2020ರ ಅವಧಿಯ ಕಾರು ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಆಡಿ
ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ಕಂಪನಿಯು 2020ರ ಅವಧಿಯ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ಆಡಿ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 1,693 ಕಾರುಗಳನ್ನು ಮಾರಾಟಗೊಳಿಸಿವೆ.

ಆಡಿ ಇಂಡಿಯಾ ಕಂಪನಿಯು 2010ರಲ್ಲಿ 3,003 ಯುನಿಟ್‌ಗಳಷ್ಟು ಮಾರಾಟವನ್ನು ಮಾಡಲಾಗಿತ್ತು. ಇದರ ಬಳಿಕ 2020ರಲ್ಲಿ ಅದೇ ರೀತಿ ದೊಡ್ಡ ಕುಸಿತವನ್ನು ಕಂಡಿದೆ. 2018ರಲ್ಲಿ ಆಡಿ ಕಂಪನಿಯು ಭಾರತದಲ್ಲಿ 6,463 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ನಂತರ 2019ರಲ್ಲಿ ಭಾರತದಲ್ಲಿ 4,594 ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. 2019ರ ಕಾರು ಮಾರಾಟವನ್ನು 2020ರ ಅವಧಿಯ ಕಾರು ಮಾರಾಟಕ್ಕೆ ಹೋಲಿಸಿದರೆ ಶೇ.63.15 ರಷ್ಟು ಕುಸಿತವನ್ನು ಕಂಡಿದೆ.

2020ರ ಮಾರಾಟ ಸಂಖ್ಯೆಗಳು 11 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ. ಲಾಭದಾಯಕತೆಯನ್ನು ಸುಧಾರಿಸಲು ಮತ್ತು ಬಿಎಸ್ 6 ಹೊರಸೂಸುವಿಕೆಯ ಮಾನದಂಡಗಳಿಗೆ ಪರಿವರ್ತಿಸಲು ಕಂಪನಿಯು ಗಮನಹರಿಸಿದೆ. 2020ರಲ್ಲಿ ಕೊರೋನಾ ವೈರಸ್ ನಿಂದ ಹೆಚ್ಚಿನ ಹಿನ್ನಡೆಯಾಗಿದೆ ಎಂದು ಆಡಿ ಕಂಪನಿ ಹೇಳಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಆಡಿ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ ಕ್ಯೂ2 ಎಂಟ್ರಿ ಲೆವಲ್ ಐಷಾರಾಮಿ ಎಸ್‌ಯುವಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಆಡಿ ಕ್ಯೂ2 ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 188 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಕ್ವಾಟ್ರೋ ಆಲ್-ವ್ಹೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಜೋಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಡಿ ಕ್ಯೂ2 ಎಸ್‍ಯುವಿಯ ಫ್ರಂಟ್-ವ್ಹೀಲ್-ಡ್ರೈವ್ ವೆರಿಯೆಂಟ್ 405 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಆಲ್-ವ್ಹೀಲ್-ಡ್ರೈವ್ ವೆರಿಯೆಂಟ್ 355 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯಲ್ಲಿ 12.3-ಇಂಚಿನ ವರ್ಚುವಲ್ ಕಾಕ್‌ಪಿಟ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ.

ಆಡಿ ತನ್ನ ಹೊಸ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್ ಕಾರನ್ನು ಭಾರತದಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿದೆ. ಈ ಆರ್‍ಎಸ್ 7 ಕಾರಿನಲ್ಲಿ 4.0-ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಎಂಜಿನ್ ಅನ್ನು ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 592 ಬಿಹೆಚ್ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹಿಂದಿನ ಮಾದರಿ 560 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತಿತ್ತು.

ಆಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಇನ್ನು ಈ ವರ್ಷದಲ್ಲಿ ಆಡಿ ಕಂಪನಿಯು ಕೆಲವು ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.


Click it and Unblock the Notifications








