ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಹ್ಯುಂಡೈ ಕಂಪನಿಯು ತನ್ನ 2022ರ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ಅನ್ನು ಜಾಗಾತಿಕ ಮಟ್ಟದಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. ಈ ಹೊಸ ಪಿಕ್‌ಅಪ್ ಟ್ರಕ್ ಆಕರ್ಷಕ ವಿನ್ಯಾಸ, ಪವರ್ ಫುಲ್ ಎಂಜಿನ್ ಆಯ್ಕೆಗಳು, ಅತ್ಯಾಧುನಿಕ ಫೀಚರ್ಸ್ ಮತ್ತು ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಒಳಗೊಂಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಹ್ಯುಂಡೈನ ಮಾಂಟ್ಗೊಮೆರಿ, ಅಲಬಾಮಾ ಮೂಲದ ಘಟಕದಲ್ಲಿ ಈ ಹೊಸ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ಅನ್ನು ಉತ್ಪಾದಿಸಲಿದೆ. ಇದೀಗ ಈ ಹೊಸ ಹ್ಯುಂಡೈ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ಮದರಿಯ ವಾಕ್ ರೌಂಡ್ ಮಾದರಿಯ ವಿಡಿಯೋವನು ಬಿಡುಗಡೆಗೊಳಿಸಿದೆ. ಈ ಮಾದರಿಯನ್ನು ಮೊದಲಿಗೆ ಅಮೆರಿಕದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಹೊಸ ಸಾಂತಾ ಕ್ರೂಸ್ ರಗಡ್ ಬಾಡಿ, ಹೆಚ್ಚಿನ ಟ್ಯೂಯಿಂಗ್ ಸಾಮರ್ಥ್ಯಗಳು ಮತ್ತು ಅಡ್ವೆಂಚರ್ ದಾರಿಗಳಲ್ಲಿ ಸುಲಭವಾಗಿ ಚಲಿಸಲು ಉತ್ತಮ ಸಸ್ಪಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಹ್ಯುಂಡೈ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ಮಾದರಿಯು ಟ್ಯೂಸಾನ್ ಎಸ್‍ಯುವಿಯೊಂದಿಗೆ ಸಾಕಷ್ಟು ವಿನ್ಯಾಸ ಅಂಶಗಳನ್ನು ಹಂಚಿಕೊಳ್ಳುತ್ತದೆ. ಆದರೆ ಪಿಕ್‌ಅಪ್ ಟ್ರಕ್ ಹೆಚ್ಚಿನ ರಗಡ್ ಅಥವಾ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದರಲ್ಲಿ ಕ್ರೀಸ್‌ಗಳನ್ನು ಒಳಗೊಂಡಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಇದರಲ್ಲಿ ಎಲ್ಇಡಿ ಲೈಟ್ ಗಳೊಂದಿಗೆ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್, ಪ್ಯಾರಾಮೀಟಿಕ್ ಆಭರಣ ವಿನ್ಯಾಸದೊಂದಿಗೆ ಡಿಆರ್ಎಲ್, ಕೆಳಗಿನ ವಿಭಾಗದಲ್ಲಿ ಸ್ಕಿಡ್ ಪ್ಲೇಟ್, ಪ್ರೊನೌಸಡ್ ಹುಡ್ ಮತ್ತು ಫೆಂಡರ್‌ಗಳನ್ನು ಹೊಂದಿವೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಹಿಂಭಾಗದಲ್ಲಿ ಹೊಸ ಸಾಂತಾ ಕ್ರೂಸ್ ಪಿಕ್‌ಅಪ್ ಟ್ರಕ್ ನಲ್ಲಿ ‘ಟಿ' ಲೈಟಿಂಗ್ ಸಿಗ್ನೇಚರ್, ಲಾಕ್ ಮಾಡಬಹುದಾದ ಇನ್ ಬೆಡ್ ಸ್ಟೋರೆಂಜ್ ಸ್ಪೇಸ್ ಹೊಂದಿದೆ. ಇಂಟಿಗ್ರೇಟೆಡ್ ಕಾರ್ನರ್ ಬಂಪರ್ ಸ್ಟೆಪ್‌ಗಳನ್ನು ಕೂಡ ಹೊಂದಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

2022ರ ಹ್ಯುಂಡೈ ಸಾಂತಾ ಕ್ರೂಸ್ ಪಿಕ್‌ಅಪ್ ಹಿಂದಿನ ಸೀಟ್ ಪ್ರಯಾಣಿಕರಿಗೂ ಎಸ್‍ಯುವಿ ಮಾದರಿಯ ಸೌಕರ್ಯವನ್ನು ನೀಡುತ್ತದೆ. ಇನ್ನು ಈ ಹೊಸ ಹ್ಯುಂಡೈ ಪಿಕ್‌ಅಪ್ ಟ್ರಕ್ ಡ್ಯುಯಲ್-ಕಾಕ್‌ಪಿಟ್ ವಿನ್ಯಾಸವನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಇನ್ನು ಹ್ಯುಂಡೈ ಪಿಕ್‌ಅಪ್ ಟ್ರಕ್ ನಲ್ಲಿ 10 ಇಂಚಿನ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಸ್ ಪ್ಲೇ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಂ, ಬ್ಲೂಲಿಂಕ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಇನ್ನು ಹಲವಾರು ಬ್ರಷ್ಡ್ ಅಲ್ಯೂಮಿನಿಯಂ ವಿವರಗಳು ಮತ್ತು ಸಾಫ್ಟ್ ಟಚ್ ಭಾಗಗಳು ಅದರ ಪ್ರೀಮಿಯಂ ಭಾವನೆ ಮತ್ತು ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಹ್ಯುಂಡೈ ಪಿಕ್‌ಅಪ್ ಟ್ರಕ್ ನಲ್ಲಿ ತ್ರಿಕೋನ ವಿನ್ಯಾಸವನ್ನು ಹೊಂದಿರುವ 20 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ವ್ಹೀಲ್ ಆರ್ಚರ್ ಗಳನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಇನ್ನು ಈ ಹ್ಯುಂಡೈ ಸಾಂತಾ ಕ್ರೂಸ್ ಪಿಕ್‌ಅಪ್ ನಲ್ಲಿ 2.5ಎಲ್, 4-ಸಿಲಿಂಡರ್ ಇನ್-ಲೈನ್ ಡೈರೆಕ್ಟ್ ಇಂಜೆಕ್ಟ್ ಮತ್ತು 2.5 ಎಲ್ ಡೈರೆಕ್ಟ್ ಇಂಜೆಕ್ಟ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ 2.5ಎಲ್ ಎಂಜಿನ್ 190 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ, 2.5 ಎಲ್ ಟರ್ಬೋಚಾರ್ಜ್ಡ್ ಎಂಜಿನ್ 275 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ ಹ್ಯುಂಡೈ ಪಿಕ್‌ಅಪ್ ಟ್ರಕ್

ಈ ಎಂಜಿನ್ ಗಳೊಂದಿಗೆ 8-ಸ್ಪೀಡ್ ಹೈಡ್ರಾಲಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಟರ್ಬೊ-ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಸ್ಟೀಯರಿಂಗ್ ಮೌಂಟೆಡ್ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 8-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಿದೆ.

Most Read Articles

Kannada
English summary
All-New Hyundai Santa Cruz Pickup Truck Fully Detailed – Video. Read In Kannada.
Story first published: Wednesday, May 5, 2021, 12:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X