ಏಪ್ರಿಲ್ 6ರಂದು ಅನಾವರಣಗೊಳ್ಳಲಿದೆ ಹ್ಯುಂಡೈ ಅಲ್ಕಾಜರ್ 7 ಸೀಟರ್ ಎಸ್‌ಯುವಿ
ಹ್ಯುಂಡೈ ಇಂಡಿಯಾ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಅಲ್ಕಾಜರ್ 7 ಸೀಟರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಕಂಪನಿಯು ಮುಂದಿನ ತಿಂಗಳು ಏಪ್ರಿಲ್ 6ರಂದು ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮಾಹಿತಿ ಲಭ್ಯವಾಗಿದೆ.

ಅಲ್ಕಾಜರ್ ಹೆಸರಿನೊಂದಿಗೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ 7 ಸೀಟರ್ ಎಸ್‌ಯುವಿ ಕಾರು ಮಾದರಿಯು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದ್ದು, ಉತ್ಪಾದನಾ ಆವೃತ್ತಿಯು ಅನಾವರಣಗೊಂಡ ನಂತರವಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ. ಉತ್ಪಾದನಾ ಮಾದರಿಯೊಂದಿಗೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿರುವ ಹ್ಯುಂಡೈ ಕಂಪನಿಯು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಕ್ರೆಟಾ ಕಾರು ಮಾದರಿಯ ಪ್ಲ್ಯಾಟ್‌ಫಾರ್ಮ್ ಆಧರಿಸಿ ಮೂರನೇ ಸಾಲಿನ ಆಸನ ಹೊಂದಿರುವ ಅಲ್ಕಾಜರ್ ಕಾರಿನಲ್ಲಿ ವಿಸ್ತರಿತ ಕ್ಯಾಬಿನ್‌ನೊಂದಿಗೆ 7 ಸೀಟರ್ ಸೌಲಭ್ಯವನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಲಾಗಿದ್ದು, ಗ್ರಾಹಕರು ಹೊಸ ಕಾರಿನಲ್ಲಿ ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಖರೀದಿಸಬಹುದಾಗಿದೆ.

ಕ್ರೆಟಾ ಕಾರು ಮಾದರಿಯ ಪ್ಲ್ಯಾಟ್‌ಫಾರ್ಮ್ ಆಧರಿಸಿ ಮೂರನೇ ಸಾಲಿನ ಆಸನ ಹೊಂದಿರುವ ಅಲ್ಕಾಜರ್ ಕಾರಿನಲ್ಲಿ ವಿಸ್ತರಿತ ಕ್ಯಾಬಿನ್‌ನೊಂದಿಗೆ 7 ಸೀಟರ್ ಸೌಲಭ್ಯವನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಲಾಗಿದ್ದು, ಗ್ರಾಹಕರು ಹೊಸ ಕಾರಿನಲ್ಲಿ ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಖರೀದಿಸಬಹುದಾಗಿದೆ.

ಅಲ್ಕಾಜರ್ ಕಾರು ಮಾದರಿಯ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ನೊಂದಿಗೆ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಲಾಗಿದ್ದು, ಹಿಂಬದಿಯ ಸವಾರರಿಗೂ ಹೆಡ್‌ರೆಸ್ಟ್, ಸೈಡ್ ಬಾಟಲ್ ಹೋಲ್ಡರ್ ಸೌಲಭ್ಯಗಳಿವೆ. ಹೊಸ ವೈಶಿಷ್ಟ್ಯತೆಗಳೊಂದಿಗೆ ಅಲ್ಕಾಜರ್ ಎಸ್‌ಯುವಿಯು ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಎಂಪಿವಿ ಕಾರು ಖರೀದಿದಾರರನ್ನು ಸಹ ಸೆಳೆಯಲಿದ್ದು, ಹೊಸ ಕಾರಿನಲ್ಲಿ ಗ್ರಾಹಕರ ತಮ್ಮ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯವನ್ನ ಪಡೆದುಕೊಳ್ಳಬಹುದಾಗಿದೆ.

ಇದರಲ್ಲಿ 6 ಸೀಟರ್ ಮಾದರಿಯು 2+2+2 ಮತ್ತು 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿರಲಿದ್ದು, ಕ್ರೆಟಾ ಮಾದರಿಯಂತೆ ವೀಲ್ಹ್ ಬೆಸ್‌ನೊಂದಿಗೆ ಮೂರನೇ ಸಾಲಿನ ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲು ಕ್ಯಾಬಿನ್ ಸೌಲಭ್ಯವನ್ನು ವಿಸ್ತರಿಸಲಾಗಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಇನ್ನು ಹೊಸ ಅಲ್ಕಾಜರ್ ಕಾರು ಟಾಟಾ ನ್ಯೂ ಜನರೇಷನ್ ಸಫಾರಿ, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಸ್ಟ್ಯಾಂಡರ್ಡ್ ಕ್ರೆಟಾ ಕಾರು ಮಾದರಿಗಿಂತ ರೂ. 1.50 ಲಕ್ಷದಿಂದ ರೂ. 2 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

ಹೊಸ ಕಾರಿಗಾಗಿ ಸದ್ಯ ಕ್ರೆಟಾ ಮಾದರಿಯಲ್ಲಿ ಜೋಡಿಸಲಾಗಿರುವ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನೇ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೆಚ್ಚುವರಿ ಆಸನ ಸೌಲಭ್ಯದ ಹೊರತಾಗಿ ಇನ್ನುಳಿದ ತಾಂತ್ರಿಕ ಅಂಶಗಳನ್ನು ಸಾಮಾನ್ಯ ಕ್ರೆಟಾ ಕಾರಿನಿಂದಲೇ ಎರವಲು ಪಡೆದುಕೊಳ್ಳಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅಲ್ಕಾಜರ್ ಕಾರು ಕ್ರೆಟಾ 5 ಸೀಟರ್ ಕಾರು ಮಾದರಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಇತ್ತೀಚೆಗೆ ಪ್ರಮುಖ ಕಾರು ಕಂಪನಿಯು 5 ಸೀಟರ್ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ 5 ಸೀಟರ್ ಜೊತೆಗೆ 7 ಸೀಟರ್ ಮಾದರಿಯನ್ನು ಪರಿಚಯಿಸುತ್ತಿರುವ ಅಲ್ಕಾಜರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ.


Click it and Unblock the Notifications