ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಬಹುನೀರಿಕ್ಷಿತ ಟಾಟಾ ಮೋಟಾರ್ಸ್(Tata Motors) ನಿರ್ಮಾಣದ ಹೊಚ್ಚ ಹೊಸ ಪಂಚ್(Punch) ಮೈಕ್ರೊ ಎಸ್‌ಯುವಿ ಕಾರು ಮಾದರಿಯನ್ನು ಇದೇ ತಿಂಗಳು 18ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದ್ದು, ಹೊಸ ಆವೃತ್ತಿಯು ಆರಂಭಿಕ ಕಾರು ಮಾದರಿಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಹೊಸ ಕಾರು ಖರೀದಿಗೆ ಟಾಟಾ ಕಂಪನಿಯು ಈಗಾಗಲೇ ರೂ. 21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅಲ್ಫಾ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಪಂಚ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಪಂಚ್ ಕಾರಿನಲ್ಲಿ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಬೆಸ್ ವೆರಿಯೆಂಟ್‌ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಸೆಗ್ಮೆಂಟ್ ಬೆಸ್ಟ್ ಫಿಚರ್ಸ್ ಪಡೆದುಕೊಳ್ಳಲಿರುವ ಟಾಟಾ ಪಂಚ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಪಂಚ್ ಮೈಕ್ರೊ ಎಸ್‌ಯುವಿ ಕಾರಿನಲ್ಲಿ ಟಾಟಾ ಕಂಪನಿಯು ಟಿಯಾಗೋ ಮಾದರಿಯಲ್ಲಿರುವ 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಹೊಸ ಕಾರಿನ ಪ್ಯೂರ್ ಮಾದರಿಯಲ್ಲಿ ಕಂಪನಿಯು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಸ್ಯಾವಿ ಕಂಟ್ರೋಲ್, ಆರ್‌ಪಿಎಎಸ್, ಸೆಂಟ್ರೇಲ್ ಲಾಕಿಂಗ್ ಜೊತೆ ಕೀ, ಐಎಸಿ ಮತ್ತು ಇಎಸ್ಎಸ್ ಟೆಕ್ನಾಲಜಿ, ಫ್ರಂಟ್ ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್, 90 ಡಿಗ್ರಿ ಡೋರ್ ಓಪನ್, ರಿಯರ್ ಪ್ಲ್ಯಾಟ್ ಫ್ಲೊರ್, ಬ್ಲ್ಯಾಕ್ ಒಡಿಹೆಚ್, ಹ್ಯುಮಿನಿಟಿ ಕ್ರೊಮ್ ಲೈನ್, ಪೆಟೆಂಡ್ ಬಂಪರ್, ಡೋರ್, ವೀಲ್ಹ್ ಆರ್ಚ್, ಸಿಲ್ ಕ್ಲಾಡಿಂಗ್ ಜೋಡಣೆ ಮಾಡಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಅಡ್ವೆಂಚರ್ ಮಾದರಿಯಲ್ಲಿ ಕಂಪನಿಯು ಪ್ಯೂರ್ ಆವೃತ್ತಿಯ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡು ಹೊಂದಾಣಿಕೆ ಮಾಡಬಹುದಾದ 4 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, 4 ಸ್ಪೀಕರ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್ ವ್ಯೂ ಮಿರರ್, ಆಲ್ ಪವರ್ ವಿಂಡೋ, ಫಾಲೋ ಮಿ ಹೋಂ ಹೆಡ್‌ಲ್ಯಾಂಪ್, ಆಂಟಿ ಗ್ಲೆರ್ ಐಆರ್‌ಎಂವಿ, ಸೆಂಟ್ರಲ್ ರಿಮೋಟ್ ಲಾಕಿಂಗ್ ಜೊತೆ ಫ್ಲಿಪ್ ಕೀ, ಫುಲ್ ವ್ಹೀಲ್ ಕವರ್ ಮತ್ತು ಬಾಡಿ ಕಲರ್ ರಿಯರ್ ವ್ಯೂ ಮಿರರ್ ನೀಡಲಾಗಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಅಕಾಂಪ್ಲಿಶೆಡ್ ಆವೃತ್ತಿಯಲ್ಲಿ ಪ್ಯೂರ್ ಮತ್ತು ಅಡ್ವೆಂಚರ್ ಮಾದರಿಯಲ್ಲಿನ ಕೆಲವು ತಾಂತ್ರಿಕ ಸೌಲಭ್ಯಗಳೊಂದಿಗೆ ಹೆಚ್ಚುವರಿಯಾಗಿ ಹೊಂದಾಣಿಕೆ ಮಾಡಬಹುದಾದ 7 ಇಂಚಿನ ಹರ್ಮನ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, 4 ಸ್ಪೀಕರ್ಸ್ ಮತ್ತು 2 ಟ್ವಿಟರ್, ರಿಯರ್ ವ್ಯೂ ಕ್ಯಾಮೆರಾ, ಎಲ್ಇಡಿ ಟೈಲ್ ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ಆರ್15 ಹೈಪರ್ ಸ್ಟೈಲ್ ವ್ಹೀಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಒನ್ ಟಚ್ ಡೋರ್ ವಿಂಡೋ ಡೌನ್, ಕ್ರೂಸ್ ಕಂಟ್ರೋಲ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಸಿಟಿವಿ ಮಾದರಿಯಾಗಿ ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯವಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಕ್ರಿಯೆಟಿವ್ ಹೈ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದು, ಮೇಲಿನ ಆವೃತ್ತಿಗಳ ಕೆಲವು ತಾಂತ್ರಿಕ ಅಂಶಗಳ ಜೊತೆಗೆ ಹೆಚ್ಚುವರಿಯಾಗಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಆರ್16 ಡೈಮಂಡ್ ಕಟ್ ಅಲಾಯ್ ವ್ಹೀಲ್, ರೂಫ್ ರೈಲ್ಸ್, 7 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಹೆಡ್‌ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಆಟೋ ಫೋಡ್ಲಿಂಗ್ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಎಸಿ ಕಂಟ್ರೋಲ್ ಸಿಸ್ಟಂ, ಕೂಲ್ಡ್ ಗ್ಲೊ ಬಾಕ್ಸ್, ರಿಯರ್ ವೈಪರ್ ಪ್ಲಸ್ ವಾಷ್, ರಿಯರ್ ಡಿಫಾಗರ್, ಪೆಡಲ್ ಲ್ಯಾಂಪ್ಸ್, ಹಿಂಬದಿಯ ಆಸನದಲ್ಲಿ ಆರ್ಮ್ ರೆಸ್ಟ್ ಮತ್ತು ಲೆದರ್ ಕೊಟಿಂಗ್ ಹೊಂದಿರುವ ಸ್ಟೀರಿಂಗ್ ಮತ್ತು ಗೇರ್ ನಾಬ್ ನೀಡಲಾಗಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಹೊಸ ಕಾರು ಮುಂಭಾಗದಲ್ಲಿ ಮಾತ್ರವಲ್ಲ ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌‌ನಲ್ಲೂ ಅತ್ಯುತ್ತಮ ಡಿಸೈನ್ ಹೊಂದಿದ್ದು, ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದೆ.

ಇದೇ ತಿಂಗಳು 18ರಂದು ಬಿಡುಗಡೆಯಾಗಲಿರುವ Tata Punch ಮೈಕ್ರೊ ಎಸ್‌ಯುವಿ ವಿಶೇಷತೆಗಳೇನು?

ಮತ್ತೊಂದು ಪ್ರಮುಖ ವಿಚಾರವೆಂದರೆ ಹೊಸ ಕಾರು ಸುರಕ್ಷತೆಯಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಮಾದರಿಯಾಗಿ ಬಿಡುಗಡೆಗೂ ಮುನ್ನವೇ ಘೋಷಣೆಯಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹೊಸ ಕಾರು ಗರಿಷ್ಠ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ನೊಂದಿಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಖಾತ್ರಿಪಡಿಸಿದೆ.

Article Published On: Saturday, October 16, 2021, 9:27 [IST]
English summary
All new tata punch micro suv will launch october 18 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+