ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಭಾರತದಲ್ಲಿ ಹೆಚ್ಚಿನ ಜನರು ಕಾರು ಖರೀದಿಸುವಾಗ ಮೈಲೇಜ್, ಫೀಚರ್‌ಗಳು, ನಿರ್ವಹಣಾ ವೆಚ್ಚ ಮತ್ತು ವಿನ್ಯಾಸಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದೇ ರೀತಿ ಕಾರಿನ ರಿಸೇಲ್ ವ್ಯಾಲ್ಯೂಗೂ ಆದ್ಯತೆ ನೀಡುತ್ತಾರೆ. ಯಾಕೆಂದರೆ ಕಾರು ನಂತರ ಮಾರಾಟ ಮಾಡುವಾಗ ನಷ್ಟವಾಗಬಾರದು ಎಂಬ ಕಾರಣಕ್ಕೆ ರಿಸೇಲ್ ವ್ಯಾಲ್ಯೂ ಅನ್ನು ಪರಿಗಣಿಸುತ್ತಾರೆ.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ವರ್ಷಗಳು ಕಳೆದಂತೆ ಹೊಸ ತಂತ್ರಜ್ಙಾನಗಳೊಂದಿಗೆ ಕಾರುಗಳು ಬಿಡುಗಡೆಯಾಗುತ್ತಲೇ ಇರುತ್ತದೆ. ಆಗ ತಮ್ಮ ಹಳೆಯ ಕಾರನ್ನು ಮಾರಟ ಮಾಡಿ ಹೊಸ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಇದರಿಂದ ಕಾರು ಖರೀದಿಸುವಾಗಲೇ ರಿಸೇಲ್ ವ್ಯಾಲ್ಯೂಗೂ ಹೊತ್ತು ನೀಡಿ ಕಾರು ಖರೀದಿಸುತ್ತಾರೆ. ಇದರಿಂದ ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳ ಮಾಹಿತಿ ಇಲ್ಲಿದೆ,

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಮಾರುತಿ ಸ್ವಿಫ್ಟ್

ಕಳೆದ 15 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಗಿದೆ. ಬಳಸಿದ ಕಾರು ಅಥವಾ ಸೆಕೆಂಡ್ ಹ್ಯಾಂಡ್ ಕಾರು ವಿಭಾಗದಲ್ಲಿ ಮಾರುತಿ ಸ್ವಿಫ್ಟ್ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ. ಇದು ಕಡಿಮೆ ನಿರ್ವಹಣಾ ವೆಚ್ಚ, ಉತ್ತಮ ಮೈಲೇಜ್, ಬಿಡಿಭಾಗಗಳ ಸುಲಭ ಲಭ್ಯತೆ, ವಿನ್ಯಾಸ ಮತ್ತು ಉತ್ತಮ ಎಂಜಿನ್ ಅನ್ನು ಒಳಗೊಂಡಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಈ ಮಾರುತಿ ಸ್ವಿಫ್ಟ್ ಕಾರಿನಲ್ಲಿ 1.2 ಲೀಟರ್ 'ಡ್ಯುಯಲ್ ಜೆಟ್' ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಮಾರುತಿ ಡಿಜೈರ್

ಸ್ವಿಫ್ಟ್‌ನಂತೆಯೇ, ಮಾರುತಿ ಡಿಜೈರ್ ಸಹ ಬಳಸಿದ ಕಾರು ವಿಭಾಗದಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ವಿಶೇಷವಾಗಿ ಕ್ಯಾಬ್ ಗ್ರಾಹಕರು ಮಾರುತಿ ಡಿಜೈರ್ ಮಾದರಿಯನ್ನು ಹೆಚ್ಚು ಖರೀದಿಸುತ್ತಾರೆ. ಮಾರುತಿ ಡಿಜೈರ್ 1.2-ಲೀಟರ್ ಎಂಜಿನ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ ಕಾರು ಭಾರತದಲ್ಲಿ 2015ರಲ್ಲಿ ಪರಿಚಯಿಸಲಾಯಿತು, ಇದು ನಮ್ಮ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಸ್ವಿಫ್ಟ್ ಮತ್ತು ಡಿಜೈರ್ ನಂತೆಯೇ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಬಲೆನೊ ಕಾರು ಉತ್ತಮ ಬೇಡಿಕೆಯನ್ನು ಹೊಂದಿದೆ.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಮಾರುತಿ ಸುಜುಕಿ ಎರ್ಟಿಗಾ

