Just In
- 9 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 11 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
- 11 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್ಲಿಫ್ಟ್
- 12 hrs ago
ಪ್ರೀಮಿಯಂ ಕಾರುಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯೇ ಬೆಸ್ಟ್
Don't Miss!
- News
3ನೇ ಹಂತದ ಕೋವಿಡ್ ಲಸಿಕೆಗೆ ಶಿರಸಿಯಲ್ಲಿ ಸುಧಾಕರ್ ಚಾಲನೆ
- Lifestyle
ದಿನ ಭವಿಷ್ಯ: ಭಾನುವಾರದ ರಾಶಿಫಲ ಹೇಗಿದೆ ನೋಡಿ
- Sports
ಐಎಸ್ಎಲ್: ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವಿರುದ್ದ ಸುಳ್ಳು ಮಾಹಿತಿ ಪ್ರಚಾರದ ಆರೋಪ
ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಖರೀದಿಗೆ ಭಾರೀ ಬೇಡಿಕೆ ಹರಿದುಬರುತ್ತಿರುವ ಸಂದರ್ಭದಲ್ಲಿ ಹೊಸ ಕಾರಿನ ಕುರಿತು ಗ್ರಾಹಕರಿಗೆ ನಿಸ್ಸಾನ್ ಕಂಪನಿಯು ಸುಳ್ಳು ಮಾಹಿತಿಯನ್ನು ನೀಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಮ್ಯಾಗ್ನೈಟ್ ಕಾರು ಮಾದರಿಯು ಬೆಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್ ಹೊಂದಿರುವುದಾಗಿ ಹೇಳಿಕೊಂಡಿರುವ ನಿಸ್ಸಾನ್ ಕಂಪನಿಯು ಇತ್ತೀಚೆಗೆ ಹೊಸ ಟಿವಿ ಜಾಹೀರಾತುವೊಂದನ್ನು ಪ್ರಕಟಿಸಿತ್ತು. ಹೊಸ ಜಾಹೀರಾತು ಪ್ರಕಾರ ಕಾರಿನ ಮಾಹಿತಿಯು ತಪ್ಪು ಸಂದೇಶ ನೀಡುತ್ತಿದೆ ಎಂದು ಹಲವಾರು ಗ್ರಾಹಕರು ಜಾಹೀರಾತು ಮಾನದಂಡಗಳ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.

ಸಬ್ -4 ಮೀಟರ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲೇ ಮ್ಯಾಗ್ನೈಟ್ ಕಾರು ಅತ್ಯುತ್ತಮ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಅತ್ಯುತ್ತಮ ಇಂಧನ ದಕ್ಷತೆ, ಅತ್ಯುತ್ತಮ ಹಿಂಬದಿ ಪ್ರಯಾಣಿಕ ಆಸನ, ಅತ್ಯುತ್ತಮ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಡಿಆರ್‌ಎಲ್ಎಸ್‌ಗಳನ್ನು ಹೊಂದಿರುವುದಾಗಿ ನಿಸ್ಸಾನ್ ಹೊಸ ಟಿವಿ ಜಾಹೀರಾತಿ ಮಾಹಿತಿ ನೀಡಲಾಗಿತ್ತು.

ಆದರೆ ನಿಸ್ಸಾನ್ ಕಂಪನಿಯ ಜಾಹೀರಾತಿನಲ್ಲಿರುವಂತೆ ಕಾರಿನ ತಾಂತ್ರಿಕಗಳು ಹೊಂದಿಲ್ಲ ಎಂಬುವುದಾಗಿ ಹಲವಾರು ಗ್ರಾಹಕರು ಸಿಸಿಸಿ(ಗ್ರಾಹಕ ದೂರುಗಳ ವೇದಿಕೆ)ಯಲ್ಲಿ ದೂರು ದಾಖಲಿಸಿದ್ದು, ಗ್ರಾಹಕರ ದೂರಗಳ ಆಧಾರದ ಮೇಲೆ ಜಾಹೀರಾತು ಮಾನದಂಡಗಳ ಮಂಡಳಿಯು ನಿಸ್ಸಾನ್ ಕಂಪನಿಗೆ ನೋಟಿಸ್ ನೀಡಿದೆ.

ಗ್ರಾಹಕರ ದೂರುಗಳಿಗೆ ಸಮರ್ಪಕವಾದ ಉತ್ತರ ನೀಡುವಂತೆ ಜಾಹೀರಾತು ಮಾನದಂಡಗಳ ಮಂಡಳಿಯು ನಿಸ್ಸಾನ್ ಕಂಪನಿಗೆ ನೋಟಿಸ್ ನೀಡಿದ್ದು, ನೋಟಿಸ್‌ಗೆ ಉತ್ತರಿಸಲು ನಿಸ್ಸಾನ್ ಕಂಪನಿಯು ಜಾಹೀರಾತು ಮಾನದಂಡಗಳ ಮಂಡಳಿಯ ಮುಂದೆ ಖುದ್ದು ಹಾಜರಾಗಿ ಜಾಹೀರಾತು ಮಾಹಿತಿ ಕುರಿತಂತೆ ಸೂಕ್ತ ದಾಖಲೆಗಳನ್ನು ಒದಗಿಸಿದೆ. ಆದರೆ ನಿಸ್ಸಾನ್ ಕಂಪನಿ ನೀಡಿರುವ ಮಾಹಿತಿಗೆ ಪ್ರಕ್ರಿಯಿಸಿರುವ ಜಾಹೀರಾತು ಮಾನದಂಡಗಳ ಮಂಡಳಿಯು ಜಾಹೀರಾತಿನಲ್ಲಿರುವಂತೆ ಮಾಹಿತಿಗಳನ್ನು ಸಾಬೀತುಪಡಿಸಲು ಇನ್ನಷ್ಟು ಮಾಹಿತಿ ಅವಶ್ಯಕತೆಯಿದೆ ಎಂದಿದೆ.

ಮ್ಯಾಗ್ನೈಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿಯಲ್ಲಿಯೇ ಉತ್ತಮ ಕಾರು ಎಂದು ಸಾಬೀತುಪಡಿಸಲು ಥರ್ಡ್ ಪಾರ್ಟಿಗಳಿಗೆ ನೀಡಲಾಗಿರುವ ಜಾಹೀರಾತು ಮಾಹಿತಿಯನ್ನು ಕಲೆಹಾಕುತ್ತಿರುವ ಜಾಹೀರಾತು ಮಾನದಂಡಗಳ ಮಂಡಳಿಯು ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.

ಸುಳ್ಳು ಜಾಹೀರಾತುಗಳ ಮೂಲಕ ಗ್ರಾಹಕರನ್ನು ಮೋಸಗೊಳಿಸುವ ಕಂಪನಿಗಳ ವಿರುದ್ದ ಸಮರಸಾರಿರುವ ಜಾಹೀರಾತು ಮಾನದಂಡಗಳ ಮಂಡಳಿಯು ಗ್ರಾಹಕ ದೂರುಗಳ ವೇದಿಕೆ ಮೂಲಕ ತಪ್ಪು ಸಂದೇಶ ಹೊಂದಿರುವ ಸಾವಿರ ಜಾಹೀರಾತುಗಳಿಗೆ ಬ್ರೇಕ್ ಹಾಕಿದ್ದು, ಇದೀಗ ನಿಸ್ಸಾನ್ ಕಂಪನಿಯ ಹೊಸ ಮ್ಯಾಗ್ನೈಟ್ ಕಾರಿನ ವಿರುದ್ದ ದೂರಿನ ವಿಚಾರಣೆ ನಡೆಸುತ್ತಿದೆ.

ಆರಂಭಿಕ ವಿಚಾರಣೆಯಲ್ಲಿ ಜಾಹೀರಾತು ಮತ್ತು ಕಂಪನಿಯ ಮಾಹಿತಿಯನ್ನ ಆಧಾರಿಸಿ ವಿಚಾರಣೆ ನಡೆಸಿರುವ ಜಾಹೀರಾತು ಮಾನದಂಡಗಳ ಮಂಡಳಿಯು ಉತ್ತಮ ಕಾರು ಮಾದರಿಯೆಂದು ಸಾಬೀತುಪಡಿಸಲು ಮತ್ತಷ್ಟು ಮಾಹಿತಿ ಕೋರಿದ್ದು, ಶೀಘ್ರದಲ್ಲೇ ಗ್ರಾಹಕರ ದೂರಗಳಿಗೆ ಸ್ಪಷ್ಟ ಸಂದೇಶ ನೀಡಲಿದೆ.
MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ಇನ್ನು ಹೊಸ ಮ್ಯಾಗ್ನೈಟ್ ಕಾರು ಬಿಡುಗಡೆಯಾದ ಒಂದೂವರೆ ತಿಂಗಳಿನಲ್ಲಿ ಇದುವರೆಗೆ ಸುಮಾರು 40 ಸಾವಿರ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ಆವೃತ್ತಿಗಳಲ್ಲಿ ಮಾರಾಟಗೊಳ್ಳುತ್ತಿದೆ.

ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರಿನಲ್ಲಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುರಕ್ಷತೆಗಾಗಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್‌ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್‌ನ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.