ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಜೀಪ್ ಕಂಪಾಸ್ ಎಸ್‍ಯುವಿ
ಅಮೆರಿಕದ ವಾಹನ ತಯಾರಕ ಕಂಪನಿಯಾದ ಜೀಪ್ ಈ ವರ್ಷದ ಆರಂಭದಲ್ಲಿ ಕಂಪಾಸ್ ಫೇಸ್‌ಲಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಇದೀಗ ಜೀಪ್ ಕಂಪನಿಯು ನವೀಕರಿಸಿದ ಕಂಪಾಸ್ ಎಸ್‍ಯುವಿಯನ್ನು ಯುರೋಪಿನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ.

2022ರ ಜೀಪ್ ಕಂಪಾಸ್ ಸ್ಟೈಲಿಂಗ್‌ಗೆ ಮಾತ್ರವಲ್ಲ, ಫೀಚರ್ ಗಳ ವಿಷಯದಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಹೊಂದಿದೆ. ಇದರ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮೊದಲಿಗಿಂತಲೂ ನಯವಾದವು, ಮತ್ತು ಏಳು-ಸ್ಲ್ಯಾಟ್ ಫ್ರಂಟ್ ಗ್ರಿಲ್ ಹೊಸ ಮೆಷ್ ಅನ್ನು ಹೊಂದಿದೆ. ಇನ್ನು ಮುಂಭಾಗದ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ, ಮತ್ತು ಮುಂಭಾಗದ ಗ್ರಿಲ್‌ನ ಸ್ವಲ್ಪ ಕೆಳಗೆ, ಒಂದು ಫಾಗ್ ಲ್ಯಾಂಪ್ ಅನ್ನು ಹೊಂದಿದೆ. ಇನ್ನು ಸೈಡ್ ಪ್ರೊಫೈಲ್ ಹೊರಹೋಗುವ ಆವೃತ್ತಿಯಿಂದ ತುಂಬಾ ಭಿನ್ನವಾಗಿಲ್ಲ.

ಇನ್ನು 2022ರ ಜೀಪ್ ಕಂಪಾಸ್ ಎಸ್‌ಯುವಿ ಅಲಾಯ್ ವ್ಹೀಲ್ ಗಳಿಗೆ ಹೊಸ ವಿನ್ಯಾಸವನ್ನು ಪಡೆದುಕೊಳ್ಳುತ್ತದೆ. ಹಿಂಭಾಗದಲ್ಲಿ, ಹೊಸ ಬಂಪರ್ ಜೊತೆಗೆ ಪರಿಷ್ಕೃತ ಎಲ್ಇಡಿ ಟೈಲ್‌ಲೈಟ್‌ಗಳನ್ನು ನಾವು ನೋಡುತ್ತೇವೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಕಂಪಾಸ್ ಟ್ರೈಲ್‌ಹಾಕ್‌ನಂತೆ, ಇದು ಸಾಮಾನ್ಯ ಕಂಪಾಸ್‌ಗೆ ಹೋಲಿಸಿದರೆ ಸ್ವಲ್ಪ ವಿಭಿನ್ನವಾದ ಬಾಹ್ಯ ವಿನ್ಯಾಸವನ್ನು ಹೊಂದಿರುತ್ತದೆ, ಇದರಲ್ಲಿ ವಿಭಿನ್ನ ಬಂಪರ್‌ಗಳು, ವಿಭಿನ್ನ ಅಲಾಯ್ ವ್ಹೀಲ್ ಗಳು ಮತ್ತು ಹೊಸ ಗ್ರಾಫಿಕ್ಸ್ ಸೇರಿವೆ.

ಇನ್ನು ಅಂಡರ್ ಬೆಲ್ಲಿಯಲ್ಲಿ ಉತ್ತಮ ರಕ್ಷಣೆಗಾಗಿ ಇದು ಸುಧಾರಿತ ಸ್ಕಿಡ್ ಪ್ಲೇಟ್ ಅನ್ನು ಸಹ ಪಡೆಯುತ್ತದೆ. ಒಳಭಾಗದಲ್ಲಿ ಇದನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಜೀಪ್ ಕಂಪಾಸ್ ಫೇಸ್‌ಲಿಫ್ಟ್ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಯುಕನೆಕ್ಟ್ 5 ರೊಂದಿಗೆ) ಜೊತೆಗೆ 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಇದು ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಅಮೆಜಾನ್ ಅಲೆಕ್ಸಾ ಸಂಪರ್ಕವನ್ನು ಸಹ ಪಡೆಯುತ್ತದೆ. ಡ್ಯಾಶ್‌ಬೋರ್ಡ್ ವಿನ್ಯಾಸವು ಹೊಸದು, ವಿಭಿನ್ನ ಎಚ್‌ವಿಎಸಿ ವೆಂಟ್ಸ್ ಮತ್ತು ಕಂಟ್ರೋಲ್ ಗಳೊಂದಿಗೆ ಮತ್ತು ಸ್ಟೀರಿಂಗ್ ವ್ಹೀಲ್ ಹೊಸದಾಗಿದೆ. ಇನ್ನು ಟ್ರೈಲ್ಹಾಕ್ ಆವೃತ್ತಿಯು ವಿಭಿನ್ನ ಒಳಾಂಗಣ ಥೀಮ್ ಅನ್ನು ಹೊಂದಿದೆ,

ಯುರೋ-ಸ್ಪೆಕ್ 2022ರ ಜೀಪ್ ಕಂಪಾಸ್ ಮೊದಲಿನಂತೆಯೇ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಇದರಲ್ಲಿ ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದು 130 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೊಂದು ಟ್ಯೂನ್ 130 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಇದರೊಂದಿಗೆ 7-ಸ್ಪೀಡ್ ಡಿಸಿಟಿಯನ್ನು ಪಡೆಯುತ್ತದೆ.

ಇನ್ನು 2022ರ ಜೀಪ್ ಕಂಪಾಸ್ ಎಸ್‌ಯುವಿಯು 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಸಹ ಲಭ್ಯವಿರುತ್ತದೆ, ಇದಲ್ಲದೆ, 2022ರ ಕಂಪಾಸ್ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಸಹ ಪಡೆಯುತ್ತದೆ,

ಇದು 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ಮತ್ತು 11.4 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ ಸಂಯೋಜಿಸುತ್ತದೆ. ಇದನ್ನು 190 ಬಿಹೆಚ್‍ಪಿ ಪವರ್ ಮತ್ತು 240 ಬಿಹೆಚ್‍ಪಿ ಪವರ್ ಉತ್ಪಾದಿಸುವಂತೆ ಎರಡು ರೀತಿ ಟ್ಯೂನ್ ಮಾಡಲಾಗಿದೆ. ಇನ್ನು ಸ್ಟ್ಯಾಂಡರ್ಡ್ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ.


Click it and Unblock the Notifications








