ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಆಡಿ ಇಂಡಿಯಾ(Audi India) ಕಂಪನಿಯು ತನ್ನ ನವೀಕರಿಸಿದ ಕ್ಯೂ7(Q7) ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಗೆ ಕಂಪನಿಯು ಅಧಿಕೃತ ಚಾಲನೆ ನೀಡಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ನವೀಕೃತ ಆಡಿ ಕ್ಯೂ7 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರನ್ನು ಕಂಪನಿಯು ಇದೀಗ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿದೆ. ಮಹಾರಾಷ್ಟ್ರದಲ್ಲಿರುವ ಔರಂಗಾಬಾದ್‌ನಲ್ಲಿರುವ ಆಡಿ ಅಸ್ಲೆಂಬಿ ಘಟಕದಲ್ಲಿ ಹೊಸ ಕಾರಿನ ಉತ್ಪಾದನೆಯು ಅಧಿಕೃತವಾಗಿ ಆರಂಭಗೊಂಡಿದ್ದು, ಹೊಸ ಕಾರು ಈ ಬಾರಿಗೆ ಸಾಕಷ್ಟು ಹೊಸ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಬಿಎಸ್6 ಮಾಲಿನ್ಯ ನಿಯಮ ಜಾರಿ ನಂತರ ಕ್ಯೂ7 ಎಸ್‍ಯುವಿ ಮಾರಾಟವನ್ನು ಸ್ಥಗಿತಗೊಳಿಸಿದ್ದ ಆಡಿ ಕಂಪನಿಯು ಇದೀಗ ಉನ್ನತೀಕರಿಸಲಾದ ಎಂಜಿನ್‌ನೊಂದಿಗೆ 2022ರ ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆ ಮಾಡುತ್ತಿದ್ದು, ಗಮನಾರ್ಹವಾದ ಕಾಸ್ಮೆಟಿಕ್ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಹೊಸ ಆಡಿ ಕ್ಯೂ7 ಎಸ್‍ಯುವಿಯಲ್ಲಿ ಆಡಿ ಕಂಪನಿಯು ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ನೀಡಬಹುದಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ 3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ನೀಡಲಾಗುತ್ತಿದ್ದು,ಈ ಎಂಜಿನ್ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಣೆ ಮಾಡಲಾದ ಮೋಟಾರ್ ಅನ್ನು ಹೊಂದಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಮಾದರಿಯು 8 ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 340 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಆಡಿ ಕ್ವಾಟ್ರೊ ಎಡಬ್ಲ್ಯುಡಿ ಸಿಸ್ಟಮ್‌ಗೆ ಜೋಡಿಯಾಗಿ ಹೆಚ್ಚು ಪವರ್ ಪಡೆದುಕೊಂಡಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಹೊಸ ಎಸ್‍ಯುವಿಯಲ್ಲಿ 2.0 ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸಹ ನೀಡಬಹುದಾಗಿದ್ದು, ಈ ಎಂಜಿನ್ 252 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಬೆಸ್ ಆವೃತ್ತಿಯು ಆಯಿಲ್ ಬರ್ನರ್ ಅನ್ನು ಹೊಂದಿರುವುದಿಲ್ಲವಾದರೂ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗುತ್ತದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಹೊಸ ಆಡಿ ಕ್ಯೂ7 ಎಸ್‍ಯುವಿಯು ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ ಹೊಸ ಕಾರಿನಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು, ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್‌ಲೆಟ್‌ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿರುತ್ತದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ. ಅದರ ಕೆಲವು ಇತರೆ ವಿನ್ಯಾಸಗಳು ಹೊಸದಾಗಿ ವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕಗೊಂಡಿರುವ ಹೊಸ ಟೈಲ್‌ಲ್ಯಾಂಪ್‌ಗಳು ಮತ್ತು ನವೀಕರಿಸಿದ ರಿಯರ್ ಬಂಪರ್ ಅನ್ನು ಒಳಗೊಂಡಿರುತ್ತದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಸ್ಥಗಿತಗೊಳಿಸುವ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 11 ಎಂಎಂ ಹೆಚ್ಚುವರಿ ಸ್ಥಳಾವಕಾಶದೊಂದಿಗೆ 5063 ಎಂಎಂ ಉದ್ದ ಹೊಂದಿದ್ದು, ಇದು 1970 ಎಂಎಂ ಅಗಲ ಮತ್ತು 1741 ಎಂಎಂ ಎತ್ತರವನ್ನು ಹೊಂದಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಕ್ಯಾಬಿನ್ ಒಳಗೂ ಆಡಿ ಕಂಪನಿಯು ಸಮಗ್ರವಾಗಿ ನವೀಕರಣಗಳನ್ನು ಪರಿಚಯಿಸಿದ್ದು, ಇದು ಪಿಯಾನೋ ಬ್ಲಾಕ್, ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಹೈಲೈಟ್‌ಗಳ ಜೊತೆಗೆ ಸಾಕಷ್ಟು ಸುಧಾರಿತವಾಗಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಇಂಟಿಗ್ರೇಟೆಡ್ ಆಡಿಯ ಟ್ವಿನ್-ಟಚ್‌ಸ್ಕ್ರೀನ್ ಎಂಎಂಐ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್‌ನ ರೂಪದಲ್ಲಿ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ. ಮುಖ್ಯ ಯುನಿಟ್ 10.1-ಇಂಚಿನ ಮತ್ತು 8.6-ಇಂಚಿನ ಎರಡು ಡಿಸ್ ಪ್ಲೇ ಗಳನ್ನು ಹೊಂದಿದ್ದು, ಈ ಎಸ್‍ಯುವಿ ವರ್ಚುವಲ್ ಕಾಕ್‌ಪಿಟ್ ಸಿಸ್ಟಮ್ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಹೊಸ ಕಾರಿನ ವೈಶಿಷ್ಟ್ಯತೆಗಳು ಕೂಡಾ ಆಕರ್ಷಕವಾಗಿದ್ದು, ಬ್ಯಾಂಗ್ ಮತ್ತು ಒಲುಫ್ಸೆನ್ ಸೌಂಡ್ ಸಿಸ್ಟಮ್, ನಾಲ್ಕು ಝೋನ್ ಕ್ಲೈಮೇಂಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ ಪ್ಲೇ, ಹೊಸ ಎಲ್‌ಟಿಇ ಸುಧಾರಿತ ಕನೆಕ್ಟಿವಿಟಿ ಸೌಲಭ್ಯಗಳಿವೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಜೊತೆಗೆ ನ್ಯಾಚುರಲ್ ವಾಯ್ಸ್ ಕಂಟ್ರೋಲ್, ವೈ-ಫೈ ಹಾಟ್‌ಸ್ಪಾಟ್, ಆಡಿ ಕನೆಕ್ಟ್ ಪೋರ್ಟ್‌ಫೋಲಿಯೊ, ಕ್ಲೌಡ್-ಆಧಾರಿತ ಅಮೆಜಾನ್ ವಾಯ್ಸ್ ಸರ್ವಿಸ್, ಎಲೆಕ್ಟ್ರಿಕ್ ಟೈಲ್‌ಗೇಟ್, ಎಲೆಕ್ಟ್ರೋಮೆಕ್ಯಾನಿಕಲ್ ಆಕ್ಟಿವ್ ರೋಲ್ ಸ್ಟೆಬಿಲೈಸೇಶನ್, ಆಲ್-ವೀಲ್ ಸ್ಟೀರಿಂಗ್ ಮತ್ತು ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಹೊಂದಿದೆ.

ಭಾರತದಲ್ಲಿಯೇ ಅಭಿವೃದ್ದಿಗೊಂಡ ಕ್ಯೂ7 ಎಸ್‌ಯುವಿ ಉತ್ಪಾದನೆಗೆ ಚಾಲನೆ ನೀಡಿದ ಆಡಿ

ಆಡಿ ಕ್ಯೂ7 ಹೊಸ ನವೀಕರಣಗಳೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಹೊಸ ಆಡಿ ಕ್ಯೂ7 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿರುವ ಬಿಎಂಡಬ್ಕ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಇ ಮತ್ತು ವೊಲ್ವೊ ಎಕ್ಸ್‌ಸಿ90 ಎಸ್‍ಯುವಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

More from DriveSpark

Article Published On: Friday, December 10, 2021, 21:13 [IST]
English summary
Audi q7 suv production starts in india launch soon
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+