Just In
- 29 min ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- 1 hr ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 3 hrs ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 3 hrs ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Maruti Vitara Brezza ಎಸ್ಯುವಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾವನ್ನು ಮಾರಾಟ ಮಾಡುತ್ತಿದೆ. ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮರಾಟವಾಗುವ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಒಂದಾಗಿದೆ.
2016ರ ಆರಂಭದಲ್ಲಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಪ್ರಬಲ್ಯವನ್ನು ಸಾಧಿಸುತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಸೋಲಿಸುವ ಮೂಲಕ ವಿಟಾರಾ ಬ್ರೆಝಾ ನಿಜವಾಗಿಯೂ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ದೇಶದ ಅತಿದೊಡ್ಡ ಕಾರು ತಯಾರಕರು ಹೊಸ ವಿಟಾರಾ ಬ್ರೆಝಾವನ್ನು ನವೀಕರಿಸಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಚಿತ್ರಗಳು ಆನ್ಲೈನ್ನಲ್ಲಿ ಇತ್ತೀಚೆಗೆ ಸೋರಿಕೆಯಾಗಿವೆ. ಹೊಸ ಬ್ರೆಝಾದಲ್ಲಿ ಕಂಡುಬರುವ ಪ್ರಮುಖ ಬದಲಾವಣೆಗಳೆಂದರೆ ರಿಫ್ರೆಶ್ ಮಾಡಿದ ಬಾಹ್ಯ ಪ್ರೊಫೈಲ್, ನವೀಕರಿಸಿದ ಕ್ಯಾಬಿನ್ ಪಡೆಯುತ್ತದೆ.
ಹೊಸ ಮಾರುತಿ ವಿಟಾರಾ ಬ್ರೆಝಾ ಎಸ್ಯುವಿ ಕಾಸ್ಮೆಟಿಕ್ ನಲ್ಲಿ ಬದಲಾವಣೆಗಳನ್ನು ಪಡೆಯಲಿದೆ, ಅಲ್ಲದೇ 2022ರ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೆವೆ. ಈ ಹೊಸ ಫೀಚರ್ಸ್ ಗಳ ಮಾಹಿತಿ ಇಲ್ಲಿದೆ,
ಎಲೆಕ್ಟ್ರಿಕ್ ಸನ್ರೂಫ್
ಹೊಸ ಸ್ಪೈ ಚಿತ್ರಗಳ ಪ್ರಕಾರ, ಮಾರುತಿ ಸುಜುಕಿ ಬ್ರೆಝಾ ಎಲೆಕ್ಟ್ರಿಕ್ ಸನ್ರೂಫ್ ಅನ್ನು ಹೊಂದಿದೆ. ಇದು ಟಾಪ್-ಎಂಡ್ ರೂಪಾಂತರಕ್ಕೆ ಸೀಮಿತವಾಗಿರುತ್ತದೆ. ವಿಟಾರಾ ಬ್ರೆಝಾ ಪ್ರತಿಸ್ಪರ್ಧಿಗಳಾದ ಟಾಟಾ ನೆಕ್ಸಾನ್, ಮಹೀಂದ್ರಾ XUV300, ಕಿಯಾ ಸೊನೆಟ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಲ್ಲಿ ಈ ಫೀಚರ್ ಅನ್ನು ಹೊಂದಿದೆ.
ಪ್ಯಾಡಲ್ ಶಿಫ್ಟರ್ಗಳು
ಇದು ಮಾರುತಿಗೆ ಮೊದಲನೆಯದು. ಅದೇ 2022ರ ಬ್ರೆಝಾ ಪ್ಯಾಡಲ್ ಶಿಫ್ಟರ್ಗಳನ್ನು ಸಹ ಅಳವಡಿಸಲಾಗಿದೆ. ಸದ್ಯಕ್ಕೆ, ಅವುಗಳು ಸಬ್-4 ಮೀಟರ್ ಎಸ್ಯುವಿ ವಿಭಾಗದಲ್ಲಿ ಕಿಯಾ ಸೋನೆಟ್ನಲ್ಲಿ ಮಾತ್ರ ಕಂಡುಬರುತ್ತವೆ. ಇದು ಬಹಳ ಮುಖ್ಯವಾದ ವೈಶಿಷ್ಟ್ಯವಲ್ಲದಿದ್ದರೂ, ಅದರ ಸೇರ್ಪಡೆಯು ಮಾರುತಿ ಕಾಂಪ್ಯಾಕ್ಟ್ ಯುಟಿಲಿಟಿ ವಾಹನಕ್ಕೆ ಸ್ಪೋರ್ಟಿ ಸ್ಪರ್ಶವನ್ನು ನೀಡುತ್ತದೆ.
