ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಗಮನಸೆಳೆಯುತ್ತಿರುವ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಕಾರುಗಳು ಬಿಡುಗಡೆಯ ನಂತರ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಎರಡು ಕಾರು ಮಾದರಿಗಳು ಭರ್ಜರಿ ಪೈಪೋಟಿಯೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಟೈಗುನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬುಕ್ಕಿಂಗ್ ಈ ವರ್ಷದ ಕೊನೆಯ ತನಕವು ಪೂರ್ಣಗೊಂಡಿದೆ. ಕಂಪನಿಯು ಸದ್ಯ ಬುಕ್ಕಿಂಗ್ ಆಧರಿಸಿ ಹೊಸ ಕಾರಿನ ವಿತರಣೆ ಆರಂಭಿಸಿದ್ದು, ಪ್ರತಿ ತಿಂಗಳು ಕಂಪನಿಯು ಮೂರರಿಂದ ನಾಲ್ಕು ಸಾವಿರ ಯುನಿಟ್ ವಿತರಿಸುವ ಯೋಜನೆಯಲ್ಲಿದೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಸ್ಕೋಡಾ ಕುಶಾಕ್ ಮಾದರಿಯು ಸಹ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ದುಬಾರಿ ಬೆಲೆ ನಡುವೆಯೂ ಹೊಸ ಕಾರು ಖರೀದಿಗಾಗಿ ನೀರಿಕ್ಷೆಗೂ ಮೀರಿ ಬುಕ್ಕಿಂಗ್ ದಾಖಲಾಗುತ್ತಿದೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಫೋಕ್ಸ್‌ವ್ಯಾಗನ್ ಕಂಪನಿಯು ಸಹ ತನ್ನ ಸಹಭಾಗಿತ್ವ ಸಂಸ್ಥೆಯಾದ ಸ್ಕೋಡಾ ಆಟೋ ಕಂಪನಿ ಜೊತೆಗೂಡಿ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿ ಟೈಗನ್ ಮತ್ತು ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಎರಡು ಕಾರು ಮಾದರಿಗಳು ವಿನ್ಯಾಸ ಹೊರತುಪಡಿಸಿ ತಾಂತ್ರಿಕವಾಗಿ, ಎಂಜಿನ್ ಆಯ್ಕೆಯಲ್ಲಿ ಎರಡು ಮಾದರಿಗಳು ಒಂದೇ ಆಗಿವೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಸ್ಕೋಡಾ ಕುಶಾಕ್ ಕಾರು ಮಾದರಿಯಲ್ಲೇ ಫೋಕ್ಸ್‌ವ್ಯಾಗನ್ ಟೈಗನ್ ಕೂಡಾ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಎಂಕ್ಯೂಬಿ ಎ0 ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆಗೊಂಡಿರುವ ಹೊಸ ಕಾರುಗಳು ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ವಿಭಿನ್ನ ಗ್ರಾಹಕ ಸಮುದಾಯವನ್ನು ಸೆಳೆಯುತ್ತಿವೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಜೊತೆಗೆ ಹೊಸ ಕಾರುಗಳನ್ನು ಸ್ಥಳೀಯವಾಗಿ ಉತ್ಪಾದನೆಗೊಂಡಿರುವ ಶೇ.95 ರಷ್ಟು ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಆಮದು ಬಿಡಿಭಾಗಗಳನ್ನು ತಗ್ಗಿಸಿರುವುದರಿಂದ ಬೆಲೆಯಲ್ಲೂ ಕೂಡಾ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾಗಿವೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಹೊಸ ಟೈಗುನ್ ಕಾರು ಡೈನಾಮಿಕ್ ಲೈನ್(ಕಂಫರ್ಟ್ ಲೈನ್, ಹೈ ಲೈನ್ ಮತ್ತು ಟಾಪ್ ಲೈನ್) ಮತ್ತು ಜಿಟಿ ಲೈನ್(ಜಿಟಿ ಮತ್ತು ಜಿಟಿ ಪ್ಲಸ್) ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.50 ಲಕ್ಷ ಬೆಲೆ ಹೊಂದಿದೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಕುಶಾಕ್ ಕಾರು ಕೂಡಾ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ಹೊಸ ಸೇಫ್ಟಿ ಫೀಚರ್ಸ್‌ನೊಂದಿಗೆ ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಟೈಗುನ್ ಮಾದರಿಯಲ್ಲೂ ಕುಶಾಕ್ ಮಾದರಿಯಲ್ಲಿರುವ ಎಂಜಿನ್ ಆಯ್ಕೆಯನ್ನೇ ನೀಡಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ಇದುವರೆಗೆ 18 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಫೋಕ್ಸ್‌ವ್ಯಾಗನ್ ಕಂಪನಿಯು ಈಗಾಗಲೇ ಟೈಗುನ್ ಕಾರು ಮಾದರಿಯ ವಿತರಣೆ ಆರಂಭಿಸಿದ್ದು, ಮೊದಲ ತಿಂಗಳಿನಲ್ಲಿಯೇ 2,551 ಯುನಿಟ್ ಮಾರಾಟದೊಂದಿಗೆ ಕುಶಾಕ್ ಮಾದರಿಯನ್ನು ಹಿಂದಿಕ್ಕಿದೆ. ಅಕ್ಟೋಬರ್ ಅವಧಿಯಲ್ಲಿ ಕುಶಾಕ್ ಕಾರು 2,413 ಯನಿಟ್ ಮಾರಾಟಗೊಂಡಿದ್ದು, ಟೈಗುನ್ ಮಾದರಿಯೊಂದಿಗೆ ಪೈಪೋಟಿ ನಡೆಸುತ್ತಿದೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ವಿಭಿನ್ನವಾದ ವಿನ್ಯಾಸ ಹೊರತುಪಡಿಸಿ ಒಂದೇ ಮಾದರಿಯ ತಾಂತ್ರಿಕ ಅಂಶಗಳು, ಎಂಜಿನ್ ಆಯ್ಕೆ, ಬೆಲೆಯಲ್ಲೂ ಕೂಡಾ ಒಂದೇ ರೀತಿಯಾಗಿದ್ದರೂ ಕುಶಾಕ್ ಕಾರು ಮಾದರಿಗಿಂತಲೂ ಟೈಗುನ್ ಕಾರು ಮಾದರಿಗೆ ಉತ್ತಮ ಬೇಡಿಕೆ ಹರಿದುಬಂದಿದ್ದು, ಫೋಕ್ಸ್‌ವ್ಯಾಗನ್ ಬ್ರಾಂಡ್ ಗ್ರಾಹಕರು ಹೆಚ್ಚಿನ ಒತ್ತು ನೀಡಿರುವ ಸಾಧ್ಯತೆಗಳಿವೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಪ್ರತಿಸ್ಪರ್ಧಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಕೋಡಾ ಕುಶಾಕ್ ಮಾದರಿಯು ಅತಿ ಕಡಿಮೆ ಅವಧಿಯಲ್ಲಿ ಇದು ಕೂಡಾ 13 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ ಗುರಿತಲುಪಿದ್ದು, ಹೊಸ ಕಾರು ವಿತರಣೆ ಆರಂಭಿಸಿದ ನಂತರ ಇದುವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ಯುನಿಟ್ ಗ್ರಾಹಕರ ಕೈಸೇರಿವೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಎರಡು ಮಾದರಿಗಳಲ್ಲೂ ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಸ್ಕೋಡಾ ಕುಶಾಕ್ ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗುನ್

ಹೊಸ ಕಾರುಗಳಲ್ಲಿ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40 ಸುರಕ್ಷಾ ಫೀಚರ್ಸ್‌ಗಳನ್ನು ನೀಡಲಾಗಿದ್ದು, 6 ಏರ್‌ಬ್ಯಾಗ್(ಟಾಪ್ ಎಂಡ್ ಮಾದರಿಯಲ್ಲಿ) ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿ ಹಲವು ಸೌಲಭ್ಯಗಳಿವೆ.

More from DriveSpark

Article Published On: Monday, November 8, 2021, 9:42 [IST]
English summary
All new volkswagen taigun beats skoda kushaq in 2021 oct sales details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+