ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಆರ್‌ಎಸ್3
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಆರ್‌ಎಸ್3 ಮಾದರಿಗಳನ್ನು ಅನಾವರಣಗೊಳಿಸಿದೆ. ಹೊಸ ಆಡಿ ಆರ್‌ಎಸ್3 ಪರ್ಪಾಮೆನ್ಸ್ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿಯ ಬಾಡಿ ಶೈಲಿಯ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

2021ರ ಆಡಿ ಆರ್‌ಎಸ್3 ಮಾದರಿಗಳು ಬ್ಲ್ಯಾಕ್ ಸರೌಂಡ್ ಹೊಂದಿರುವ ಗ್ರಿಲ್ ಅನ್ನು ಹೊಂದಿದೆ. ಬಂಪರ್‌ನಲ್ಲಿನ ಕಾರ್ನರ್ ಏರ್ ಟೆಕ್'ನ ತಂಪಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮೆಷ್ ಪಿನಿಶಿಂಗ್ ಅನ್ನು ಹೊಂದಿದೆ. ಈ ಆರ್‌ಎಸ್3 ಮಾದರಿಗಳಲ್ಲಿ ಹೊಸ ಎಲ್‌ಇಡಿ ಹೆಡ್‌ಲೈಟ್ ಗಳನ್ನು ಹೊಂದಿವೆ, ಇನ್ನು ನೀವು ರನ್ನು ಲಾಕ್ ಮಾಡುವಾಗ ಅಥವಾ ಅನ್ ಲಾಕ್ ಮಾಡುವಾಗ ಮ್ಯಾಟ್ರಿಕ್ಸ್ ಫಾಂಟ್‌ನಲ್ಲಿ ಆರ್‌ಎಸ್3 ಎಂದು ಉಚ್ಚರಿಸಲಾಗುತ್ತದೆ.

2021ರ ಆಡಿ ಆರ್‌ಎಸ್3 ಮಾದರಿಗಳ ಮುಂಭಾಗದ ಫೆಂಡರ್‌ಗಳು,ವ್ಹೀಲ್ ಗಳ ಮೇಲೆ ಬಾಕ್ಸ್ ಶೈಲಿಯ ಫ್ಲೇರ್ ಅನ್ನು ಹೊಂದಿದೆ. ಹೆಚ್ಚು ಅಗ್ರೇಸಿವ್ ಸ್ಕರ್ಟ್‌ಗಳನ್ನು ಪಡೆಯುತ್ತದೆ, ಹಿಂಭಾಗದ ಬಂಪರ್ ಮತ್ತು ಬೂಟ್‌ನಲ್ಲಿ ಸೂಕ್ಷ್ಮ ರೂಫ್ ರೈಲ್ ಸ್ಪಾಯ್ಲರ್ ಅದರ ಏರೋಡೈನಾಮಿಕ್ ವಿನ್ಯಾಸವನ್ನು ಹೆಚ್ಚಿಸುತ್ತದೆ.

ಇದರೊಂದಿಗೆ ಕಿಂಕ್ಡ್-ಎಲ್ಇಡಿ ಟೈಲ್‌ಲೈಟ್‌ಗಳು ವಿಭಿನ್ನ ಲಾಕ್ ಮತ್ತು ಅನ್ ಲಾಕ್ ಆನಿಮೇಷನ್ ಅನ್ನು ಹೊಂದಿವೆ. ಇನ್ನು ಆರ್ಎಸ್-ಸಿಗ್ನೇಚರ್ ಡ್ಯುಯಲ್ ಓವಲ್ ಎಕ್ಸಾಸ್ಟ್ ಔಟ್ ಲೆಟ್‌ಗಳು ಗ್ಲೋಸ್ ಬ್ಲ್ಯಾಕ್ ರಿಯರ್ ಡಿಫ್ಯೂಸರ್ ಎರಡು ಬದಿಯಲ್ಲಿದೆ.

