ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ದಕ್ಷಿಣ ಕೊರಿಯಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ತನ್ನ ಟಾಪ್ ಸೆಲ್ಲಿಂಗ್ ಮಾಡೆಲ್ ಕ್ರೆಟಾವನ್ನು ಮಿಡ್-ಲೈಫ್ ಅಪ್‌ಡೇಟ್ ಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಹ್ಯುಂಡೈ ಕಂಪನಿಯು ಇದೀಗ ಕ್ರೆಟಾ ಫೇಸ್‌ಲಿಫ್ಟ್‌ಗಾಗಿ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಟೀಸರ್ ನಲ್ಲಿ ಹ್ಯುಂಡೈ ಫೇಸ್‌ಲಿಫ್ಟ್‌ನಲ್ಲಿ ಮಾಡಿರುವ ಬದಲಾವಣೆಗಳನ್ನು ತೋರಿಸುತ್ತದೆ. ಇದರಲ್ಲಿ ಮುಂಭಾಗವನ್ನು ನವೀಕರಸಿರುವುದನ್ನು ನೋಡಬಹುದು. ಹೊಸ ನವೀಕರಣಗಳೊಂದಿಗೆ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ವಿನ್ಯಾಸದ ಪ್ಯಾರಾಮೆಟ್ರಿಕ್ ಗ್ರಿಲ್ ಹ್ಯುಂಡೈನ ಸೆನ್ಸೂಯಸ್ ಸ್ಪೋರ್ಟಿನೆಸ್ ವಿನ್ಯಾಸದೊಂದಿಗೆ ರಿಫ್ರೆಶ್ ಲುಕ್ ನೀಡುತ್ತದೆ. ಈಗಿರುವ ಮಾದರಿಗೆ ಹೋಲಿಸಿದರೆ, ಹೊಸದು ಹೆಚ್ಚು ಆಯತಾಕಾರದ ಆಕಾರದ ಹೆಡ್ ಲ್ಯಾಂಪ್ ಯುನಿಟ್‌ಗಳನ್ನು ಮೊದಲಿದ್ದಕ್ಕಿಂತ ಸ್ವಲ್ಪ ಕೆಳಗೆ ಇರಿಸಲಾಗಿದೆ. ಅಡ್ಡಲಾಗಿರುವ ಕ್ರೋಮ್ ಸ್ಲ್ಯಾಟ್‌ಗಳನ್ನು ತೆಗೆದುಹಾಕಿದ್ದಾರೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಇದರ ಎಲ್‌ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲೈಟ್ಸ್) ಹೊಸ ಟ್ಯೂಸನ್ ನಿಂದ ಎರವಲು ಪಡೆದಿವೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಪರಿಷ್ಕೃತ ಬಂಪರ್‌ಗಳು, ಹೊಸ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಫಾಗ್ ಲ್ಯಾಂಪ್ ಜೋಡಣೆ, ಹೊಸದಾಗಿ ವಿನ್ಯಾಸಗೊಳಿಸಿದ ಅಲಾಯ್ ವ್ಹೀಲ್ ಗಳು ಮತ್ತು ಸ್ಪ್ಲಿಟ್ ಟೈಲ್‌ಲ್ಯಾಂಪ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ ಆಂತರಿಕ ವಿನ್ಯಾಸವು ಬದಲಾಗದೆ ಉಳಿಯುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಅಲ್ಕಾಜರ್ ನಲ್ಲಿ ನಾವು ನೋಡಿದ ಆಲ್-ಬ್ಲ್ಯಾಕ್ ಕ್ಯಾಬಿನ್ ಥೀಮ್ ಅಥವಾ ಬ್ಲಾಯ್ಕ್ ಮತ್ತು ಕಂದು ಥೀಮ್‌ನಲ್ಲಿ ಇದನ್ನು ನೀಡಲಾಗುತ್ತದೆ. ಈ ಹೊಸ ಎಸ್‌ಯುವಿ ಹೊಸ ಲೆದರ್ ಹೊದಿಕೆಯೊಂದಿಗೆ ಒಳಗೊಂಡಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಎಚ್‍ಯುಡಿ (ಹೆಡ್-ಅಪ್ ಯುನಿಟ್), 360 ಡಿಗ್ರಿ ಕ್ಯಾಮೆರಾ ಮತ್ತು ADAS (ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೇರಿದಂತೆ ಕೆಲವು ಸುಧಾರಿತ ಫೀಚರ್ಸ್ ಗಳೊಂದಿಗೆ ವಾಹನ ತಯಾರಕರು ಹೊಸ ಮಾದರಿಯನ್ನು ಸಜ್ಜುಗೊಳಿಸಬಹುದು ಎಂದು ವದಂತಿಗಳಿವೆ. ಉಳಿದ ಫೀಚರ್ಸ್ ಗಳು ಈಗಿರುವ ಮಾದರಿಯಿಂದ ಮುಂದೆ ಸಾಗಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ 1.5 ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್, 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಗಳಿದೆ,

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಇನ್ನು ಪ್ರಸ್ತುತ ಮಾದರಿಯಂತೆಯೇ, 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಟರ್ಬೊ-ಪೆಟ್ರೋಲ್ ರೂಪಾಂತರಗಳು ಕೇವಲ 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ,

