ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಇದನ್ನು ಗಮನಿಸಿದಾಗ ಭಾರತದ ಆಟೋಮೊಬೈಲ್ ಉದ್ಯಮವು ವಿದ್ಯುದೀಕರಣಕ್ಕೆ ಪರಿವರ್ತನೆಯಾಗುತ್ತಿರುವುದು ಸ್ಪಷ್ಟವಾಗುತ್ತದೆ. ಆದರೆ ಭಾರತದ ಆಟೋ ಮೊಬೈಲ್ ಉದ್ಯಮವು ಪೂರ್ತಿಯಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆಗಲು ಹೆಚ್ಚು ಸಮಯ ಬೇಕಾಗುತ್ತದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆದರೂ ಹೆಚ್ಚು ದೂರ ಚಲಿಸುವುದಿಲ್ಲ ಎಂಬ ಅಭಿಪ್ರಾಯಗಳಿವೆ. ಜೊತೆಗೆ ಪೆಟ್ರೋಲ್ ಬಂಕ್ ಗಳ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಈ ಕಾರಣಗಳಿಗಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಜನರಲ್ಲಿ ಎಲೆಕ್ಟ್ರಿಕ್ ವಾಹನಗಳ ಮೂಡಿರುವ ಭೀತಿಯನ್ನು ಹೋಗಲಾಡಿಸಲು ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಕ್ರಮಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಸಹ ಸೇರಿದೆ. ದೆಹಲಿಯಲ್ಲಿ ಅಲ್ಲಿನ ರಾಜ್ಯ ಸರ್ಕಾರವು ಹಲವೆಡೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಈಗ ಬೃಹನ್ ಮುಂಬೈ ಕಾರ್ಪೊರೇಷನ್, ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದಿದೆ. ಅಂದ ಹಾಗೆ ಇದು ಮುಂಬೈನ ಮೊದಲ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಎಂಬುದು ಗಮನಾರ್ಹ. ಈ ಚಾರ್ಜಿಂಗ್ ಕೇಂದ್ರವು ಮುಂಬೈನ ದಾದರ್ ಪ್ರದೇಶದ ಕೋಕಿನೂರ್ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿದೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಈ ಚಾರ್ಜಿಂಗ್ ಕೇಂದ್ರವನ್ನು ಮಹಾರಾಷ್ಟ್ರದ ಪರಿಸರ ಸಚಿವ ಹಾಗೂ ಮುಖ್ಯಮಂತ್ರಿ ಉದ್ದವ್ ಠಾಕ್ರೆರವರ ಪುತ್ರ ಆದಿತ್ಯ ಠಾಕ್ರೆ, ಉದ್ಘಾಟಿಸಿದರು. ಈ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರದಲ್ಲಿ ಒಂದು ಸಮಯದಲ್ಲಿ ಒಟ್ಟು 7 ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದು. ಮಹಾರಾಷ್ಟ್ರ ರಾಜ್ಯದಲ್ಲಿ ಸಾರ್ವಜನಿಕ ಪಾರ್ಕಿಂಗ್ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸುತ್ತಿರುವುದು ಇದೇ ಮೊದಲು.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ವರದಿಗಳ ಪ್ರಕಾರ, ವಿದ್ಯುತ್ ವಾಹನದ ಚಾರ್ಜಿಂಗ್ ಕೇಂದ್ರವು ದಿನದ 24 ಗಂಟೆಗಳು, ವಾರದ ಏಳು ದಿನಗಳು ತೆರೆದಿರುತ್ತದೆ. ಒಟ್ಟು ಏಳು ಚಾರ್ಜರ್‌ಗಳಲ್ಲಿ ನಾಲ್ಕು ಫಾಸ್ಟ್ ಚಾರ್ಜರ್‌ಗಳಾಗಿವೆ. ಈ ಚಾರ್ಜರ್ ಗಳ ಮೂಲಕ ಎಲೆಕ್ಟ್ರಿಕ್ ಕಾರುಗಳನ್ನು ಒಂದರಿಂದ ಎರಡು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಉಳಿದ ಮೂರು ಸಾಮಾನ್ಯ ಚಾರ್ಜರ್‌ಗಳಾಗಿವೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಸಾಮಾನ್ಯ ಚಾರ್ಜರ್ ಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 6 ಗಂಟೆ ಬೇಕಾಗುತ್ತದೆ ಎಂದು ಹೇಳಲಾಗಿದೆ. ವಾಹನಗಳ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಮುಂಬೈ ನಿಗಮವು ಎಲೆಕ್ಟ್ರಿಕ್ ವಾಹನ ಸವಾರರಿಂದ ಪ್ರತಿ ಯೂನಿಟಿಗೆ ರೂ. 