ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ಹೊಸ ಮಾಲಿನ್ಯ ನಿಯಮಗಳು ಜಾರಿಗೆ ಬಂದ ನಂತರ ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ನಿಸ್ಸಾನ್‌ ಭಾರತದಲ್ಲಿ ಕೇವಲ ನಿಸ್ಸಾನ್ ಕಿಕ್ಸ್ ಕಾರ್ ಅನ್ನು ಮಾತ್ರ ಬಿಎಸ್ 6 ಎಂಜಿನ್'ನೊಂದಿಗೆ ಮಾರಾಟ ಮಾಡುತ್ತಿತ್ತು.

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ಕಳೆದ ವರ್ಷ ನಿಸ್ಸಾನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿ ಹೊಸಸಂಚಲನವನ್ನು ಸೃಷ್ಟಿಸಿತು. ಹೊಸ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ಮಾರಾಟದಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ನಿಸ್ಸಾನ್ ಇಂಡಿಯಾ ನೀಡಿರುವಮಾಹಿತಿಗಳ ಪ್ರಕಾರ ಈ ಎಸ್‌ಯುವಿಯು ಬಿಡುಗಡೆಯಾದಾಗಿನಿಂದ ಇದುವರೆಗೂ 33,000ಕ್ಕೂ ಹೆಚ್ಚು ಯೂನಿಟ್ ಬುಕ್ಕಿಂಗ್'ಗಳನ್ನು ಪಡೆದಿದೆ.

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ನಿಸ್ಸಾನ್ ಕಂಪನಿಯು ಕಳೆದ ತಿಂಗಳು ಹೊಸ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಒಟ್ಟು 4,527 ಯುನಿಟ್'ಗಳನ್ನು ಮಾರಾಟ ಮಾಡಿದೆ. ಈ ಮಾರಾಟದ ಮೂಲಕ ನಿಸ್ಸಾನ್ ಇಂಡಿಯಾ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ಹೊಸ ಮ್ಯಾಗ್ನೈಟ್ ಎಸ್‌ಯುವಿಯ ಮಾರಾಟದ ಆಧಾರದ ಮೇಲೆ ನಿಸ್ಸಾನ್ ಕಂಪನಿಯು ಮಾರಾಟದಲ್ಲಿ ಫೋರ್ಡ್, ಎಂಜಿ ಮೋಟಾರ್, ಫೋಕ್ಸ್‌ವ್ಯಾಗನ್, ಸ್ಕೋಡಾ ಹಾಗೂ ಫಿಯೆಟ್‌ ಕಂಪನಿಗಳನ್ನು ಹಿಂದಿಕ್ಕಿದೆ. 2019ರ ಡಿಸೆಂಬರ್ ತಿಂಗಳಿನಲ್ಲಿ ನಿಸ್ಸಾನ್ ಇಂಡಿಯಾ ಒಟ್ಟು 599 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ತಿಂಗಳ ಮಾರಾಟದ ಲೆಕ್ಕದಲ್ಲಿ ನಿಸ್ಸಾನ್ ಇಂಡಿಯಾ ಕಂಪನಿಯು 655%ನಷ್ಟು ಭಾರಿ ಪ್ರಮಾಣದ ಏರಿಕೆಯನ್ನು ದಾಖಲಿಸಿದೆ. ಹೊಸ ಮ್ಯಾಗ್ನೈಟ್ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.99 ಲಕ್ಷಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ಮ್ಯಾಗ್ನೈಟ್ ಎಸ್‌ಯುವಿಯು ಈ ಸೆಗ್'ಮೆಂಟಿನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್ ಹಾಗೂ ಹೋಂಡಾ ಡಬ್ಲ್ಯುಆರ್-ವಿಗಳಿಗೆ ಪೈಪೋಟಿ ನೀಡುತ್ತದೆ.

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ಆದರೆ ಈ ಎಸ್‌ಯುವಿಗಳ ಬೆಲೆಗೆ ಹೋಲಿಸಿದರೆ ಮ್ಯಾಗ್ನೈಟ್ ಎಸ್‌ಯುವಿಯು ಕೈಗೆಟುಕುವ ಬೆಲೆಯನ್ನು ಹೊಂದಿದೆ. ನಿಸ್ಸಾನ್ ಇಂಡಿಯಾ ಕಂಪನಿಯು ಈ ಎಸ್‌ಯುವಿಯನ್ನು ತನ್ನ ಹೊಸ ಸಿಎಂಎಫ್-ಎ ಪ್ಲಸ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ನಿಸ್ಸಾನ್‌ನ ಪಾಲುದಾರ ಕಂಪನಿಯಾದ ರೆನಾಲ್ಟ್ ಇಂಡಿಯಾ ಸಹ ಶೀಘ್ರದಲ್ಲಿಯೇ ತನ್ನ ಹೊಸ ಕಿಗರ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಈ ಪ್ಲಾಟ್‌ಫಾರಂನಲ್ಲಿಬಿಡುಗಡೆಗೊಳಿಸಲಿದೆ ಎಂಬುದು ಗಮನಾರ್ಹ.

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ಹೊಸ ರೆನಾಲ್ಟ್ ಕಿಗರ್ ಬಿಡುಗಡೆಯಾದ ನಂತರವೂ ನಿಸ್ಸಾನ್ ಮ್ಯಾಗ್ನೈಟ್ ಮಾರಾಟದಲ್ಲಿ ಇದೇ ವೇಗವನ್ನು ಕಾಯ್ದುಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ನಿಸ್ಸಾನ್ ಇಂಡಿಯಾ ಕಂಪನಿಯು ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹಲವಾರು ಫೀಚರ್ ಹಾಗೂ ಎಕ್ವಿಪ್'ಮೆಂಟ್'ಗಳೊಂದಿಗೆ ಬಿಡುಗಡೆಗೊಳಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮ್ಯಾಗ್ನೈಟ್ ಎಸ್‌ಯುವಿ ಮಾರಾಟದ ಮೂಲಕ ಟಾಪ್ 10ನಲ್ಲಿ ಸ್ಥಾನ ಪಡೆದ ನಿಸ್ಸಾನ್

ಈ ಎಸ್‌ಯುವಿಯನ್ನು 1.0 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದರೆ, ಟರ್ಬೊ ಪೆಟ್ರೋಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಹೊಂದಿದೆ.

Most Read Articles

Kannada
English summary
4527 units magnite suv sold in January 2021. Read in Kannada.
Story first published: Monday, February 1, 2021, 20:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X