ಹೊಸ ಲೊಗೊ ಸೇರಿದಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಸೆಲ್ಟೊಸ್ ಮತ್ತು ಸೊನೆಟ್ ಆವೃತ್ತಿಯ 2021ರ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳು ಬ್ರಾಂಡ್ ನ್ಯೂ ಲೊಗೊ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರು ಮಾರಾಟ ಜಾಲ ಹೊಂದಿರುವ ಕಿಯಾ ಕಂಪನಿಯು ತನ್ನ ಹೊಸ ಕಾರು ಮಾದರಿಗಳಲ್ಲಿ ಬದಲಾವಣೆ ತರುವ ಉದ್ದೇಶದಿಂದ ವಿನೂತನ ಲೊಗೊ ಸೇರ್ಪಡೆಗೊಳಿಸಿದ್ದು, ಆರಂಭಿಕವಾಗಿ ಭಾರತದಲ್ಲಿ ಹೊಸ ಲೊಗೊ ಹೊಂದಿರುವ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳನ್ನು ಅನಾವರಣಗೊಳಿಸಿ ಇದೀಗ ಬಿಡುಗಡೆ ಮಾಡಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

2021ರ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳಲ್ಲಿ ಹೊಸ ಲೊಗೊ ವಿನ್ಯಾಸವು ಕಾರುಗಳಿಗೆ ಮತ್ತಷ್ಟು ಮೆರಗು ನೀಡುತ್ತಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷ(ಸೊನೆಟ್) ಮತ್ತು ರೂ. 9.95 ಲಕ್ಷ(ಸೆಲ್ಟೊಸ್) ಬೆಲೆ ಹೊಂದಿವೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಹೊಸ ಕಾರುಗಳ ಬ್ಯಾನೆಟ್, ಟೈಲ್‌ಗೆಟ್, ಅಲಾಯ್ ವೀಲ್ಹ್ ಮತ್ತು ಸ್ಟೀರಿಂಗ್ ವೀಲ್ಹ್ ಮೇಲೆ ಹೊಸ ಲೊಗೊ ವಿನ್ಯಾಸವು ಗಮನಸೆಳೆಯುತ್ತಿದ್ದು, ಹೊಸ ಲೊಗೊದೊಂದಿಗೆ ಸೆಲ್ಟೊಸ್ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆಯ ಯೋಜನೆಯಲ್ಲಿದ್ದ ಕಿಯಾ ಕಂಪನಿಗೆ ಕೋವಿಡ್ ಹಿನ್ನಡೆ ಉಂಟು ಮಾಡಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಕೋವಿಡ್ ಹಿನ್ನಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕಂಪನಿಯು ಸದ್ಯಕ್ಕೆ ಕೆಲವೇ ಕೆಲವು ತಾಂತ್ರಿಕ ಅಂಶಗಳ ಬದಲಾವಣೆಯೊಂದಿಗೆ 2021ರ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಡಿಸೈನ್ ಹೊಂದಿರುವ ಸೆಲ್ಟೊಸ್ ಫೇಸ್‌ಲಿಫ್ಟ್ ಮಾದರಿಯ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. 2021ರ ಸೊನೆಟ್ ಮಾದರಿಯಲ್ಲಿ ಕಂಪನಿಯು ಹೊಸ ಲೊಗೊ ಹೊರತುಪಡಿಸಿ ಯಾವುದೇ ಹೊಸ ಬದಲಾವಣೆ ಪರಿಚಯಿಸಿಲ್ಲವಾದರೂ ಸೆಲ್ಟೊಸ್ ಕಾರಿನಲ್ಲಿ ಕೆಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಉನ್ನತೀಕರಿಸಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

2021ರ ಸೆಲ್ಟೊಸ್ ಕಾರು ಮಾದರಿಯು ಹಳೆಯ ಆವೃತ್ತಿಗಿಂತಲೂ ರೂ. 6 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಬೇಡಿಕೆಯ ಆಧಾರದ ಮೇಲೆ ಸೆಲ್ಟೊಸ್ ಹೆಚ್‌ಟಿಎಕ್ಸ್ ಪ್ಲಸ್ 1.5 ಡೀಸೆಲ್ ಆವೃತ್ತಿಯ ಮಾರಾಟವನ್ನು ಸ್ಥಗಿತಗೊಳಿಸಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಹಾಗೆಯೇ ಕಂಪನಿಯು ಹೆಚ್‌ಟಿಕೆ ಪ್ಲಸ್ 1.5-ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಹೊಸದಾಗಿ ಐಎಂಟಿ(ಇಂಟಲಿಜೆನ್ಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆಯ್ಕೆ ನೀಡಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೊಸದಾಗಿ ಕಂಪನಿಯು ಜಿಟಿಎಕ್ಸ್ ಆಪ್ಷನ್ ಆವೃತ್ತಿಯಲ್ಲಿ ಪೆಟ್ರೋಲ್ ಮ್ಯಾನುವಲ್ ಹೊಂದಿರುವ 1.4-ಲೀಟರ್ ಟರ್ಬೊ ಎಂಜಿನ್ ಆಯ್ಕೆ ನೀಡಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಜೊತೆಗೆ ಸೆಲ್ಟೊಸ್ ಹೊಸ ಕಾರಿನಲ್ಲಿ ಕಂಪನಿಯು ಸ್ಯಾಂಡ್, ಮಡ್, ಸ್ನೋ ಎನ್ನುವ ಮೂರು ಟ್ರಾಕ್ಷನ್ ಸೌಲಭ್ಯದೊಂದಿಗೆ ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ಜೋಡಣೆ ಮಾಡಿದ್ದು, ಹೆಚ್‌ಟಿಕೆ ಪ್ಲಸ್ ಮಾದರಿಯಲ್ಲಿ ಫ್ರ್ಯಾಬಿಕ್ ಆಸನ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಇನ್ನುಳಿದ ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಎಇ, ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಆಪ್ಷನ್ ಮತ್ತು ಜಿಟಿಎಕ್ಸ್ ಪ್ಲಸ್ ಮಾದರಿಗಳಲ್ಲಿ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಅಸಿಸ್ಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಟ್, ಬ್ರೇಕ್ ಅಸಿಸ್ಟ್, ಆಟೋಮ್ಯಾಟಿಕ್ ಮಾದರಿಗಳಿಗಾಗಿ ಪ್ಯಾಡಲ್ ಶಿಫ್ಟರ್, ವಾಯ್ಸ್ ಕಮಾಂಡರ್, ಏರ್ ಪ್ಯೂರಿಫೈರ್ ಫೀಚರ್ಸ್‌ಗಳನ್ನು ನೀಡಲಾಗಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಇನ್ನು ಸೊನೆಟ್ ಕಾರು ಮಾದರಿಯು ಹೊಸ ಲೊಗೊ ಹೊರತುಪಡಿಸಿ ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆ ತಾಂತ್ರಿಕ ಅಂಶಗಳನ್ನು ಮುಂದುವರಿಸಿದ್ದು, ಹೊಸ ಕಾರು 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಮಾದರಿಯು ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.20 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಬದಲಾವಣೆಗಳೊಂದಿಗೆ 2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಹೊಸ ಸೊನೆಟ್ ಮತ್ತು ಸೆಲ್ಟೊಸ್ ಕಾರುಗಳಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಬ್ ಫೋರ್ ಮೀಟರ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ.

More from DriveSpark

Article Published On: Saturday, May 1, 2021, 12:15 [IST]
English summary
2021 Kia Seltos And Sonet launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+