15 ಶುಲ್ಕ ವಿಧಿಸಲು ನಿರ್ಧರಿಸಿದೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಈ ಚಾರ್ಜಿಂಗ್ ಕೇಂದ್ರವನ್ನು ಉದ್ಘಾಟಿಸಿದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಹಾರಾಷ್ಟ್ರದ ಪರಿಸರ ಸಚಿವ ಆದಿತ್ಯ ಠಾಕ್ರೆ, ಈ ಚಾರ್ಜಿಂಗ್ ಕೇಂದ್ರವನ್ನು ಪರಿಸರವನ್ನು ರಕ್ಷಿಸಲು ಹಾಗೂ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತೆರೆಯಲಾಗಿದೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಾವು ಒಂದು ತಿಂಗಳ ಹಿಂದೆ ರಾಜ್ಯದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿದ್ದೆವು. ಇಂತಹ ಪ್ರಯತ್ನಗಳನ್ನು ಎಲ್ಲ ಕೋನಗಳಿಂದ ನೋಡುವುದು ಸಂತಸ ತಂದಿದೆ. ರಾಜ್ಯದ ಲಾಭಕ್ಕಾಗಿ ಸರ್ಕಾರ ಕೈಗೊಂಡ ಹಲವು ಕ್ರಮಗಳಲ್ಲಿ ಇದೂ ಸಹ ಒಂದು ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಅವಶ್ಯಕತೆಯಿರುವುದರಿಂದ ಮಹಾರಾಷ್ಟ್ರದ ಪರಿಸರ ಇಲಾಖೆಯು ತನ್ನ ಕಾನೂನು ವ್ಯಾಪ್ತಿಯಲ್ಲಿ ಮುಂಬೈ ನಗರದ ಇನ್ನೂ ಹಲವು ಭಾಗಗಳಲ್ಲಿ ಇಂತಹ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವಂತೆ ಮುಂಬೈ ನಿಗಮವನ್ನು ಕೋರಿದೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಈ ಬಗ್ಗೆ ಮಾತನಾಡಿರುವ ಆದಿತ್ಯ ಠಾಕ್ರೆರವರು ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ಪ್ರದೇಶಗಳಲ್ಲಿ, ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ಸಮೀಕ್ಷೆ ನಡೆಸಲಾಗಿದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಹೊಸ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಅವರು ಹೇಳಿದರು.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಕೇವಲ ಮಹಾರಾಷ್ಟ್ರ ರಾಜ್ಯ ಸರ್ಕಾರವು ಮಾತ್ರವಲ್ಲದೇ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿಯನ್ನು ನೀಡುತ್ತದೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಇದರ ಜೊತೆಗೆ ಕೆಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕ ಸಬ್ಸಿಡಿಗಳನ್ನು ಘೋಷಿಸಿವೆ. ಅದರಲ್ಲೂ ಗುಜರಾತ್ ರಾಜ್ಯ ಸರ್ಕಾರವು ದೊಡ್ಡ ಮೊತ್ತದ ಸಬ್ಸಿಡಿಯನ್ನು ನೀಡುತ್ತದೆ. ಇದರಿಂದಾಗಿ ಗುಜರಾತ್ ರಾಜ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಮುಂಬೈನಲ್ಲಿ ಮೊದಲ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದ ಮಹಾರಾಷ್ಟ್ರ ಸರ್ಕಾರ

ಇತ್ತೀಚೆಗೆ ಅಂದರೆ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿ ಹಾಗೂ ಸಿಂಪಲ್ ಎನರ್ಜಿ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದವು.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Aditya thakre inaugurates mumbai s first public electric vehicle charging station details
Story first published: Friday, August 20, 2021, 13:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X