ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಬಹುನೀರಿಕ್ಷಿತ ಎಂಜಿ ಮೋಟಾರ್(MG Motor) ನಿರ್ಮಾಣದ ಆಸ್ಟರ್(Astor) ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸಿದ್ದತೆಯಲ್ಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಉತ್ಪಾದನಾ ಮಾದರಿಯೊಂದಿಗೆ ಕಂಪನಿಯು ಕಣಿವೆ ರಾಜ್ಯಗಳಲ್ಲಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಲಿರುವ ಹೊಸ ಆಸ್ಟರ್(Astor) ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದ್ದು, ಶೀತವಲಯದಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಪರೀಕ್ಷಿಸಲು ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಆಸ್ಟರ್ ಕಾರು ಈ ತಿಂಗಳ ಕೊನೆಯಲ್ಲಿ ಇಲ್ಲವೇ ಅಕ್ಟೋಬರ್ ಮೊದಲ ವಾರದಲ್ಲಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಆಸ್ಟರ್ ಕಾರಿನ ಬಗೆಗೆ ಕೆಲವು ಮಾಹಿತಿಗಳು ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿವೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಹೊಸ ಕಾರು ಹ್ಯುಂಡೈ ಕ್ರೆಟಾ(Hyundai Creta) ಕಿಯಾ ಸೆಲ್ಟೊಸ್(Kia Seltos) ಸ್ಕೋಡಾ ಕುಶಾಕ್(Skoda Kushaq) ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳ ಜೊತೆಗೆ ಆಕರ್ಷಕ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಹೆಕ್ಟರ್(Hector) ಮಾದರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಆಸ್ಟರ್ ಕಾರು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ಸೌಲಭ್ಯ ಹೊಂದಿರುವ ಭಾರತದ ಮೊದಲ ಕಾರು ಮಾದರಿಯಾಗಿದೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ರಿಲಯನ್ಸ್ ಜಿಯೋದಿಂದ ಎರವಲು ಪಡೆಯಲಾದ ರಿಯಲ್-ಟೈಮ್ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್ ಮತ್ತು ಐಒಟಿ ಟೆಕ್ ಅನ್ನು ಒಳಗೊಂಡಿರುವ ಹೊಸ ಕಾರು ಗರಿಷ್ಠ ಸುರಕ್ಷತೆ ಖಚಿತಪಡಿಸಲಿದ್ದು, 4ಜಿ ಇಂಟರ್‌ನೆಟ್ ಸೌಲಭ್ಯದೊಂದಿಗೆ ಹಲವಾರು ಆಟೋಮೋಟಿವ್ ಸಂಬಂಧಿತ ಗ್ರಾಹಕರ ಸೇವೆಗಳನ್ನು ಸುಲಭವಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಳ್ಳಬಹುದು.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸೌಲಭ್ಯದೊಂದಿಗೆ ಮನರಂಜನೆ, ಕಾರಿನ ತಾಂತ್ರಿಕ ಅಂಶಗಳ ನ್ಯೂನತೆಗಳ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವುದರ ಜೊತೆ ವಾಯ್ಸ್ ಅಸಿಸ್ಟ್ ಮೂಲಕ ಚಾಲನೆಯನ್ನು ಸರಳಗೊಳಿಸುತ್ತದೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Astor ಎಸ್‌ಯುವಿ

ಹಾಗೆಯೇ ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Motor ಹೊಸ Astor ಎಸ್‌ಯುವಿ

ಜೊತೆಗೆ ಕಾರು ಚಾಲನೆ ವೇಳೆ ರಸ್ತೆಗುಂಡಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಎಡಿಎಎಸ್ ತಂತ್ರಜ್ಞಾನದಲ್ಲಿ ರಡಾರ್ ಸೌಲಭ್ಯವಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ರಸ್ತೆಗುಂಡಿಯಿಂದಾಗುವ ಅಪಾಯವನ್ನು ತಡೆಯಬಲ್ಲದು.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Motor ಹೊಸ Astor ಎಸ್‌ಯುವಿ

ಅಪಾಯದ ಮುನ್ಸೂಚನೆಯನ್ನು ಚಾಲಕನಿಗೆ ಧ್ವನಿ ಸಂದೇಶ ಮೂಲಕ ಎಚ್ಚರಿಕೆ ನೀಡುವ ಎಡಿಎಎಸ್ ಸೌಲಭ್ಯವು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದ್ದು, ಜೊತೆಗೆ 10-ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪ್ಲ್ಯಾಟ್-ಬಾಟಮ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಹಿಂಬದಿಯ ಪ್ರಯಾಣಿಕರಿಗೆ ಅರಾಮದಾಯಕವಾದ ಆಸನ ಸೌಲಭ್ಯಗಳಿವೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Motor ಹೊಸ Astor ಎಸ್‌ಯುವಿ

ಹೊಸ ಆಸ್ಟರ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಯೆಂತೆ ಸಾಮಾನ್ಯ ಪೆಟ್ರೋಲ್ ಮಾದರಿಯನ್ನು ಮತ್ತು ಪರ್ಫಾಮೆನ್ಸ್ ಬಯಸುವ ಗ್ರಾಹಕರು ಟರ್ಬೊ ಪೆಟ್ರೋಲ್ ಮಾದರಿಯನ್ನು ಖರೀದಿಸಬಹುದಾಗಿದೆ.

ಕಣಿವೆ ರಾಜ್ಯಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ MG Motor ಹೊಸ Astor ಎಸ್‌ಯುವಿ

ಸಾಮಾನ್ಯ ಮಾದರಿಯಾಗಿ 1.5-ಲೀಟರ್ ಪೆಟ್ರೋಲ್ ಆವೃತ್ತಿಯನ್ನು ಮತ್ತು ಪರ್ಫಾಮೆನ್ಸ್ ಮಾದರಿಯಾಗಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಹೊಸ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Article Published On: Monday, September 6, 2021, 13:12 [IST]
English summary
All new mg astor spied testing again
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+