ಟ್ರೈಬರ್ ಮಾದರಿಯೊಂದಿಗೆ ಏಪ್ರಿಲ್ ಅವಧಿಯ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡ ರೆನಾಲ್ಟ್
ರೆನಾಲ್ಟ್ ಇಂಡಿಯಾ ಕಂಪನಿಯು 2021ರ ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರೆನಾಲ್ಟ್ ಕಂಪನಿಯು ಹೊಸ ಕಾರು ಮಾದರಿಯೊಂದಿಗೆ ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದೊಂದಿಗೆ ಸ್ಥಿರತೆ ಕಾಯ್ದುಕೊಂಡಿದೆ.

ಕೋವಿಡ್‌ನಿಂದಾಗಿ ಹೊಸ ವಾಹನ ಮಾರಾಟವು ಇದೀಗ ಸಾಕಷ್ಟು ಇಳಿಕೆಯಾಗಿದ್ದರೂ ಕಳೆದ ತಿಂಗಳ ಆರಂಭದಲ್ಲಿ ಹಲವಾರು ಕಾರು ಕಂಪನಿಗಳು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ರೆನಾಲ್ಟ್ ಕಂಪನಿಯು ಸಹ ಸುಮಾರು 8,642 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಂಪೂರ್ಣವಾಗಿ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಬಂದ್ ಮಾಡಿದ್ದ ಆಟೋ ಕಂಪನಿಗಳು ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಗರಿಷ್ಠ ಮಟ್ಟದ ಬೇಡಿಕೆ ಪಡೆದುಕೊಂಡಿದ್ದವು.

ಕಳೆದ ತಿಂಗಳ ಮಧ್ಯಂತರ ಅವಧಿ ತನಕವು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದ ಕಾರು ಕಂಪನಿಗಳಿಗೆ ಕೋವಿಡ್ 2ನೇ ಅಲೆ ಮತ್ತೆ ಹೊಡೆತ ನೀಡುತ್ತಿದ್ದು, ಇದರ ನಡುವೆ ರೆನಾಲ್ಟ್ ಕಂಪನಿಯು ಕಳೆದ ತಿಂಗಳು 8,642 ಯುನಿಟ್ ಕಾರುಗಳನ್ನು ವಿತರಣೆಯಾಗಿವೆ.

ಮಾರ್ಚ್ ಅವಧಿಯಲ್ಲಿ ಹೊಚ್ಚ ಹೊಸ ಕಿಗರ್ ಮತ್ತು 2021ರ ಟ್ರೈಬರ್ ಮೂಲಕ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದ ರೆನಾಲ್ಟ್ ಕಂಪನಿಯು 12,356 ಯುನಿಟ್ ಮಾರಾಟ ಮಾಡಿತ್ತು. ಆದರೆ ಕಳೆದ ತಿಂಗಳ ಮಧ್ಯಂತರದಲ್ಲಿ ಹೆಚ್ಚಳವಾದ ಕೋವಿಡ್ ಪರಿಣಾಮ ಮಾರಾಟ ಪ್ರಮಾಣದಲ್ಲಿ ಶೇ.30ರಷ್ಟು ಬೇಡಿಕೆ ಕುಸಿದಿದೆ.

ಬುಕ್ಕಿಂಗ್ ಮತ್ತು ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ರೆನಾಲ್ಟ್ ಕಂಪನಿಯು ಏಪ್ರಿಲ್ ತಿಂಗಳ ಮೊದಲ 15 ದಿನಗಳ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳನ್ನು ವಿತರಣೆ ಮಾಡಿದ್ದು, ಇದೀಗ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಾಹನಗಳ ವಿತರಣೆಯನ್ನು ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಕೈಗೊಳ್ಳಲಾಗುತ್ತಿದೆ.

ಕೋವಿಡ್ ಪರಿಣಾಮ ಮೇ ಅವಧಿಯಲ್ಲಿನ ಕಾರು ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿತ ಕಾಣಬಹುದು ಎನ್ನಲಾಗುತ್ತಿದ್ದು, ಕೋವಿಡ್ ಪರಿಣಾಮ ವಾಹನಗಳ ಬುಕ್ಕಿಂಗ್ ಪ್ರಕ್ರಿಯೆಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಸಾಕಷ್ಟು ಕುಸಿತ ಕಂಡುಬರುತ್ತಿರುವುದು ಆಟೋ ಕಂಪನಿಗಳಿಗೆ ಮತ್ತೆ ನಷ್ಟ ಭೀತಿ ಎದುರಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಭಾರೀ ಪ್ರಮಾಣದ ನಷ್ಟ ಸಂಭವಿಸುವ ಸಾಧ್ಯತೆಗಳಿವೆ.

ಕಳೆದ ವರ್ಷದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ ಇನ್ನು ಕೆಲವು ವಾಹನ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ.
MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕೆಲವೇ ಕೆಲವು ಕಂಪನಿಗಳು ಮಾತ್ರ ವಾಹನ ಉತ್ಪಾದನೆ ಕೈಗೊಳ್ಳುತ್ತಿವೆ.


Click it and Unblock the Notifications