ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ Audi Q7 ಎಸ್‍ಯುವಿ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ತನ್ನ ನವೀಕರಿಸಿದ ಕ್ಯೂ7 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಆಡಿ ಕ್ಯೂ7(Audi Q7) ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಎಸ್6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಈ ಹೊಸ ಆಡಿ ಕ್ಯೂ7 ಎಸ್‍ಯುವಿಯನ್ನು ಸ್ಥಗಿತಗೊಳಿತು. ಹೊಸ 2022ರ ಆಡಿ ಕ್ಯೂ7 ಫೇಸ್‌ಲಿಫ್ಟ್ ಗಮನಾರ್ಹವಾದ ಕಾಸ್ಮೆಟಿಕ್ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ಹೊಸ ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬೂಟ್ ಮಾಡಲಾದ ಮೋಟಾರ್ ಅನ್ನು ಹೊಂದಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಆಡಿಯ ಕ್ವಾಟ್ರೊ ಎಡಬ್ಲ್ಯುಡಿ ಸಿಸ್ಟಮ್‌ಗೆ ಜೋಡಿಯಾಗಿ ಪವರ್ ಅನ್ನು ಪಡೆಯುತ್ತದೆ. ಇನ್ನು ಈ ಎಸ್‍ಯುವಿಯೊಂದಿಗೆ 2.0 ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 252 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇಂಡಿಯಾ-ಸ್ಪೆಕ್ ಆವೃತ್ತಿಯು ಆಯಿಲ್ ಬರ್ನರ್ ಅನ್ನು ಹೊಂದಿರುವುದಿಲ್ಲ.

ಹೊಸ ಆಡಿ ಕ್ಯೂ7 ಎಸ್‍ಯುವಿಯು ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್‌ಲೆಟ್‌ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿರುತ್ತದೆ.

ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ. ಅದರ ಕೆಲವು ಇತರ ವಿನ್ಯಾಸದ ಮುಖ್ಯಾಂಶಗಳು ಹೊಸದಾಗಿ ವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕಗೊಂಡಿರುವ ಹೊಸ ಟೈಲ್‌ಲ್ಯಾಂಪ್‌ಗಳು ಮತ್ತು ನವೀಕರಿಸಿದ ಇಯರ್ ಬಂಪರ್ ಅನ್ನು ಒಳಗೊಂಡಿರುತ್ತದೆ.

ಹೊರಹೋಗುವ ಮಾದರಿಗೆ ಹೋಲಿಸಿದರೆ, ಹೊಸದು 11 ಎಂಎಂ ಉದ್ದವಾಗಿದೆ ಮತ್ತು 5063 ಎಂಎಂ ಉದ್ದವನ್ನು ಅಳೆಯುತ್ತದೆ. ಇದರ ಅಗಲ 1970 ಎಂಎಂ ಮತ್ತು 1741 ಎಂಎಂ ಎತ್ತರವನ್ನು ಹೊಂದಿದೆ. ಕ್ಯಾಬಿನ್ ಒಳಗೆ ಸಮಗ್ರ ನವೀಕರಣಗಳನ್ನು ಮಾಡಲಾಗುವುದು. ಇದು ಪಿಯಾನೋ ಬ್ಲಾಕ್, ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಹೈಲೈಟ್‌ಗಳ ಜೊತೆಗೆ ಸಾಕಷ್ಟು ಸುಧಾರಿತವಾಗಿದೆ.

ಇಂಟಿಗ್ರೇಟೆಡ್ ಆಡಿಯ ಟ್ವಿನ್-ಟಚ್‌ಸ್ಕ್ರೀನ್ MMI ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್‌ನ ರೂಪದಲ್ಲಿ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ. ಈ ಪ್ರಮುಖ ಯುನಿಟ್ 10.1-ಇಂಚಿನ ಮತ್ತು 8.6-ಇಂಚಿನ ಎರಡು ಡಿಸ್ ಪ್ಲೇ ಗಳನ್ನು ಹೊಂದಿದೆ. ಈ ಎಸ್‍ಯುವಿ ವರ್ಚುವಲ್ ಕಾಕ್‌ಪಿಟ್ ಸಿಸ್ಟಮ್ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ.

