ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚಾಗಿ ಪೆಟ್ರೋಲ್ ವಾಹನಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಕೆಲವು ಕಾರು ಪ್ರಿಯರು ಅಥಾವ ಆಪ್-ರೋಡ್ ವಾಹನಗಳನ್ನು ಇಷ್ಟಪಡುವವರು ಡೀಸೆಲ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾದ ಬಳಿಕ ಹಲವು ಜನಪ್ರಿಯ ಡೀಸೆಲ್ ಕಾರುಗಳು ಸ್ಥಗಿತವಾಯ್ತು. ಅದರಲ್ಲಿಯು ದೇಶದ ಅತಿ ದೊಡ್ದ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಎಲ್ಲಾ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿತ್ತು. ಮಾರುತಿ ಸುಜುಕಿ ಕಾರುಗಳು ಕೇವಲ ಪೆಟ್ರೋಲ್ ಎಂಜಿನ್ ನಲ್ಲಿ ಮಾರಾಟವಾಗುತ್ತಿದೆ. ಇನ್ನು ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾದ ಬಳಿಕ ಡೀಸೆಲ್ ಕಾರುಗಳ ಬೆಲೆಯು ಕೂಡ ಹೆಚ್ಚಾಯ್ತು.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಆದರೂ ಡೀಸೆಲ್ ಕಾರುಗಳ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲಿ ಎಸ್‍ಯುವಿ ವಿಭಾಗದಲ್ಲಿ ಡೀಸೆಲ್ ಮಾದರಿಗಳು ಉತ್ತಮವಾಗಿ ಮಾರಾಟವಾಗುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳ ಮಾಹಿತಿ ಇಲ್ಲಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಹ್ಯುಂಡೈ ಕ್ರೆಟಾ

ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಡೀಸೆಲ್ ಕಾರು ಹ್ಯುಂಡೈ ಕ್ರೆಟಾವಾಗಿದೆ. ಫೆಬ್ರವರಿಯಲ್ಲಿ ಹ್ಯುಂಡೈ ಕ್ರೆಟಾದ ಡೀಸೆಲ್ ಮಾದರಿಯ 7558 ಯುನಿಟ್‌ಗಳು ಮಾರಾಟವಾಗಿವೆ. ಈ ಹ್ಯುಂಡೈ ಕ್ರೆಟಾ ಕಾರಿನಲ್ಲಿ 1.5ಎಲ್ ಯು2 ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಟೊಯೊಟಾ ಇನೋವಾ

ಇನ್ನು ಈ ಪಟ್ಟಿಯಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ 5886 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿವೆ. ಇನೋವಾ ಕ್ರಿಸ್ಟಾ ಭಾರತೀಯ ಮಾರುಕಟ್ತೆಯಲ್ಲಿ ಜನಪ್ರಿಯ ಎಂಪಿವಿಯಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಮಹೀಂದ್ರಾ ಬೊಲೆರೊ

ಮಹೀಂದ್ರಾ ಕಂಪನಿಯು ಬಹುಜನಪ್ರಿಯ ಬೊಲೆರೊ ಎಸ್‍ಯುವಿಯು ಈ ಟಾಪ್-10 ಡೀಸೆಲ್ ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಮಹೀಂದ್ರಾ ಬೊಲೆರೊ ಡೀಸೆಲ್ ಮಾದರಿಯ 4843 ಯುನಿಟ್‌ಗಳು ಮಾರಾಟವಾಗಿವೆ.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಮಹೀಂದ್ರಾ ಸ್ಕಾರ್ಪಿಯೋ

ಇನ್ನು ಮುಂದಿನ ನಾಲ್ಕನೇ ಸ್ಥಾನವನ್ನು ಮಹೀಂದ್ರಾ ಕಂಪನಿಯ ಇನ್ನೊಂದು ಜನಪ್ರಿಯ ಮಾದರಿಯಾದ ಸ್ಕಾರ್ಪಿಯೋ ಈ ಸ್ಥಾನವನ್ನು ಪಡೆದುಕೊಂಡಿದೆ. ಸ್ಕಾರ್ಪಿಯೋದ ಡೀಸೆಲ್ ಮಾದರಿಯ 3532 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿವೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಕಿಯಾ ಸೊನೆಟ್

ಇನ್ನು ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಗೊಂಡ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡ ಮಾದರಿಯಾಗಿದೆ. ಕೆಳೆದ ತಿಂಗಳು ಸೊನೆಟ್ ಡೀಸೆಲ್ ಮಾದರಿಯ 3397 ಯುನಿಟ್‌ಗಳು ಮಾರಾಟವಾಗಿವೆ.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಕಿಯಾ ಸೆಲ್ಟೋಸ್

ಸೊನೆಟ್ ಬಳಿಕ ಅದೇ ಕಂಪನಿಯ ಮತ್ತೊಂದು ಜನಪ್ರಿಯ ಮಧ್ಯಮ ಗಾತ್ರದ ಎಸ್‍ಯುವಿಯಾದ ಸೆಲ್ಟೋಸ್ ಆರನೇ ಸ್ಥಾನವನ್ನು ಪಡೆದಿದೆ. ಕಿಯಾ ಸೆಲ್ಟೋಸ್ ಡೀಸೆಲ್ ಮಾದರಿಯ 3150 ಯುನಿಟ್‌ಗಳು ಮಾರಾಟವಾಗಿವೆ.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಮಹೀಂದ್ರಾ ಥಾರ್

ಇನ್ನು ಇತ್ತೀಚೆಗೆ ಬಿಡುಗಡೆಗೊಂಡ ಐಕಾನಿಕ್ ಆಪ್-ರೋಡರ್ ಮಹೀಂದ್ರಾ ಥಾರ್ ಈ ಪಟ್ಟಿಯನ್ನು ಏಳನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಥಾರ್ ಡೀಸೆಲ್ ಮಾದರಿಯ 2228 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಟಾಟಾ ಹ್ಯಾರಿಯರ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯ ಜನಪ್ರಿಯ ಹ್ಯಾರಿಯರ್ ಎಸ್‍ಯುವಿಯು ಈ ಪಟ್ಟಿಯಲ್ಲಿದೆ. ಕಳೆದ ತಿಂಗಳು ಹ್ಯಾರಿಯರ್ ಡೀಸೆಲ್ ಮಾದರಿಯ 2030 ಯುನಿಟ್‌ಗಳು ಮಾರಾಟವಾಗಿ ಈ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದಿದೆ.

ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಫಾರ್ಚೂನರ್ ಮತ್ತು ಇಕೋಸ್ಪೋರ್ಟ್

ಕೊನೆಯ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಮಾದರಿಗಳು ಒಂಬತ್ತನೇ ಮತ್ತು ಹತ್ತನೇ ಸ್ಥಾನವನ್ನು ಪಡೆದಿದೆ. ಫಾರ್ಚೂನರ್ ಡೀಸೆಲ್ ಎಸ್‍ಯುವಿಯ 2030 ಯುನಿಟ್‌ಗಳು ಮಾರಾಟವಾಗಿದ್ದರೆ, ಇಕೋಸ್ಪೋರ್ಟ್ ಡೀಸೆಲ್ ಮಾದರಿಯ 1948 ಯುನಿಟ್‌ಗಳು ಮಾರಾಟವಾಗಿವೆ.

Most Read Articles

Kannada
English summary
India’s 10 Top Selling Diesel Cars. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X