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಹ್ಯುಂಡೈ ತನ್ನ ಎರಡನೇ ತಲೆಮಾರಿನ ಕ್ರೆಟಾ ಎಸ್‌ಯುವಿಯನ್ನು ಕೂಡ ಹೊಸ ನವೀಕರಣಗಳೊಂದಿಗೆ ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಇದು ಹಲವು ಹೊಸ ನವೀಕರಣಗಳನ್ನು ಪಡೆದುಕೊಂಡಿತ್ತು. ಇದು ಬ್ರೆಜಿಲಿಯನ್-ಸ್ಪೆಕ್ ಹೊಸ ಹುಂಡೈ ಕ್ರೆಟಾ ಮಾದರಿಯೊಂದಿಗೆ ಸ್ಟೈಲಿಂಗ್ ಬದಲಾವಣೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಈ ಹೊಸ ಕ್ರೆಟಾ ಎಸ್‍ಯುವಿಯಲ್ಲಿ ಹೊಸ 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆಯೊಂದಿಗೆ ನೀಡಲಾಗಿದೆ. ಈ ಎಸ್‌ಯುವಿಯು ಬ್ರಾಂಡ್‌ನ ಹೊಸ ಸ್ಪೋರ್ಟಿ ವಿನ್ಯಾಸದ ಶೈಲಿಯನ್ನು ಆಧರಿಸಿದೆ. ಇದನ್ನು ನಾವು ಈಗಾಗಲೇ ಅಲ್ಕಾಜರ್, ಟ್ಯೂಸಾನ್ ಮತ್ತು ಪಾಲಿಸೇಡ್ ಸೇರಿದಂತೆ ದೊಡ್ಡ ಹುಂಡೈ ಕಾರುಗಳಲ್ಲಿ ನೋಡಿದ್ದೇವೆ .ಹ್ಯುಂಡೈ ಕಂಪನಿಯು ಬ್ರೆಜಿಲ್ ನಲ್ಲಿರುವ ಕಂಪನಿಯ ಪಿರಾಸಿಕ್ಯಾಬಾ ಕಾರು ತಯಾರಕ ಘಟಕದಲ್ಲಿ ಈ ಎಸ್‍ಯುವಿಯ ಉತ್ಪಾದನೆಯನ್ನು ಆರಂಭಿಸಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಇದರ ಕ್ಯಾಬಿನ್ ಒಳಗೆ, ಹೊಸ ಹುಂಡೈ ಕ್ರೆಟಾ ಭಾರತ-ಸ್ಪೆಕ್ ಮಾದರಿಯಂತೆಯೇ ಅದೇ ವಿನ್ಯಾಸವನ್ನು ಪಡೆಯುತ್ತದೆ. ಇದು ಸ್ಮಾರ್ಟ್ ಫೋನ್ ಕನೆಕ್ಟ್, ಆಟೋಮ್ಯಾಟಿಕ್ ಎಸಿ, ವೈರ್ ಲೆಸ್ ಚಾರ್ಜರ್, ಚಾಲಿತ ಚಾಲಕನ ಆಸನ, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರವುಗಳೊಂದಿಗೆ ದೊಡ್ಡ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಇನ್ಫೋಟೈನ್ಮೆಂಟ್ ಸಿಸ್ಟಂ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ಹೊಸ ಫೇಸ್‌ಲಿಫ್ಟ್ ನಲ್ಲಿ ಇದೇ ಫೀಚರ್ಸ್ ಗಳನ್ನು ಒಳಗೊಂಡರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಈ ಕ್ರೆಟಾ ಎಸ್‍ಯುವಿಯು ಸಂಪೂರ್ಣ ಎಲ್‌ಇಡಿ ಹೆಡ್‌ಲೈಟ್‌ಗಳು, 360 ಡಿಗ್ರಿ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೇನ್-ಅಸಿಸ್ಟ್, ಆರು ಏರ್‌ಬ್ಯಾಗ್‌ಗಳು ಇತ್ಯಾದಿಗಳನ್ನು ಪಡೆಯುತ್ತದೆ. ಇನ್ನು ಈ ಕ್ರೆಟಾ ಎಸ್‍ಯುವಿಯು 4.30 ಎಂಎಂ ಉದ್ದ, 1.79 ಎಂಎಂ ಅಗಲ ಮತ್ತು 1.62 ಎಂಎಂ ಎತ್ತರವನ್ನು ಹೊಂದಿದೆ, ಈ ಎಸ್‍ಯುವಿಯು 2.61 ಮೀಟರ್ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರೊಂದಿಗೆ ಈ ಎಸ್‍ಯುವಿಯಲ್ಲಿ 422-ಲೀಟರ್‌ಗಳಷ್ಟು ಬೂಟ್ ಸ್ಪೇಸ್ ಅನ್ನು ಒಳಗೊಂಡಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 2022ರ Hyundai Creta Facelift ಎಸ್‍ಯುವಿ

ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮಿಡ್-ಲೈಫ್ ಅಪ್‌ಡೇಟ್ ನೊಂದಿಗೆ ಪರಿಚಯಿಸಲಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Thursday, October 28, 2021, 14:34 [IST]
English summary
2022 hyundai creta facelift suv new teaser details revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+