ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಜರ್ಮನ್ ಕಾರು ಉತ್ಪಾದನಾ ಕಂಪನಿ ಆಡಿ ತನ್ನ ಐಷಾರಾಮಿ ಎಲೆಕ್ಟ್ರಿಕ್ ಆವೃತ್ತಿಯಾದ ಇ-ಟ್ರಾನ್ ಮಾದರಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಭಾರತದಲ್ಲೂ ಆರಂಭಿಕ ಹಂತದಲ್ಲೇ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಕಳೆದ ತಿಂಗಳು 22ರಂದು ಬಿಡುಗಡೆಗೊಂಡಿರುವ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯು ಮೊದಲ ಬ್ಯಾಚ್‌ನಲ್ಲಿ ಖರೀದಿಗೆ ಲಭ್ಯವಿದ್ದ ಎಲ್ಲಾ ಯುನಿಟ್‌ಗಳು ಮಾರಾಟಗೊಂಡಿದ್ದು, ಶೀಘ್ರದಲ್ಲೇ ಹೊಸ ಕಾರಿನ ವಿತರಣೆಯನ್ನು ಆರಂಭಿಸಲಿದೆ. ಮೊದಲ ಬ್ಯಾಚಿನಲ್ಲಿದ್ದ ಸುಮಾರು 50 ಯನಿಟ್ ಕಾರುಗಳಿಗೆ ಬುಕ್ಕಿಂಗ್ ದಾಖಲಾಗಿದ್ದು, ಬುಕ್ಕಿಂಗ್ ಆಧಾರದ ಮೇಲೆ ಕಾರಿನ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಆಡಿ ಕಂಪನಿಯು ಹೊಸ ಕಾರನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಿದ್ದು, ಸಿಬಿಯು ಮಾದರಿಯಾಗಿರುವುದರಿಂದ ಹೊಸ ಕಾರು ತುಸು ದುಬಾರಿ ಎನ್ನಿಸಿದರೂ ಪ್ರಸ್ತುತ ಮಾರುಕಟ್ಟೆ ಸನ್ನಿವೇಶದಲ್ಲಿ ಇವಿ ವಾಹನಗಳಿಗೆ ಆದ್ಯತೆ ನೀಡುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಗ್ರಾಹಕರ ಬೇಡಿಕೆಯೆಂತೆ ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.99.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 1.17 ಕೋಟಿ ಬೆಲೆ ಹೊಂದಿದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಇ-ಟ್ರಾನ್ ಕಾರಿನ ಆರಂಭಿಕ ಮಾದರಿಯಲ್ಲಿ ಆಡಿ ಕಂಪನಿಯು 71 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಿದ್ದು, ಇದು 308 ಬಿಹೆಚ್‌ಪಿ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 380 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಹೊಸ ಕಾರಿನ ಮಧ್ಯಮ ಆವೃತ್ತಿ ಮತ್ತು ಹೈ ಎಂಡ್ ಮಾದರಿಯಾದ 55 ಮತ್ತು 55 ಸ್ಪೋರ್ಟ್‌ಬ್ಯಾಕ್‌ನಲ್ಲಿ ಆಡಿ ಕಂಪನಿಯು 95 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಿದ್ದು, ಇದು 402 ಬಿಹೆಚ್‌ಪಿ ಹಾಗೂ 664 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಹೊಸ ಕಾರಿನ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 11kW ಎಸಿ ಹೋಂ ಚಾರ್ಜರ್ ಮೂಲಕ ಕನಿಷ್ಠ ಎಂಟೂವರೆ ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, 150kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಆಡಿ ಕಂಪನಿಯು ಸದ್ಯ ತನ್ನ ಡೀಲರ್ಸ್ ಯಾರ್ಡ್‌ಗಳಲ್ಲಿಯೇ 50kW ಸಾಮರ್ಥ್ಯದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಇನ್ನು ಹೊಸ ಕಾರಿನ ಡಿಸೈನ್, ಫೀಚರ್ಸ್‌ಗಳು ಮತ್ತು ಟೆಕ್ನಾಲಜಿ ಬಗೆಗೆ ಹೇಳುವುದಾದರೇ ಹೊಸ ಕಾರು ಆಕರ್ಷಕ ಹೊರ ಮತ್ತು ಒಳನೋಟದೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದ್ದು, ಹೊಸ ಕಾರಿನ ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಆನಿಮೆಟೆಡ್ ಪ್ರೊಜೆಕ್ಷನ್, ಎಲ್ಇಡಿ ಟೈಲ್‌ಲ್ಯಾಂಪ್, 20-ಇಂಚಿನ ಅಲಾಯ್ ವ್ಹೀಲ್‌ಗಳು ಮತ್ತು ಕಾರಿನ ಎರಡು ಬದಿಗಳಲ್ಲೂ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಹೊಸ ಕಾರಿನ ಒಳಭಾಗವು ಕೂಡಾ ಸಾಕಷ್ಟು ಆಕರ್ಷಣೆಯಾಗಿರುವುದಲ್ಲದೆ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯ ಹೊಂದಿದ್ದು, ಟ್ವಿನ್ ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೊತೆ ಮೌಂಟೆಡ್ ಕಂಟ್ರೋಲ್, ಆಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇ, ಮೈ ಆಡಿ ಕನೆಕ್ಟ್, ವಾಯ್ಸ್ ಅಸಿಸ್ಟಂಟ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಹೆಡ್ಸ್ಅಪ್ ಡಿಸ್‌ಪ್ಲೇ, ಪನೊರಮಿಕ್ ಸನ್‌ರೂಫ್ ಸೌಲಭ್ಯಗಳಿವೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಹೊಸ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಮುಖ ಸೇಫ್ಟಿ ಫೀಚರ್ಸ್‌ಗಳಾದ ಎಬಿಎಸ್ ಜೊತೆ ಬ್ರೇಕ್ ಅಸಿಸ್ಟ್, ಲೆನ್ ಡಿಪಾರ್ಚರ್ ವಾರ್ನಿಂಗ್, ಪಾರ್ಕ್ ಅಸಿಸ್ಟ್ ಫಂಕ್ಷನ್, 8 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್‌ಗಳಿವೆ.