ಎರ್ಟಿಗಾ ಭಾರತದ ಅತ್ಯಂತ ಜನಪ್ರಿಯ ಎಂಪಿವಿ ಆಗಿದೆ, ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆಯನ್ನು ಹೊಂದಿದೆ. ಈ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ 1.5 ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಹ್ಯುಂಡೈ ಐ20

ಈ ಹ್ಯುಂಡೈ ಐ20 ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2008 ರಲ್ಲಿ ಬಿಡುಗಡೆ ಮಾಡಲಾಯಿತು, ಇದು ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯಂತ ಪ್ರೀಮಿಯಂ ಮತ್ತು ಫೀಚರ್-ಲೋಡ್ ಕಾರುಗಳಲ್ಲಿ ಒಂದಾಗಿದೆ. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ತಮ ಬೇಡಿಕೆಯನ್ನು ಹೊಂದಿದ್ದ ಮಾದರಿ ಇದಾಗಿದೆ.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿಯಾಗಿದ್ದು, ಇದರಲ್ಲಿ ಸಾಕಷ್ಟು ಫೀಚರ್ ಗಳು, ತೀಕ್ಷ್ಣವಾದ ಸ್ಟೈಲಿಂಗ್ ಮತ್ತು ಬಹು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಎಸ್‍ಯುವಿಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಹೋಂಡಾ ಅಮೇಜ್

ಅಮೇಜ್ ಭಾರತದಲ್ಲಿ ಹೋಂಡಾ ಕಂಪನಿಯ ಕಾರುಗಳ ಸರಣಿಯಲ್ಲಿ ಅತ್ತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಅಮೇಜ್ ಕಾರು ಉತ್ತಮ ಮೈಲೇಜ್ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ. ಅಲ್ಲದೇ ಇದೊಂದು ಉತ್ತಮ ಫ್ಯಾಮಿಲಿ ಕಾರು ಎಂದು ಹೇಳಬಹುದು.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಹೋಂಡಾ ಸಿಟಿ

ಹೋಂಡಾ ಪ್ರಸ್ತುತ ಭಾರತದಲ್ಲಿ ಸಿಟಿ ಕಾರಿನ ಎರಡು ವಿಭಿನ್ನ ತಲೆಮಾರಿನ ಮಾದರಿಗಳನ್ನು ಮಾರಾಟ ಮಾಡುತ್ತದೆ. ಈ ಹೊಂಡಾ ಸಿಟಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಗಳಲ್ಲಿ ಒಂದಾಗಿದೆ. ಖರೀದಿಸಿ ಬಳಿಸಿದ ನಂತರ ಮಾರಾಟ ಮಾಡುವಾಗ ನಿರೀಕ್ಷಿತ ಮೊತ್ತಕ್ಕೆ ಮಾರಾಟ ಮಾಡಬಹುದು.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಟೊಯೊಟಾ ಇನೋವಾ

ಟೊಯೊಟಾ ಇನೋವಾ ಭಾರತೀಯ ಮಾರುಕಟ್ಟೆಯಲ್ಲಿ ಸರಿಸಾಟಿಯಿಲ್ಲದ ಎಂಪಿವಿಯಾಗಿದೆ. ಇನೋವಾ ಫ್ಯಾಮಿಲಿ ಎಂಪಿವಿಯಾಗಿದ್ದು, ಇದು ಭಾರತದಲ್ಲಿ ಹಲವು ವರ್ಷಗಳಿಂದ ಬಹುಬೇಡಿಕೆಯ ಮಾದರಿಯಾಗಿದೆ. ಈ ಇನೋವಾ ಉತ್ತಮ ಕಂಫರ್ಟ್ ಅನ್ನು ಹೊಂದಿದ್ದು, ಲಾಗ್ ರೈಡ್ ಹೋಗಲು ಉತ್ತಮ ಆಯ್ಕೆಯಾಗಿದೆ.

ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು

ಟೊಯೊಟಾ ಫಾರ್ಚೂನರ್

ಪೂರ್ಣ ಗಾತ್ರದ ಎಸ್‍ಯುವಿ ವಿಭಾಗದಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ. ಇದಕ್ಕೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯನ್ನು ಹೊಂದಿದೆ. ಫಾರ್ಚೂನರ್ ಎಸ್‍ಯುವಿಯು ಉತ್ತಮ ಆಫ್-ರೋಡಿಂಗ್ ಸಾಮರ್ಥವನ್ನು ಹೊಂದಿದೆ.

Most Read Articles

Kannada
English summary
The Highest Resale Value Cars. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X