ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಸ್ಕೋಡಾ ತನ್ನ 2021ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಸ್ಕೋಡಾ ಕಂಪನಿಯು ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಲಾಯಿತು ಮತ್ತು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಇನ್ನು ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಆಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಈ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಪರಿಷ್ಕೃತ ಗ್ರಿಲ್ ಅನ್ನು ಹೊಂದಿದೆ. ಇದು ಹೆಚ್ಚು ನೇರವಾದ ಪ್ರೊಫೈಲ್ ನೀಡುತ್ತದೆ. ಗ್ರಿಲ್ ಅನ್ನು ಸ್ಲಿಮ್ಮರ್ ಹೆಡ್‌ಲ್ಯಾಂಪ್ ಯುನಿಟ್ ನಿಂದ ಸುತ್ತುವರಿಯಲಾಗುತ್ತದೆ. ಈ ಯುನಿಟ್ ಅಡಿಯಲ್ಲಿ ಪ್ರತ್ಯೇಕ ಎಲ್ಇಡಿ ಮಾಡ್ಯೂಲ್ ಇದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಇದರ ಹೊಸ ಹೆಡ್‌ಲ್ಯಾಂಪ್ ಸೆಟಪ್ ಹೊಸ ಫೋರ್-ಹೈಡ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿ ಕ್ರಿಸ್ಟಲ್ ಎಫೆಕ್ಟ್ ಹೊಂದಿರುವ ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಕೂಡ ಪಡೆಯುತ್ತದೆ.ಇ ನ್ನು ಈ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಹೊಸ ಈ ಎಸ್‍ಯುವಿಯಲ್ಲಿ 20 ಇಂಚಿನ ಹೊಸ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಗ್ಲೋಸ್ ಬ್ಲ್ಯಾಕ್‌ನಲ್ಲಿ ಹೊಸ ರೇರ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ, ಇದು ಬ್ರೇಕ್ ಲೈಟ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಹೊಸ ಕೊಡಿಯಾಕ್ ಮಾದರಿಯ ಕ್ಯಾಬಿನ್ ಒಳಗೆ ಹೊಸ ಅಲಂಕಾರಿಕ ಸ್ಟ್ರೀಪ್ ಗಳನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಇದರ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಲ್ಲಿ ಸ್ಟ್ರೀಚಿಂಗ್ ಅನ್ನು ಕೂಡ ಪಡೆಯುತ್ತದೆ. ಕೊಡಿಯಾಕ್ ಮಾದರಿಯು 7-ಸೀಟರ್ ಮಾದರಿಯಾಗಿದ್ದು, ಇದರಲ್ಲಿ ವೆಂಟಿಲೆಟಡ್ ಸೀಟುಗಳು ಸೇರಿದಂತೆ ಮಸಾಜ್ ಫಂಕ್ಷನ್ ಅನ್ನು ಹೊಂದಿದೆ. ಇದು ದೂರ ಪ್ರಯಾಣಗಳಲ್ಲಿ ಮಾಡುವಾಗ ಹೆಚ್ಚು ಸಹಕಾರಿಯಾಗುವ ಕೂಲ್ ಫೀಚರ್ ಎಂದು ಹೇಳಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಮೊದಲ ಬಾರಿಗೆ ಕೊಡಿಯಾಕ್ ಎಸ್‍ಯುವಿಯು ಮಲ್ಟಿ-ವೇ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆಯ ಜೊತೆ ಮಸಾಜ್ ಫಂಕ್ಷನ್ ಪಡೆದುಕೊಂಡಿದೆ. ಕ್ಯಾಂಟನ್ ಸೌಂಡ್ ಸಿಸ್ಟಂ ಮತ್ತು ಈಗ ಹತ್ತು ಸ್ಪೀಕರ್‌ಗಳನ್ನು ನೀಡುತ್ತದೆ. ಈ ಮಾದರಿಯಲ್ಲಿ ವರ್ಚುವಲ್ ಕಾಕ್‌ಪಿಟ್‌ನಲ್ಲಿ 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಟಾಪ್-ಆಫ್-ಲೈನ್ ಸ್ಕೋಡಾ ಕೊಡಿಯಾಕ್ ಆರ್‌ಎಸ್ ರೂಪಾಂತರದಲ್ಲಿ ಹೊಸ 2.0-ಲೀಟರ್ ಟಿಎಸ್ಐ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 7 ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಬಹುದು. ಇತರ ಎಂಜಿನ್ ಆಯ್ಕೆಗಳನ್ನು ಕೂಡ ನೀಡುವ ಸಾಧ್ಯತೆಗಳಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಒಟ್ಟಿನಲ್ಲಿ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ ಹಲವಾರು ಹೊಸ ಬಬದಲಾವಣೆಗಳೊಂದಿಗೆ ಬರುತ್ತಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
2021 Skoda Kodiaq Facelift Could Be India Launch Soon. Read In Kannada.
Story first published: Tuesday, June 29, 2021, 20:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X