ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಎನ್ ಪರ್ಫಾರ್ಮೆನ್ಸ್ ಸರಣಿಯ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿವೆ. ಇದರಲ್ಲಿ ಹ್ಯುಂಡೈ ಕಂಪನಿಯ ಎನ್ ಸರಣಿಯ ಜನಪ್ರಿಯ ಐ20 ಎನ್ ಲೈನ್‌ ಮಾದರಿಯು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಹ್ಯುಂಡೈ ಎನ್ ಲೈನ್ ಕಾರುಗಳು ಭಾರತೀಯ ಮಾರುಕಟ್ಟೆಯ ಪರ್ಫಾಮೆನ್ಸ್ ಕಾರು ಪ್ರಿಯರು ಬಹುನಿರೀಕ್ಷೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ ಭಾರತದಲ್ಲಿ ಪರ್ಫಾಮೆನ್ಸ್ ಕಾರುಗಳು ಸಂಖ್ಯೆಯು ವಿರಳವಾಗಿದೆ. ಭಾರತದಲ್ಲಿ ಹಲವು ಜನಪ್ರಿಯ ಕಾರು ತಯಾರಕರು ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯನ್ನು ಕಾಣದೆ ಸ್ಥಗಿತಗೊಳಿಸಿದ್ದಾರೆ. ಇದೀಗ ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎನ್ ಲೈನ್ ಸರಣಿಯ ಜನಪ್ರಿಯ ಮಾದರಿಗಳು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಹ್ಯುಂಡೈ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಐ20 ಎನ್ ಲೈನ್‌ ಮಾದರಿಯ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಈಗಗಾಲೇ ಯುರೋಪ್ ಮಾರುಕಟ್ಟೆಯಲ್ಲಿ ಐ20 ಎನ್ ಲೈನ್‌ ಅನ್ನು ಪರಿಚಯಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಅದೇ ಮಾದರಿಯಲ್ಲಿ ಸಣ್ಣ ನವೀಕರಣದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಯುರೋಪ್ ಮಾರುಕಟ್ಟೆಯಲ್ಲಿ ಹುಂಡೈ ಎನ್ ಲೈನ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಇದರಲ್ಲಿ 1.2-ಲೀಟರ್, ಇನ್-ಲೈನ್-4 ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 84 ಬಿಹೆಚ್‍ಪಿ ಪವರ್ ಮತ್ತು 118 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಎರಡನೇ ಎಂಜಿನ್ ಆಯ್ಕೆಯು 1.0-ಲೀಟರ್ ಇನ್-ಲೈನ್ -3, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಲೋವರ್ ಟ್ಯೂನಿಂಗ್ ನಲ್ಲಿ 1.0ಎಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಐಎಂಟಿ ಅಥವಾ 7-ಸ್ಪೀಡ್ ಡಿಸಿಟಿಯೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಇನ್ನು ಹೈಯರ್ ಟ್ಯೂನಿಂಗ್ ನಲ್ಲಿ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಎಗೆ 6-ಸ್ಪೀಡ್ ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಸಾಮಾನ್ಯ ಐ20 ಮಾದರಿಯಂತೆ 'ಎನ್ ಲೈನ್' ರೂಪಾಂತರವು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುತ್ತದೆ. ಇನ್ನು ಇದರಲ್ಲಿ 10.25-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಇನ್ನು ಡ್ರೈವರ್ ಅಸಿಸ್ಟ್ ಫೀಚರ್ ಗಳೊಂದಿಗೆ ಬ್ಲೂಲಿಂಕ್ ಕನೆಕ್ಟಿವಿಟಿ ಕಾರ್ ಸೂಟ್ ಸಹ ಲಭ್ಯವಿದೆ. ಇನ್ನು ಐ20 ಎನ್ ಲೈನ್‌ ಕಾರಿನಲ್ಲಿ ಟ್ವೀಕ್ಡ್ ಸ್ಟೀಯರಿಂಗ್ ಮತ್ತು ಎಕ್ಸಾಸ್ಟ್ ಸಿಸ್ಟಂ ಜೊತೆಗೆ ಗಟ್ಟಿಯಾದ ಸಸ್ಪೆಂಕ್ಷನ್ ಸೆಟಪ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ವಿಶೇಷತೆಗಳು

ಈ ಹ್ಯುಂಡೈ ಐ20 ಎನ್ ಲೈನ್‌ ಪರ್ಫಾಮೆನ್ಸ್ ಕಾರಿನ ಬೆಲೆಯು ಭಾರತದಲ್ಲಿ ಸರಿಸುಮಾರು ರೂ.12 ಲಕ್ಷ ನಿಗಧಿಪಡಿಸಬಹುದು. ಇನ್ನು ಈ ಪರ್ಫಾಮೆನ್ಸ್ ಕಾರು ಭಾರತದಲ್ಲಿ ಈ ವರ್ಷದ ಮದ್ಯಾಂತ ಅವಧಿಯಲ್ಲಿ ಬಿಡುಗಡೆಯಾಗಲಿದೆ.

Article Published On: Tuesday, February 2, 2021, 21:04 [IST]
English summary
India-Bound 2021 Hyundai i20 N Line – Specifications and Features. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+