ವೈಶಿಷ್ಟ್ಯಗಳ ಪಟ್ಟಿಯು ಬ್ಯಾಂಗ್ ಮತ್ತು ಒಲುಫ್ಸೆನ್ ಸೌಂಡ್ ಸಿಸ್ಟಮ್, ನಾಲ್ಕು ಝೋನ್ ಕ್ಲೈಮೇಂಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ ಪ್ಲೇ, ಹೊಸ LTE ಸುಧಾರಿತ ಕನೆಕ್ಟಿವಿಟಿ, ನ್ಯಾಚುರಲ್ ವಾಯ್ಸ್ ಕಂಟ್ರೋಲ್, ವೈ-ಫೈ ಹಾಟ್‌ಸ್ಪಾಟ್, ಆಡಿ ಕನೆಕ್ಟ್ ಪೋರ್ಟ್‌ಫೋಲಿಯೊ, ಕ್ಲೌಡ್-ಆಧಾರಿತ Amazon ವಾಯ್ಸ್ ಸರ್ವಿಸ್, ಎಲೆಕ್ಟ್ರಿಕ್ ಟೈಲ್‌ಗೇಟ್, ಎಲೆಕ್ಟ್ರೋಮೆಕಾನಿಕಲ್ ಆಕ್ಟಿವ್ ರೋಲ್ ಸ್ಟೆಬಿಲೈಸೇಶನ್, ಆಲ್-ವೀಲ್ ಸ್ಟೀರಿಂಗ್ ಮತ್ತು ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಮತ್ತು ಇನ್ನಷ್ಟು.ಫೀಚರ್ಸ್ ಗಳನ್ನು ಹೊಂದಿವೆ.

ಆಡಿ ಇಂಡಿಯಾ ತನ್ನ ಬಹುನಿರೀಕ್ಷಿತ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.58.93 ಲಕ್ಷಗಳಾಗಿದೆ. ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,63.77 ಲಕ್ಷಗಳಾಗಿದೆ.

ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಯುನಿಟ್ ಆಗಿ ನೀಡಲಾಗುವುದು ಮತ್ತು ಔರಂಗಾಬಾದ್‌ನಲ್ಲಿರುವ ಅದರ ಮೂಲ ಕಂಪನಿಯಾದ ವಿಡಬ್ಲ್ಯು ಗ್ರೂಪ್‌ನ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಸ್ಥಾವರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ. 2020ರ ಏಪ್ರಿಲ್ ತಿಂಗಳಿನಲ್ಲಿ ಪ್ರಿ-ಫೇಸ್‌ಲಿಫ್ಟ್ ಮಾಡೆಲ್ ಅನ್ನು ಸ್ಥಗಿತಗೊಳಿಸಿದ ನಂತರ ಆಡಿ ಕ್ಯೂ5 18 ತಿಂಗಳ ವಿರಾಮದ ನಂತರ ಭಾರತಕ್ಕೆ ಹಿಂತಿರುಗುತ್ತಿದೆ. 2021ರ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯು ಅದರ ಪೂರ್ವವರ್ತಿಗಿಂತ ಸ್ವಲ್ಪ ತೀಕ್ಷ್ಣವಾಗಿ ಮತ್ತು ದಪ್ಪವಾಗಿ ಕಾಣುತ್ತದೆ ಮತ್ತು ಹೆಚ್ಚಿನ ನವೀಕರಣಗಳು ಅದರ ಫಾಸಿಕದ ಮೇಲೆ ಕೇಂದ್ರೀಕೃತವಾಗಿವೆ.

ಕ್ರೋಮ್ ಬಾರ್ಡರ್‌ಗಳು ಮತ್ತು ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಹೊಸ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅದರ ಮಸ್ಕಲರ್ ಮುಂಭಾಗದ ತುದಿಯಲ್ಲಿ ನಿರ್ಮಿಸುತ್ತದೆ ಮತ್ತು ಚಂಕಿಯರ್ ಸಿಲ್ವರ್ ಸ್ಕಿಡ್ ಪ್ಲೇಟ್ ಸಹ ಇದೆ. ಈ ಎಸ್‍ಯುವಿ ದೊಡ್ಡದಾದ ಫಾಗ್‌ಲ್ಯಾಂಪ್ ಹೌಸಿಂಗ್‌ಗಳು, ಸಿಲ್ವರ್ ರೂಫ್ ರೈಲ್‌ಗಳು ಮತ್ತು ಸೈಡ್ ಸ್ಕರ್ಟ್‌ಗಳು, ಜೊತೆಗೆ ಪರಿಷ್ಕೃತ ಪೂರ್ಣ-ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಪಡೆಯುತ್ತದೆ. ಈ ಎಸ್‍ಯುವಿಯಲ್ಲಿ ಹೊಸ 19-ಇಂಚಿನ 5 ಡಬಲ್-ಸ್ಪೋಕ್ ಸ್ಟಾರ್ ಶೈಲಿಯ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ, ಜೊತೆಗೆ ಹಿಂಭಾಗದಲ್ಲಿ ಹೊಚ್ಚ ಹೊಸ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ.

ಈ ಹೊಸ ಆಡಿ ಕ್ಯೂ7 ಹೊಸ ನವೀಕರಣಗಳೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ, ಹೊಸ ಆಡಿ ಕ್ಯೂ7 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಕ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಇ ಮತ್ತು ವೊಲ್ವೊ XC90 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