ಇನ್ಫೋಟೈನ್ಮೆಂಟ್ ಸಿಸ್ಟಮ್ಗಾಗಿ ದೊಡ್ಡ ಟಚ್ಸ್ಕ್ರೀನ್
ಹೊಸ ಬ್ರೆಝಾವನ್ನು ಫ್ರೀ-ಸ್ಟ್ಯಾಂಡಿಂಗ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನೊಂದಿಗೆ ನೋಡಬಹುದು ಮತ್ತು ಇದು ಪ್ರಸ್ತುತಕ್ಕಿಂತ ದೊಡ್ಡದಾಗಿದೆ. 7-ಇಂಚಿನ ಟಚ್ಸ್ಕ್ರೀನ್ನೊಂದಿಗೆ ಸ್ಮಾರ್ಟ್ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್ ಸೆಟಪ್ನಲ್ಲಿ ಹೊಸ ಸಿಸ್ಟಮ್ ಉತ್ತಮ ಅಪ್ಗ್ರೇಡ್ ಆಗಿರುತ್ತದೆ.
ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ
ಹೊಸ ಬ್ರೆಝಾ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇಗಾಗಿ ವೈರ್ಲೆಸ್ ಕನೆಕ್ಟಿವಿಟಿ ಪಡೆಯುವ ನಿರೀಕ್ಷೆಯಿದೆ, ಇದು ಪ್ರಸ್ತುತ ಹೆಚ್ಚು ಟ್ರೆಂಡಿಂಗ್ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಅಪ್ಡೇಟ್ ಮಾಡಲಾದ ಮಾಡೆಲ್ನ ಹೆಚ್ಚಿನ ವಿಶೇಷತೆಯ ರೂಪಾಂತರಗಳಿಗೆ ಇದನ್ನು ಇನ್ನೂ ನಿರ್ಬಂಧಿಸಬಹುದು ಎಂದು ಅದು ಹೇಳಿದೆ.
ಕನೆಕ್ಟಿವಿಟಿ ಕಾರ್ ಟೆಕ್
2022ರ ವಿಟಾರಾ ಬ್ರೆಝಾ ಹೆಚ್ಚು ಸುಧಾರಿತ ಕನೆಕ್ಟಿವಿಟಿ ಕಾರು ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸುವ ನಿರೀಕ್ಷೆಯಿದೆ. ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಡ್ಲೈಟ್ ಕಂಟ್ರೋಲ್ನಂತಹ ವೈಶಿಷ್ಟ್ಯಗಳು ಪಡೆಯುವ ಸಾಧ್ಯತೆಗಳಿದೆ.
ಹೊಸ ಡ್ರೈವರ್ಸ್ ಡಿಸ್ ಪ್ಲೇ
ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯಲಿದೆ. ಇದು ಡಿಜಿಟಲ್ ಯುನಿಟ್ ನಂತೆ ಕಾಣುತ್ತಿಲ್ಲ. ಬದಲಿಗೆ ಎಸ್-ಕ್ರಾಸ್ ಮತ್ತು ಸಿಯಾಜ್ನಂತೆಯೇ ಇರುತ್ತದೆ. ಇದು ವ್ಯಾಪಕವಾದ ಮಾಹಿತಿಯನ್ನು ತೋರಿಸುವ ದೊಡ್ಡದಾದ ಬಣ್ಣದ MID ಸಿಸ್ಟಂ ಪಡೆಯುತ್ತದೆ.
ಸುರಕ್ಷತಾ ಫೀಚರ್
ಈ ಸಬ್ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚಿನ ಸುರಕ್ಷತೆಗಾಗಿ, ಹೆಚ್ಚಿನ ಏರ್ಬ್ಯಾಗ್ಗಳನ್ನು (ಪ್ರಸ್ತುತ ಮಾದರಿಯು ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳನ್ನು ಮಾತ್ರ ಪಡೆಯುವುದರಿಂದ) ನೀಡಬಹುದು. 2022ರ ಬ್ರೆಝಾವನ್ನು ಸುಜುಕಿ ಹಾರ್ಟೆಕ್ಟ್ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸುವ ಸಾಧ್ಯತೆಯಿದೆ, ಇದು ನಾಲ್ಕು ಸ್ಟಾರ್ಗಳ ಪ್ರಸ್ತುತ ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ರೇಟಿಂಗ್ ಅನ್ನು ಇನ್ನಷ್ಟು ಸುಧಾರಿಸುತ್ತದೆ.
ಇನ್ನು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ವಿಟಾರಾ ಬ್ರೆಝಾ ಮಾದರಿಯು ಕೇವಲ 1.3-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಲಭ್ಯವಿತ್ತು. ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ಫೇಸ್ಲಿಫ್ಟ್ ಆವೃತ್ತಿಯು ಫೆಬ್ರವರಿ 2020ರಲ್ಲಿ ಪಚಯಿಸಿದ್ದರು. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವಾಗ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದ್ದರು.
ಡೀಸೆಲ್ ವಾಹನವು ಸ್ಥಗಿತಗೊಂಡ ನಂತರವೂ ಖರೀದಿದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 105 ಬಿಹೆಚ್ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಮುಂದುವರೆಸುವ ಸಾಧ್ಯತೆಗಳಿದೆ,
ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಎಸ್ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಪೈಪೋಟಿ ನೀಡುವುದು ಮುಂದುವರೆಸಲಿದೆ.