವು ಹೊಸ ನವೀಕರಣಗಳೊಂದಿಗೆ 2021ರ ಹ್ಯುಂಡೈ ಔರಾ ಕಾರು ಬಿಡುಗಡೆಯಾಗುತ್ತದೆ.

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ಹೊಸ ಹ್ಯುಂಡೈ ಔರಾ ಕಾರಿನ ಕೆಲವು ಹೊಸ ಫೀಚರ್ ಗಳ ಮಾಹಿತಿ ಬಹಿರಂಗವಾಗಿದೆ. ಇದೀಗ ಈ ಹೊಸ ಹ್ಯುಂಡೈ ಔರಾ ಕಾರು ಡೀಲರ್ ಗಳ ಬಳಿ ತಲುಪಲು ಪ್ರಾರಂಭವಾಗಿದೆ. ಇದರ ಸೈ ಚಿತ್ರಗಳು ಬಹಿರಂಗವಾಗಿದೆ. ಹೊಸ ಔರಾ ರಿಯರ್ ವಿಂಗ್ ಸ್ಪಾಯ್ಲರ್ ಅನ್ನು ಅನ್ನು ಪಡೆಯುತ್ತದೆ. ಈ ಹೊಸ ವಿಂಗ್ ಸ್ಪಾಯ್ಲರ್ ಸೆಡಾನ್‌ನ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುವುದಲ್ಲದೆ ಅದರ ಏರೋಡೈನಾಮಿಕ್ ಹೆಚ್ಚಿಸುತ್ತದೆ ಮತ್ತು ಸ್ಪೋರ್ಟಿಯರ್ ಲುಕ್ ಅನ್ನು ನೀಡುತ್ತದೆ. ಇದನ್ನು ಔರಾದ ಎಸ್, ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ರೂಪಾಂತರಗಳಲ್ಲಿ ನೀಡಲಾಗುತ್ತದೆ.

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ಪ್ರೀಮಿಯಂ ಆಡಿಯೊ ಸಿಸ್ಟಂ ಅನ್ನು ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ರೂಪಾಂತರಗಳಿಂದ ತೆಗೆದುಹಾಕಲಾಗಿದ್ದರೆ, ಇ ರೂಪಾಂತರವು 14 ಇಂಚಿನ ಅನ್ ಬದಲಿಗೆ 13 ಇಂಚಿನ ಸ್ಪೇರ್ ವ್ಹೀಲ್ ಅನ್ನು ಹೊಂದಿರುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ಎಸ್ ರೂಪಾಂತರವನ್ನು ಸ್ಟೀಲ್ ಸ್ಟೈಲ್ ವ್ಹೀಲ್ಸ್ ನೊಂದಿಗೆ ನೀಡಲಾಗಿದ್ದರೆ, ಎಎಂಟಿ ಮಾದರಿಗಳು ಗನ್ ಮೆಟಲ್ ಬಣ್ಣದಲ್ಲಿ 3 ಎಂ ಗ್ರಾಫಿಕ್ಸ್ ಪಡೆಯಲಿವೆ. ಟಾಪ್-ಎಂಡ್ ಎಸ್‌ಎಕ್ಸ್ (ಒ) ಟ್ರಿಮ್ ಕ್ರೂಸ್ ಕಂಟ್ರೋಲ್ (1.2 ಎಲ್ ಪೆಟ್ರೋಲ್ ಮಾತ್ರ) ಮತ್ತು ಲೆದರ್ ಸುತ್ತುವರೆದ ಸ್ಟೀಯರಿಂಗ್ ವ್ಹೀಲ್ ಮತ್ತು ಗೇರ್ ನಾಬ್ ಸೇರಿದಂತೆ ಕೆಲವು ವಿಶೇಷ ಫೀಚರ್ ಗಳನ್ನು ಒಳಗೊಂಡಿರುತ್ತದೆ.

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

2021ರ ಹ್ಯುಂಡೈ ಔರಾ ಕಾರಿನಲ್ಲಿ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಸಿಎನ್‌ಜಿ ಕಿಟ್‌ನೊಂದಿಗೆ ಮುಂದುವರಿಯಲಿದೆ. ಗ್ರ್ಯಾಂಡ್ ಐ10 ನಿಯೋಸ್‌ನಿಂದ ಎರವಲು ಪಡೆದ 1.2 ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು 1.0ಎಲ್, 3-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

2021ರ ಹ್ಯುಂಡೈ ಔರಾ ಕಾರಿನಲ್ಲಿ 1.2ಎಲ್, 3-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 74 ಬಿಹೆಚ್‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ಔರಾ ಕಾರಿನಲ್ಲಿ ಬೂಮ್‌ಬರ್ಗ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್, 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, ಕೀ ಲೆಸ್ ಎಂಟ್ರಿ, 8-0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ವಾಯ್ಸ್ ರೆಕಗ್ನಿಷನ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ವ್ಯಾರ್ಪ್ ಸ್ಟಿರಿಂಗ್ ವ್ಹೀಲ್ ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್‌ನೊಂದಿಗೆ ಇಬಿಡಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಚೈಲ್ಡ್ ಸೀಟ್ ಮೌಂಟ್ ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಹ್ಯುಂಡೈ ಔರಾ

ಹ್ಯುಂಡೈ ಔರಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇನ್ನು 2021ರ ಹ್ಯುಂಡೈ ಔರಾ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

Article Published On: Wednesday, April 14, 2021, 19:35 [IST]
English summary
2021 Hyundai Aura With Refreshed Rear Styling. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+