2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಆಡಿ ತನ್ನ ಜನಪ್ರಿಯ ಕಾರು ಮಾದರಿಗಳಾದ ಎ3 ಮತ್ತು ಕ್ಯೂ3 ಕಾರು ಮಾದರಿಗಳನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರುಗಳು ಮುಂದಿನ ವರ್ಷ 2022ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿವೆ.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಎ3 ಸೆಡಾನ್ ಮತ್ತು ಕ್ಯೂ3 ಎಸ್‌ಯುವಿ ಮಾದರಿಗಳ ಹೊಸ ಆವೃತ್ತಿಗಳನ್ನು ಕಳೆದ ವರ್ಷವೇ ಬಿಡುಗಡೆಯ ಯೋಜನೆಯಲ್ಲಿದ್ದ ಆಡಿ ಕಂಪನಿಯು ಕೋವಿಡ್ ಪರಿಣಾಮ ಮುಂದೂಡಿಕೆ ಮಾಡುತ್ತಾ ಬಂದಿತು. ಆದರೆ ಇದೀಗ ಈ ವರ್ಷ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದ ಕಂಪನಿಗೆ ಕೋವಿಡ್ ಎರಡನೇ ಅಲೆಯು ಮತ್ತೆ ಕುಸಿತ ಭೀತಿ ಉಂಟು ಮಾಡಿದ್ದು, ಈ ಹಿನ್ನಲೆಯಲ್ಲಿ ಹೊಸ ಕಾರುಗಳನ್ನು ಮುಂಬರುವ 2022ರ ವೇಳೆಗೆ ಬಿಡುಗಡೆ ಮುಂದೂಡಿಕೆ ಮಾಡಲಾಗಿದೆ.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಬಿಎಸ್ 6 ಜಾರಿ ನಂತರ ಎ3 ಸೆಡಾನ್ ಮತ್ತು ಕ್ಯೂ3 ಎಸ್‌ಯುವಿ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಆಡಿ ಕಂಪನಿಯು ಬಿಎಸ್ 6 ಮಾದರಿಗಳ ಬಿಡುಗಡೆಗೆ ವೇಳೆಗೆ ಕೋವಿಡ್‌ನಿಂದಾದ ಆರ್ಥಿಕ ಸಂಕಷ್ಟದಿಂದಾಗಿ ಹೊಸ ಕಾರು ಬಿಡುಗಡೆಯನ್ನು ಸ್ಥಗಿತಗೊಳಿಸಿತ್ತು.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಆದರೆ ಈ ವರ್ಷದ ಮಧ್ಯಂತರ ಬಿಡುಗಡೆ ಮಾಡುವ ಹೊತ್ತಿಗೆ ಮತ್ತೆ ಕೋವಿಡ್ ನಿಂದ ಆರ್ಥಿಕ ಸಂಕಷ್ಟವು ವಾಹನ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರುವ ಭೀತಿಯಿಂದಾಗಿ ಹೊಸ ಕಾರುಗಳ ಬಿಡುಗಡೆ ಮುಂದೂಡಲಾಗುತ್ತಿದ್ದು, 2022ರ ಆರಂಭದಲ್ಲಿ ಎ3 ಸೆಡಾನ್ ಮತ್ತು ಕ್ಯೂ3 ಎಸ್‌ಯುವಿ ಮಾದರಿಗಳ ಬಿಡುಗಡೆಯು ಖಚಿತವಾಗಿದೆ.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಎ3 ಸೆಡಾನ್ ಮತ್ತು ಕ್ಯೂ3 ಎಸ್‌ಯುವಿ ಮಾದರಿಗಳು ಮರುವಿನ್ಯಾಸಗೊಳಿಸಲಾದ ಡಿಸೈನ್ ಮತ್ತು ಹೊಸ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಆಡಿ ಹೊಸ ಕಾರುಗಳು ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಕಂಪನಿಯ ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಳ್ಳಲಿದ್ದು, ಹೊಸ ಕಾರುಗಳು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಾಗಿ ಪ್ರಮುಖ ಮೂರು ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿವೆ.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಮಾಹಿತಿಗಳ ಪ್ರಕಾರ, ಆಡಿ ಕಂಪನಿಯು ಹೊಸ ಕಾರುಗಳಲ್ಲಿ ಯಾವುದೇ ಡೀಸೆಲ್ ಎಂಜಿನ್ ಪರಿಚಯಿಸುತ್ತಿಲ್ಲ ಎನ್ನಲಾಗಿದ್ದು, ಪೆಟ್ರೋಲ್ ಎಂಜಿನ್ ಮಾದರಿಗಳು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಣೆ ಹೊಂದಿರಲಿವೆ.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಇನ್ನು ಆಡಿ ಇಂಡಿಯಾ ಕಂಪನಿಯು ತನ್ನ ಐಷಾರಾಮಿ ಕಾರುಗಳ ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಮುಂದಿನ ಒಂದು ತಿಂಗಳಿಗೆ ಹೆಚ್ಚಿಸಿದ್ದು, ಲಾಕ್‌ಡೌನ್‌ನಲ್ಲಿ ಮುಕ್ತಾಯಗೊಳ್ಳಲಿದ್ದ ಸ್ಟ್ಯಾಂಡರ್ಡ್ ವಾರಂಟಿ ಮತ್ತು ಉಚಿತ ಸೇವೆಗಳನ್ನು ಜೂನ್ 30ರ ತನಕ ಮುಂದೂಡಿಕೆ ಮಾಡಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಸರಿಯಾದ ಸಮಯಕ್ಕೆ ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ.

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಇದರಿಂದ ಲಾಕ್‌ಡೌನ್ ಅವಧಿಯಲ್ಲಿ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳಬೇಕಿದ್ದ ವಾಹನಗಳ ವಾರಂಟಿ ಅವಧಿಯು ಮುಗಿದುಹೋಗಲಿದ್ದು, ಹೊಸ ವಾಹನ ಖರೀದಿದಾರರಿಗೆ ಆಡಿ ಇಂಡಿಯಾ ಕಂಪನಿಯು ಸಿಹಿಸುದ್ದಿ ನೀಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

2022ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಡಿ ಎ3 ಮತ್ತು ಕ್ಯೂ3 ಕಾರುಗಳು

ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ವಾರಂಟಿ ಮುಕ್ತಾಯವಾಗುವುದರಿಂದ ಗ್ರಾಹಕರ ಸೇವೆಗಳು ಕಡಿತವಾಗುವ ವಿಚಾರವಾಗಿ ಸ್ಪಷ್ಟನೆ ನೀಡಿರುವ ಆಡಿ ಇಂಡಿಯಾ ಕಂಪನಿಯು ಮೇ ತಿಂಗಳಿನಲ್ಲಿ ಮುಕ್ತಾಯಗೊಳ್ಳಬೇಕಿರುವ ಕಾರುಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಜೂನ್ 30ರ ತನಕ ಮುಂದೂಡಿಕೆ ಮಾಡಿದೆ.

More from DriveSpark

Article Published On: Wednesday, May 26, 2021, 8:45 [IST]
English summary
Audi Expected To Launch The Second-Generation A3 & Q3 Next Year. Read in Kannada.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+