Just In
Don't Miss!
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಹಿತಿ ಬಹಿರಂಗ
ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. 2021ರ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

2021ರ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ. ಮೂರನೇ ತಲೆಮಾರಿನ ಸ್ವಿಫ್ಟ್ ಅನ್ನು 2016ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಲಾಯಿತು ಮತ್ತು ಇದನ್ನು 2017 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಮಾರುತಿ ಸ್ವಿಫ್ಟ್ ದೀರ್ಘಕಾಲದಿಂದ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.

ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ವಿಫ್ ಕಾರನ್ನು ಮಿಡ್-ಲೈಫ್ ನವೀಕರಣವನ್ನು ಮಾಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿಗೆ ಹೋಲಿಸಿದರೆ ಮುಂಭಾಗದಲ್ಲಿ ಕೆಲವು ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ರೇಡಿಯೇಟರ್ ಗ್ರಿಲ್ ವಿನ್ಯಾಸವನ್ನು ಹೊಂದಿದೆ ಮತ್ತು ಬ್ಲ್ಯಾಕ್ ರೂಫ್ ಮತ್ತು ಡ್ಯುಯಲ್ ಟೋನ್ ಬಣ್ಣಗಳ ಅಂಶಗಳನ್ನು ಹೊಂದಿರುತ್ತದೆ. ಮುಂಭಾಗದ ಏರ್ ಟೆಕ್ ಭಾಗವನ್ನು ಕವರ್ ಮಾಡಲಾಗಿದೆ. ಆದ್ದರಿಂದ ಈ ಸಮಯದಲ್ಲಿ, ನಾವು ಹೊಸ ವಿನ್ಯಾಸದ ಬಗ್ಗೆ ಮಾತನಾಡಲು ಸಾಧ್ಯವಾಗುವುದಿಲ್ಲ.

ಗ್ಲೋಬಲ್-ಸ್ಪೆಕ್ ಕಾರಿನ ಆಧಾರದ ಮೇಲೆ, ಸ್ವಿಫ್ಟ್ ಡೈಮಂಡ್-ಸ್ಟಡ್-ಪ್ಯಾಟರ್ನ್ ಮೆಶ್ ಗ್ರಿಲ್ ಪಡೆಯುವ ಸಾಧ್ಯತೆಯಿದೆ. ಚಿತ್ರಗಳಲ್ಲಿ 2021ರ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಉಳಿದಂತೆ ಯಾವುದೇ ಪ್ರಮುಖ ಬದಲಾವನೆಗಳನ್ನು ಕಂಡುಬಂದಿಲ್ಲ. ನವೀಕರಿಸಿದ ಸ್ವಿಫ್ಟ್‌ನ ಕ್ಯಾಬಿನ್ ಚಿತ್ರಗಳು ಬಹಿರಂಗವಾಗಿಲ್ಲ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಜಾಗತಿಕ ಸ್ಪೆಕ್ ಕಾರಿನ ಆಧಾರದ ಮೇಲೆ, ಯಾವುದೇ ಪ್ರಮುಖ ಬದಲಾವಣೆಗಳನ್ನು ನಾವು ನಿರೀಕ್ಷಿಸುವುದಿಲ್ಲ. ಇದು ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗೆ ಸ್ಮಾರ್ಟ್ ಸ್ಟುಡಿಯೋ 2.0 ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ.

ಇದರೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಸೆನ್ಸಾರ್ ಗಳೊಂದಿಗೆ ರೇರ್ ಕ್ಯಾಮೆರಾ, ಇಬಿಡಿಯೊಂದಿಗೆ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರಿನಲ್ಲಿ ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳಡಿಸುವ ಸಾಧ್ಯತೆಗಳಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಅನ್ನು ಸಾಮರ್ಥ್ಯ ಹೊಂದಿದೆ,

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು. ಇನ್ನು ಹೊಸ ಸ್ವಿಫ್ಟ್ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇದುವುದಿಲ್ಲ. ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.