ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ 7 ಸೀಟರ್ ಎಸ್‌ಯುವಿ Jeep Commander

ದೇಶಿಯ ಮಾರುಕಟ್ಟೆಯಲ್ಲಿ 7 ಸೀಟರ್ ಸೌಲಭ್ಯದ ವಿವಿಧ ಹೊಸ ಕಾರು ಮಾದರಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಸೆಗ್ಮೆಂಟ್‌ನಲ್ಲಿ ಹಲವು ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿರುವುದು ಉತ್ತಮ ಬೆಳವಣಿಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

Jeep ಕಂಪನಿಯು ಸಹ ಜಾಗತಿಕ ಮಾರುಕಟ್ಟೆಗಳಿಗಾಗಿ ಹೊಸ 7 ಸೀಟರ್ ಎಸ್‌ಯುವಿಯೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಹೊಸ ಕಾರು ಭಾರತವು ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ವಿವಿಧ ಹೆಸರುಗಳೊಂದಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಹೊಸ ಕಾರಿನ ಹಳೆಯ ತಲೆಮಾರಿನ ಆವೃತ್ತಿಯು ಈಗಾಗಲೇ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು, ಹೊಸ ತಲೆಮಾರಿನ ಆವೃತ್ತಿಯೊಂದಿಗೆ ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಕಾರು ಮಾರಾಟದಲ್ಲಿ ವಿಶ್ವಾದ್ಯಂತ ತನ್ನ ವಿಸ್ತೃತ ಮಾರಾಟ ಜಾಲ ಹೊಂದಿರುವ Jeep ಕಂಪನಿಯು ಭಾರತದಲ್ಲೂ ಹೊಸ 7 ಸೀಟರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರಿನ ಇಂಟಿರಿಯರ್ ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಚೀನಿ ಮಾರುಕಟ್ಟೆಯಲ್ಲಿ ಜೀಪ್ ಹೊಸ 7 ಸೀಟರ್ ಕಾರು ಈಗಾಗಲೇ Grand Commander ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ನವೀಕೃತ ಮಾದರಿಯನ್ನು ಕೇವಲ Commander ಮತ್ತು ಹೊಸದಾಗಿ Meridian ಹೆಸರಿನಲ್ಲಿ ವಿವಿಧ ರಾಷ್ಟ್ರಗಳಲ್ಲಿ ಪರಿಚಯಿಸುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಭಾರತದಲ್ಲಿ ಹೊಸ ಕಾರನ್ನು Commander ಹೆಸರಿನೊಂದಿಗೆ ಬಿಡುಗಡೆ ಮಾಡಲಿರುವ Jeep ಕಂಪನಿಯು ಫುಲ್ ಸೈಜ್ ಎಸ್‌ಯುವಿ ಮಾರಾಟದಲ್ಲಿ ಅತಿಹೆಚ್ಚು ಬೇಡಿಕೆಯಲ್ಲಿರುವ Ford Endeavour ಮತ್ತು Toyota Fortuner ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

