ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಹೊಸ ಕರೋಕ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಈ ಬಹುನಿರೀಕ್ಷಿತ ಸ್ಕೋಡಾ ಕರೋಕ್(Skoda Karoq) ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಇದೇ ತಿಂಗಳ 30 ರಂದು ರಂದು ಜಾಗತಿಕವಾಗಿ ಪರಿಚಯಿಸಲಿದೆ. ಫೋಕ್ಸ್ ವ್ಯಾಗನ್ ಗ್ರೂಪ್‌ಗೆ ಕರೋಕ್ ಅತ್ಯಂತ ಯಶಸ್ವಿ ಉತ್ಪನ್ನವಾಗಿದೆ. ಮಾರಾಟವನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ ಕರೋಕ್ ಎಸ್‍ಯುವಿಯನ್ನು ಹೊಸ ಬದಲಾವಣೆಗಳೊಂದಿಗೆ ಪರಿಚಯಿಸುತ್ತಿದೆ. ಸ್ಕೋಡಾ ಕಂಪನಿಯು ಮೊದಲ ಬಾರಿಗೆ ಕರೋಕ್ ಎಸ್‍ಯುವಿಯನ್ನು 2017 ರಲ್ಲಿ ಪರಿಚಯಿಸಲಾಯಿತು, ಕರೋಕ್‌ನ ಐದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದಿಸಲಾಗಿದೆ. ಇದು ಪ್ರಸ್ತುತ 60 ದೇಶಗಳಲ್ಲಿ ಮಾರಾಟದಲ್ಲಿದೆ ಮತ್ತು ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾದಲ್ಲಿ ಹಾಗೂ ರಷ್ಯಾ ಮತ್ತು ಚೀನಾದಲ್ಲಿ ಉತ್ಪಾದಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಸ್ಕೋಡಾ ಕರೋಕ್ ಈ ವರ್ಷದ ಆರಂಭದವರೆಗೂ ಭಾರತದಲ್ಲಿ ಮಾರಾಟವಾಗಿತ್ತು. ಇದನ್ನು CBU (ಸಂಪೂರ್ಣವಾಗಿ ನಿರ್ಮಿಸಿದ ಯುನಿಟ್) ಎಂದು ಪ್ರಾರಂಭಿಸಲಾಯಿತು ಬಿಡುಗಡೆಗೊಂಡ ಬಳಿಕ ಆರಂಭಿಕವಾಗಿ ಬಹಳಷ್ಟು ಮಾರಾಟವಾಯಿತು. ನಂತರ ಕಂಪನಿಯು ಭಾರತದಲ್ಲಿ ಈ ಕರೋಕ್ ಅನ್ನು ಸ್ಥಗಿತಗೊಳಿಸಿತ್ತು. ಏಕೆಂದರೆ ಇದೀಗ ಸ್ಕೋಡಾ ಹೊಸ ಸ್ಕೋಡಾ ಕುಶಾಕ್‌ನತ್ತ ಗಮನ ಹರಿಸಲಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಸ್ಕೋಡಾ ಕಂಪನಿಯು ಬಿಡುಗಡೆಗೊಳಿಸಿದ ರೇಖಾಚಿತ್ರಗಳಲ್ಲಿ 2022ರ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಪರಿಷ್ಕೃತ ಮುಂಭಾಗದ ಫಾಸಿಕದೊಂದಿಗೆ ಬರಲಿದೆ ಬರಲಿದೆ ಎಂದು ಬಹಿರಂಗಪಡಿಸುತ್ತದೆ. ಇದು ಹೆಡ್‌ಲೈಟ್‌ನ ಸ್ವಲ್ಪ ತೆಳ್ಳನೆಯ ಕೆಳಭಾಗವನ್ನು ಮತ್ತು ಸ್ವಲ್ಪ ನವೀಕರಿಸಿದ ಗ್ರಿಲ್ ಅನ್ನು ಪಡೆಯುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಇದರ ಎಲ್‌ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು) ವಿಭಜಿತ ವಿನ್ಯಾಸವನ್ನು ಹೊಂದಿವೆ, ಇದು ಹಿಂದಿನ ತಲೆಮಾರಿನ ಆಕ್ಟೀವಿಯಾ ಮಾದರಿಯಿಂದ ಪ್ರೇರಿತವಾಗಿದೆ. ಕೆಳಗಿನ ಲ್ಯಂಪ್ ಗಳು ಈಗ ಬದಿಗೆ ಕೋನೀಯವಾಗಿವೆ, ಮತ್ತು ಕ್ಲಸ್ಟರ್ ಹೊರಹೋಗುವ ಮಾದರಿಗಿಂತ ದೊಡ್ಡದಾಗಿ ತೋರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಇದು ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಪಡೆಯುತ್ತದೆ, ಇದು ವಿಶಾಲವಾದ ಏರ್ ಟೆಕ್ ಅನ್ನು ಹೊಂದಿದೆ ಮತ್ತು ಹೊಸ ಟ್ರಿಮ್ ಅನ್ನು ಡಾರ್ಕ್ ಕ್ರೋಮ್‌ ಫಿನಿಶಿಂಗ್ ಅನ್ನು ಹೊಂದಿದೆ. ಈ ಹೊಸ ಕರೋಕ್ ಎಸ್‍ಯುವಿಯು ಪರಿಷ್ಕೃತ ಟೈಲ್‌ಲೈಟ್‌ಗಳನ್ನು ಸಹ ಪಡೆಯುತ್ತದೆ, ಇದು ಈಗ ಟೈಲ್‌ಗೇಟ್‌ನಲ್ಲಿ ವಿಸ್ತರಿಸುತ್ತದೆ ಮತ್ತು ಎಡಭಾಗದಲ್ಲಿ ವಿಭಿನ್ನ ಆಕಾರವನ್ನು ಹೊಂದಿದೆ. ಟೈಲ್‌ಗೇಟ್‌ನಲ್ಲಿ ದೊಡ್ಡ ಸ್ಕೋಡಾ ಬ್ಯಾಡ್ಜ್ ಅನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಇದರ ಹೊರತಾಗಿ, ನವೀಕರಣದೊಂದಿಗೆ ಹೊಸ ಬಣ್ಣದ ಆಯ್ಕೆಗಳು ಮತ್ತು ಅಲಾಯ್ ವ್ಹೀಲ್ ವಿನ್ಯಾಸಗಳನ್ನು ನಾವು ನಿರೀಕ್ಷಿಸಬಹುದು. ಒಳಭಾಗದಲ್ಲಿ, ಹೊಸ ಆಕ್ಟೀವಿಯಾ ಮತ್ತು ಕೊಡಿಯಾಕ್‌ನಲ್ಲಿ ಸ್ಕೋಡಾ ನೀಡುತ್ತಿರುವ ಹೊಸ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಆಪರೇಟಿಂಗ್ ಸಿಸ್ಟಮ್‌ನ ಸೇರ್ಪಡೆ ಇರುತ್ತದೆ. ಆದರೆ ಕ್ಯಾಬಿನ್ ಹೆಚ್ಚು ಅಥವಾ ಕಡಿಮೆ ಬದಲಾಗದೆ ಉಳಿಯುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಇನ್ನು ಎಂಜಿನ್ ಆಯ್ಕೆಗಳು ಬದಲಾಗದೆ ಉಳಿಯಬಹುದು. ಲೈನ್-ಅಪ್‌ಗೆ ಸೇರ್ಪಡೆಗೊಳ್ಳುವ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿ ಇರುತ್ತದೆ ಎಂಬ ಮಾಹಿತಿಯು ಬಹಿರಂಗವಾಗಿಲ್ಲ. ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಎಸ್‍ಯುವಿ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ, ಇದರ ಜೊತೆಗೆ ಹೊಸ ಫೀಚರ್ಸ್ ಗಳನ್ನು ನೀಡಬಹುದು.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಪ್ರಸ್ತುತ ಮಾರಾಟದಲ್ಲಿರುವ ಸ್ಕೋಡಾ ಕರೋಕ್ ಎಸ್‍ಯುವಿಯಲ್ಲಿ 1.5 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಈ ಸ್ಕೋಡಾ ಕರೋಕ್ ಎಸ್‍‍ಯುವಿ ಕಂಪನಿಯ ಎಂಕ್ಯೂಬಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಎಸ್‍ಯುವಿಯಲ್ಲಿ ಎಎಫ್ಎಸ್ (ಅಡಾಪ್ಟಿವ್ ಫ್ರಂಟ್ ಲೈಟಿಂಗ್), ಸಿಗ್ನೇಚರ್ ಬಟರ್ಫ್ಲೈ ಗ್ರಿಲ್, ಸ್ಕ್ವೇರ್ ವೀಲ್ ಆರ್ಚ್, ಆರ್ 17 ಅರೋನಿಯಾ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಸಿ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳೊಂದಿಗೆ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಕರೋಕ್ ಎಸ್‍ಯುವಿಯ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಯಲ್ಲಿ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂಗಳಿವೆ. ಇದರೊಂದಿಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಸನ್‍ರೂಫ್ ಮತ್ತು ಲೆದರ್ ಅಪ್‍‍ಹೋಲೆಸ್ಟರಿ ಸೀಟುಗಳನ್ನು ಕೂಡ ಹೊಂದಿವೆ. ಈ ಎಸ್‍ಯುವಿಯಲ್ಲಿ ಸುರಕ್ಷತಾ ಫೀಚರ್ ಗಳಾಗಿ, 9 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಇಎಸ್‌ಸಿ, ಹಿಲ್-ಸ್ಟಾರ್ಟ್ ಅಸಿಸ್ಟ್ ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ನೀಡಲಾಗಿದೆ

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಇನ್ನು ಸ್ಕೋಡಾ ಕಂಪನಿಯು ತನ್ನ ಹೊಸ ಸ್ಲಾವಿಯಾ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್ ಇದೇ ತಿಂಗಳ 18 ರಂದು ಅನಾವರಣವಾಗಲಿದೆ. ಭಾರತದಲ್ಲಿ ಸ್ಕೋಡಾ ಸ್ಲಾವಿಯಾ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲು ಸಿದ್ಧವಾಗಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್‌ನ ಎರಡನೇ ಮಾದರಿಯಾಗಿದೆ, ಇದು ಹೊಸ ಹೂಡಿಕೆ ಮತ್ತು ಉತ್ಪನ್ನಗಳ ಶ್ರೇಣಿಯನ್ನು ತರುತ್ತದೆ. ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಯ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Karoq ಫೇಸ್‌ಲಿಫ್ಟ್ ಎಸ್‍ಯುವಿ

ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಮಾದರಿಯು ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಫೋಕ್ಸ್ ವ್ಯಾಗನ್ ಟಿ-ರಾಕ್ ಮತ್ತು ಹ್ಯುಂಡೈ ಟ್ಯೂಸಾನ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಸ್ಕೋಡಾ ತನ್ನ ಕರೋಕ್ ಫೇಸ್‌ಲಿಫ್ಟ್‌ ಎಸ್‍ಯುವಿಯನ್ನು ಮತ್ತೆ ಭಾರತಕ್ಕೆ ತರುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ, ಇನ್ನು ಈ ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಮಾದರಿಯು ಅನಾವರಣಗೊಂಡ ಬಳಿಕ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

Most Read Articles

Kannada
Read more on ಸ್ಕೋಡಾ skoda
English summary
2022 karoq facelift global debut soon skoda revealed new design sketches details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X