ದುಬಾರಿ ಬೆಲೆ ನಡುವೆಯೂ ಭಾರತದಲ್ಲಿ ಆಡಿ ಇ-ಟ್ರಾನ್ ಕಾರಿನ ಮೊದಲ ಬ್ಯಾಚ್ ಸೋಲ್ಡೌಟ್!

ಇ-ಟ್ರಾನ್ ಕಾರಿನ ಮೇಲೆ ಆಡಿ ಕಂಪನಿಯು ಎರಡು ವರ್ಷಗಳ ಕಾಲ ಸ್ಟ್ಯಾಂಡರ್ಡ್ ವಾರಂಟಿಯನ್ನು ಘೋಷಿಸಿದ್ದು, ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಆಧಾರದ ಮೇಲೆ ವಾರಂಟಿ ಜೊತೆ 5 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಸೌಲಭ್ಯವನ್ನು ನೀಡುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಾಣುವ ನೀರಿಕ್ಷೆಯಲ್ಲಿರುವ ಆಡಿ ಕಂಪನಿಗೆ ಆರಂಭದಲ್ಲೇ ಹೆಚ್ಚಿನ ಬೇಡಿಕೆ ಹರಿದುಬಂದಿದ್ದು, ಶೀಘ್ರದಲ್ಲೇ 2ನೇ ಬ್ಯಾಚ್ ಅನ್ನು ಆಮದುಮಾಡಿಕೊಳ್ಳಲಿದೆ.

More from DriveSpark

Article Published On: Tuesday, August 10, 2021, 19:51 [IST]
English summary
All new audi e tron first batch sold out in india details
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+