Jeep ಕಂಪನಿಯು ಹೊಸ ಕಾರಿನಲ್ಲಿ ಪವರ್‌ಫುಲ್ ಎಂಜಿನ್ ಆಯ್ಕೆ, ಪ್ರೀಮಿಯಂ ಫೀಚರ್ಸ್ ಮತ್ತು ಬೆಲೆ ಆಯ್ಕೆಯಲ್ಲೂ ಗಮನಸೆಳೆಯಲಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಕಾರನ್ನು ಸಿದ್ದಪಡಿಸಲು ವಿವಿಧ ಹಂತದ ರೋಡ್ ಟೆಸ್ಟಿಂಗ್ ಮೂಲಕ ಬಿಡುಗಡೆಗೆ ಸಿದ್ದಗೊಳಿಸಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಹೊಸ Commander ಕಾರು ಮಾದರಿಯು ಈ ವರ್ಷಾಂತ್ಯದೊಳಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಜೀಪ್ ಕಂಪನಿಯು ಹಂತ-ಹಂತವಾಗಿ ಹೊಸ ಕಾರನ್ನು ವಿವಿಧ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಸದ್ಯಕ್ಕೆ Jeep ಕಂಪನಿಯು ಹೊಸ ಕಾರನ್ನು ಹೆಚ್6 ಎನ್ನುವ ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, 2.0-ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್ ಪ್ರೇರಣೆಯ ಮಲ್ಟಿ ಜೆಟ್ ಟರ್ಬೊ-ಡೀಸೆಲ್ ಎಂಜಿನ್ ಜೋಡಣೆ ಮಾಡುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಹೊಸ ಮಲ್ಟಿ ಜೆಟ್ ಟರ್ಬೊ ಡೀಸೆಲ್ ಮಾದರಿಯು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 200-ಬಿಎಚ್‌ಪಿ ಉತ್ಪಾದನಾ ಗುಣಹೊಂದಿರಲಿದ್ದು, ಆಫ್ ರೋಡ್ ಕೌಶಲ್ಯದಲ್ಲೂ ಗಮನಸೆಳೆಯಲಿರುವ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4x4 ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಆ ಮೂಲಕ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ Ford Endeavour, Toyota Fortuner ಮತ್ತು MG Gloster ಕಾರು ಮಾದರಿಗಳಿಗೆ ಹೊಸ ಕಾರು ಪ್ರಬಲ ಪೈಪೋಟಿ ನೀಡಲಿದ್ದು, ಹೊಸ ಕಾರಿನ ಬೆಲೆ ಕೂಡಾ ಪ್ರತಿಸ್ಪರ್ಧಿ ಕಾರುಗಳಿಂತಲೂ ಉತ್ತಮವಾಗಿರಲಿದೆ ಎನ್ನಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಹೊಸ ಟೀಸರ್‌ನಲ್ಲಿ ಸದ್ಯಕ್ಕೆ ಹೊಸ ಕಾರಿನಲ್ಲಿ ಕಂಪಾಸ್ ಮಾದರಿಯಲ್ಲಿಯೇ ಪ್ರೀಮಿಯಂ ಲೆದರ್ ಆಸನಗಳು, 10.25 ಇಂಚಿನ ಟಚ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಲ್ಟಿ ಫಂಕ್ಷನಲ್ ಡಿಜಿಟಲ್ ಡಿಸ್‌ಪ್ಲೇ, ಸ್ಟ್ರೀರಿಂಗ್ ವೀಲ್ಹ್ ಜೊತೆ ಮೌಟೆಂಡ್ ಕಂಟ್ರೋಲ್ ಸೇರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಕ್ರೂಸ್ ಕಂಟ್ರೋಲ್, ಫುಲ್ ಎಲ್ಇಡಿ ಆಟೋ ಹೆಡ್‌ಲ್ಯಾಂಪ್‌ಗಳು, ಅಪ್‌ಡೇಟೆಡ್ ಯು ಕನೆಕ್ಟ್ ಕಾರ್ ಟೆಕ್ನಾಲಜಿ, ಸುಧಾರಿತ ತಂತ್ರಜ್ಞಾನ ಪ್ರೇರಿತ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

Jeep Commander ಎಸ್‍ಯುವಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು Compass ಫೇಸ್‌ಲಿಫ್ಟ್‌ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ. ಹೊಸ ಎಸ್‍ಯುವಿಯಲ್ಲಿ ಎಸಿ ವೆಂಟ್ಸ್, ಸ್ಪೀಕರ್‌ಗಳು, ಡೋರ್ ಹ್ಯಾಂಡಲ್ಸ್ ಫ್ರೇಮ್ ಮತ್ತು ಇತರ ಭಾಗಗಳ ಸುತ್ತಲೂ ಕ್ರೋಮ್ ಔಟ್ ಲೈನ್ ಅನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಜೊತೆಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿರುವ ಹೊಸ ಕಾರಿನಲ್ಲಿ ಆಕ್ಟಿವ್ ಫೀಚರ್ಸ್‌ಗಳನ್ನು ಒಳಗೊಂಡ ಆಟೋನಮಸ್ ಲೇವಲ್ 1 ಬಳಕೆ ಮಾಡಲಾಗಿದ್ದು, ಇದರ ಜೊತೆಗೆ ಇನ್ನು ಹಲವಾರು ಸುರಕ್ಷಾ ಸೌಲಭ್ಯಗಳು ಸ್ಟ್ಯಾಂಡರ್ಡ್ ಆಗಿ ದೊರೆಯಲಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನೀರಿಕ್ಷಿತ ಹೊಸ 7 ಸೀಟರ್ ಎಸ್‌ಯುವಿ Jeep Commander

ಇನ್ನು ಹೊಸ ಕಾರು ಮಾದರಿಯು ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಮಾದರಿಗಳಿಂತ ಉತ್ತಮವಾಗಿರಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.28 ಲಕ್ಷದಿಂದ ರೂ. 33 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

More from DriveSpark

Article Published On: Monday, August 23, 2021, 11:38 [IST]
English summary
All new jeep 7 seater suv spied testing again
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+