200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಭಾರತದ ವಿವಿಧ ನಗರಗಳು ವಾಯು ಮಾಲಿನ್ಯದ ಸಮಸ್ಯೆಯಿಂದ ತೀವ್ರವಾಗಿ ತತ್ತರಿಸಿವೆ. ಜನರು ಪೆಟ್ರೋಲ್, ಡೀಸೆಲ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವುದೇ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ. ಆದರೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡಲಾಗುತ್ತದೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಕೇಂದ್ರ ಸರ್ಕಾರವು ತನ್ನ ಫೇಮ್ ಇಂಡಿಯಾ 2 ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತದೆ. ಇನ್ನು ಕೆಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ಪ್ರತ್ಯೇಕ ವಾಹನ ನೀತಿಯನ್ನು ಜಾರಿಗೊಳಿಸಿವೆ. ಗುಜರಾತ್, ದೆಹಲಿ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಿಡಿ ನೀಡುತ್ತಿವೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳು, ಎಲೆಕ್ಟ್ರಿಕ್ ತ್ರಿ ಚಕ್ರ ವಾಹನಗಳು ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳ ಬಳಕೆಯ ಜೊತೆಗೆ ಎಲೆಕ್ಟ್ರಿಕ್ ಬಸ್ಸುಗಳ ಬಳಕೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದು ಗಮನಾರ್ಹ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ದೇಶದ ವಿವಿಧ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಮುಂಬೈ, ದೆಹಲಿ ಹಾಗೂ ಕೋಲ್ಕತ್ತಾದಂತಹ ವಿವಿಧ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಕಾರ್ಯಾಚರಣೆಯನ್ನು ಆರಂಭಿಸಿವೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಸಿ‌ಎನ್‌ಜಿ ಬಸ್ಸುಗಳ ಕಾರ್ಯಾಚರಣೆಗೂ ಚಾಲನೆ ನೀಡಲಾಗುತ್ತಿದೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಸಿಎನ್‌ಜಿ ಬಸ್ಸುಗಳ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯು ಡೀಸೆಲ್ ಎಂಜಿನ್ ಚಾಲಿತ ಬಸ್‌ಗಳನ್ನು ಸಿಎನ್‌ಜಿ ಚಾಲಿತ ಬಸ್‌ಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಎಲೆಕ್ಟ್ರಿಕ್ ಬಸ್ಸುಗಳು ಹಾಗೂ ಸಿಎನ್‌ಜಿ ಬಸ್ಸುಗಳು ಪರಿಸರ ಸ್ನೇಹಿಯಾಗಿವೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಜೊತೆಗೆ ಡೀಸೆಲ್ ಎಂಜಿನ್ ಬಸ್ಸುಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಹಾಗೂ ಸಿ‌ಎನ್‌ಜಿ ಬಸ್ಸುಗಳ ನಿರ್ವಹಣಾ ವೆಚ್ಚ ಕಡಿಮೆ. ಎಲೆಕ್ಟ್ರಿಕ್ ಹಾಗೂ ಸಿ‌ಎನ್‌ಜಿ ಬಸ್ ಗಳ ಬಳಕೆಯನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕೂಡ ಕಡಿಮೆ ಮಾಡಬಹುದು. ಈ ಕಾರಣಕ್ಕೆ ವಿವಿಧ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ಬಸ್ ಗಳ ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿವೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಈಗ ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅಸ್ಸಾಂ ರಾಜ್ಯವು ಸಹ ಈ ಪಟ್ಟಿಗೆ ಸೇರಿದೆ. ಅಸ್ಸಾಂ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ಹಾಗೂ ಸಿ‌ಎನ್‌ಜಿ ಬಸ್ಸುಗಳ ಬಳಕೆಗೆ ನಿರ್ಧಾರ ಕೈಗೊಂಡಿದೆ. ಅಸ್ಸಾಂ ರಾಜ್ಯ ಸರ್ಕಾರವು 200 ಎಲೆಕ್ಟ್ರಿಕ್ ಬಸ್ ಖರೀದಿಸಲು ನಿರ್ಧರಿಸಿದೆ. ಇದರ ಜೊತೆಗೆ 100 ಸಿಎನ್‌ಜಿ ಬಸ್‌ಗಳನ್ನು ಖರೀದಿಸಲು ನಿರ್ಧರಿಸಿದೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಈ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಬಸ್ಸುಗಳು ಗುವಾಹಟಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಪರಿಸರವನ್ನು ಸಂರಕ್ಷಿಸಲು ಅಸ್ಸಾಂ ಸರ್ಕಾರವು ಈ ನಿರ್ಧಾರವನ್ನು ತೆಗೆದು ಕೊಂಡಿದೆ. ವಿವಿಧ ರಾಜ್ಯಗಳಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಬಸ್ಸುಗಳು ಕಾರ್ಯ ನಿರ್ವಹಿಸುತ್ತಿದ್ದರೂ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಬಸ್ಸುಗಳ ಕಾರ್ಯಾಚರಣೆ ಕಡಿಮೆ ಪ್ರಮಾಣದಲ್ಲಿದೆ ಎಂಬುದು ಗಮನಾರ್ಹ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದರೆ 2019 ರ ಆಗಸ್ಟ್ ತಿಂಗಳಿನಲ್ಲಿ ಚೆನ್ನೈನಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನುಪರಿಚಯಿಸಲಾಯಿತು. ನಂತರ ಈ ಎಲೆಕ್ಟ್ರಿಕ್ ಬಸ್ಸುಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುವುದು ಎಂದು ಘೋಷಿಸಲಾಯಿತು. ಆದರೆ ಅದರ ನಂತರ ಈ ಯೋಜನೆ ಏನಾಯಿತು ಎಂಬುದು ಖಚಿತವಾಗಿಲ್ಲ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಈಗ ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಅಧಿಕಾರದಲ್ಲಿದೆ. ಇತ್ತೀಚೆಗೆ ತಮಿಳುನಾಡು ರಾಜ್ಯದ ಬಜೆಟ್ ಮಂಡನೆಯಾದ ಸಂದರ್ಭದಲ್ಲಿ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ ರೂ. 3 ಗಳಷ್ಟು ಕಡಿಮೆ ಮಾಡಿದೆ. ತಮಿಳುನಾಡು ಸರ್ಕಾರದ ಈ ಕ್ರಮದಿಂದಾಗಿ ವಾಹನ ಸವಾರರಿಗೆ ಅದರಲ್ಲೂ ವಿಶೇಷವಾಗಿ ದ್ವಿ ಚಕ್ರ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗಿದೆ.

200 ಎಲೆಕ್ಟ್ರಿಕ್ ಹಾಗೂ 100 ಸಿ‌ಎನ್‌ಜಿ ಬಸ್ಸುಗಳ ಖರೀದಿಗೆ ನಿರ್ಧರಿಸಿದ ಈಶಾನ್ಯ ರಾಜ್ಯ

ಈ ಹಿನ್ನೆಲೆಯಲ್ಲಿ ಅಲ್ಲಿನ ಜನರು ಎಲೆಕ್ಟ್ರಿಕ್ ಹಾಗೂ ಸಿ‌ಎನ್‌ಜಿ ವಾಹನಗಳ ಬಳಕೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ತಮಿಳುನಾಡು ಮಾತ್ರವಲ್ಲದೇ ನಮ್ಮ ಕರ್ನಾಟಕದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಜನರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದರಿಂದ ಪರಿಸರವನ್ನು ರಕ್ಷಿಸುವುದರ ಜೊತೆಗೆ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಮುಂಬರುವ ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುವ ನಿರೀಕ್ಷೆಗಳಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Assam government to introduce 200 electric and 100 cng buses details
Story first published: Monday, August 23, 2021, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X