ಅಲ್ಕಾಜರ್ ಎಸ್‌ಯುವಿ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹ್ಯುಂಡೈ ಡೀಲರ್ಸ್
ಅಲ್ಕಾಜರ್ ಎಸ್‌ಯುವಿ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ಹ್ಯುಂಡೈ ಡೀಲರ್ಸ್
ಹ್ಯುಂಡೈ ಮೋಟಾರ್ಸ್ ಇಂಡಿಯಾ ಕಂಪನಿಯು ಮುಂದಿನ ತಿಂಗಳು 6ರಂದು ತನ್ನ ಹೊಚ್ಚ ಹೊಸ ಅಲ್ಕಾಜರ್ ಎಸ್‌ಯುವಿ ಕಾರು ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು ಖರೀದಿಗಾಗಿ ಹ್ಯುಂಡೈ ಪ್ರಮುಖ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಸ್ವಿಕರಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಅಲ್ಕಾಜರ್ ಕಾರು ಖರೀದಿಗಾಗಿ ಹ್ಯುಂಡೈ ಕಂಪನಿಯು ಕಾರು ಅನಾವರಣಗೊಳ್ಳುವ ದಿನದಂದೇ ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದು, ಕಾರು ಅನಾವರಣಗೊಂಡ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹೊಸ ಅಲ್ಕಾಜರ್ 7 ಸೀಟರ್ ಎಸ್‌ಯುವಿ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಸೌಲಭ್ಯಗಳೊಂದಿಗೆ 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕ್ರೆಟಾ ಮಾದರಿಯನ್ನು ಆಧರಿಸಿ ಅಭಿವೃದ್ದಿಗೊಂಡಿದೆ.

ಅಲ್ಕಾಜರ್ ಕಾರಿನಲ್ಲಿ ವಿಸ್ತರಿತ ಕ್ಯಾಬಿನ್‌ನೊಂದಿಗೆ ಮೂರು ಸಾಲಿನ ಆಸನಗಳೊಂದಿಗೆ 7 ಸೀಟರ್ ಸೌಲಭ್ಯವನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಲಾಗಿದ್ದು, ಗ್ರಾಹಕರು ಹೊಸ ಕಾರಿನಲ್ಲಿ ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ ಕಾರಿನ 6 ಸೀಟರ್ ಮಾದರಿಯಲ್ಲಿ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ನೊಂದಿಗೆ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಲಾಗಿದ್ದು, ಹಿಂಬದಿಯ ಸವಾರರಿಗೂ ಹೆಡ್‌ರೆಸ್ಟ್, ಸೈಡ್ ಬಾಟಲ್ ಹೋಲ್ಡರ್ ಸೌಲಭ್ಯಗಳಿವೆ.

6 ಸೀಟರ್ ಮಾದರಿಯು 2+2+2 ಮತ್ತು 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿರಲಿದ್ದು, ಕ್ರೆಟಾ ಮಾದರಿಯಂತೆ ವೀಲ್ಹ್ ಬೆಸ್‌ನೊಂದಿಗೆ ಮೂರನೇ ಸಾಲಿನ ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲು ಕ್ಯಾಬಿನ್ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಈ ಮೂಲಕ ಮಧ್ಯಮ ಕ್ರಮಾಂಕದಲ್ಲೇ 7 ಸೀಟರ್ ಕಾರು ಮಾದರಿಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯುತ್ತಿರುವ ಕಂಪನಿಯು ಹೊಸ ಕಾರಿನ ಮೂಲಕ ವಿವಿಧ ಸೆಗ್ಮೆಂಟ್‌ನಲ್ಲಿ ಗ್ರಾಹಕರನ್ನು ಸೆಳೆಯಲಿದೆ.

ಹೊಸ ಅಲ್ಕಾಜರ್ ಕಾರು ಟಾಟಾ ನ್ಯೂ ಜನರೇಷನ್ ಸಫಾರಿ, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಸ್ಟ್ಯಾಂಡರ್ಡ್ ಕ್ರೆಟಾ ಕಾರು ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ. 2 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಾರಿಗಾಗಿ ಸದ್ಯ ಕ್ರೆಟಾ ಮಾದರಿಯಲ್ಲಿ ಜೋಡಿಸಲಾಗಿರುವ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನೇ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೆಚ್ಚುವರಿ ಆಸನ ಸೌಲಭ್ಯದ ಹೊರತಾಗಿ ಇನ್ನುಳಿದ ತಾಂತ್ರಿಕ ಅಂಶಗಳನ್ನು ಸಾಮಾನ್ಯ ಕ್ರೆಟಾ ಕಾರಿನಿಂದಲೇ ಎರವಲು ಪಡೆದುಕೊಳ್ಳಲಿದೆ.

ಅಲ್ಕಾಜರ್ ಕಾರು ಕ್ರೆಟಾ 5 ಸೀಟರ್ ಕಾರು ಮಾದರಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಇತ್ತೀಚೆಗೆ ಪ್ರಮುಖ ಕಾರು ಕಂಪನಿಯು 5 ಸೀಟರ್ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ 5 ಸೀಟರ್ ಜೊತೆಗೆ 7 ಸೀಟರ್ ಮಾದರಿಯನ್ನು ಪರಿಚಯಿಸುತ್ತಿರುವ ಅಲ್ಕಾಜರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಈ ಮೂಲಕ ಎಂಪಿವಿ ಮಾದರಿಯಲ್ಲಿ ಸದ್ಯ ಜನಪ್ರಿಯವಾಗಿರುವ ಇನೋವಾ ಕ್ರಿಸ್ಟಾ ಗ್ರಾಹಕರನ್ನು ಸಹ ಸೆಳೆಯಲು ಯತ್ನಿಸುತ್ತಿಸುರುವ ಹ್ಯುಂಡೈ ಕಂಪನಿಯು ಬೃಹತ್ ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ.


Click it and Unblock the Notifications