ಆರ್ಎಸ್3 ಮಾದರಿಗಳ ಬ್ಲ್ಯಾಕ್ ರೂಫ್ ರೈಲ್ ಅನ್ನು ಹೊಂದಿದೆ, ಅದು ತುಂಬಾ ಸ್ಪೋರ್ಟಿ ಆಗಿ ಕಾಣುತ್ತದೆ. ಮುಂಭಾಗದ ಸ್ಪ್ಲಿಟರ್, ಹಿಂಭಾಗದ ಡಿಫ್ಯೂಸರ್, ಬಂಪರ್ ಗಳು ಮತ್ತು ಮ್ಯಾಟ್ ಸಿಲ್ವರ್ ಟ್ರಿಮ್ನೊಂದಿಗೆ ಸೈಡ್ ಸ್ಕರ್ಟ್‌ಗಳನ್ನು ಆಲು-ಆಪ್ಟಿಕ್ ಟ್ರಿಮ್ ಪ್ಯಾಕೇಜ್ ಅನ್ನು ಖರೀದಿದಾರರು ಆಯ್ಕೆ ಮಾಡಬಹುದು.

ಅದೇ ಹೊರಭಾಗದಲ್ಲಿ ಲಭ್ಯವಿರುವ ಕಾರ್ಬನ್ ಫೈಬರ್ ಟ್ರಿಮ್ ಪ್ಯಾಕೇಜ್ ಹೆಚ್ಚು ಅಗ್ರೇಸಿವ್ ಆಗಿ ಕಾಣುವಂತೆ ಮಾಡುತ್ತದೆ. ಕ್ಯಾಬಿನ್‌ನಲ್ಲಿ ಸ್ಟ್ಯಾಂಡರ್ಡ್ 12.3-ಇಂಚಿನ ಆಡಿ ವರ್ಚುವಲ್ ಕಾಕ್‌ಪಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್ ಪ್ಲೇ ಮತ್ತು ಎಂಐಬಿ 3 ಪ್ರೊಸೆಸರ್ ಹೊಂದಿರುವ 10.1 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ.

ನಿರ್ದಿಷ್ಟವಾಗಿ ಸ್ಟ್ಯಾಂಡರ್ಡ್ ಕಾರ್ಬನ್ ಫೈಬರ್ ಟ್ರಿಮ್, "ಆರ್ಎಸ್ ರನ್ವೇ" ಅಥವಾ ಟ್ಯಾಕೋಮೀಟರ್ಗಾಗಿ ಬಾರ್ ಗ್ರಾಫ್ ಮೋಡ್ ಗಳು, ಆರ್ಎಸ್-ಸಿಗ್ನೇಚರ್ ಹನಿಕಾಬ್ ಸೀಟ್ ಕ್ವಿಲ್ಟಿಂಗ್ ಕೆಂಪು, ಕಪ್ಪು, ಅಥವಾ ಹಸಿರು ಕಾಂಟ್ರಾಸ್ಟ್ ಸ್ಟಿಚಿಂಗ್ ಮತ್ತು ಒಳಾಂಗಣ ವಿನ್ಯಾಸ ಪ್ಯಾಕ್ ಅನ್ನು ಹೊಂದಿದ್ದರೆ ಡೋರ್ ಪ್ಯಾನೆಲ್ ಗಳಿಗೆ ಇನ್ನಷ್ಟು ಕೆಂಪು ಅಥವಾ ಹಸಿರು ಅಸ್ಸೆಂಟ್ ಗಳನ್ನು ನೀಡುತ್ತದೆ.

ಆರ್ಎಸ್3 ಮಾದರಿಗಳಲ್ಲಿ ಅದೇ 2.5-ಲೀಟರ್, ಇನ್-ಲೈನ್ ಐದು ಸಿಲಿಂಡರ್ ಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 389 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ,

ಇದು ಟಾರ್ಕ್-ವೆಕ್ಟರಿಂಗ್ ಕ್ವಾಟ್ರೋ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಕೇವಲ 3.8 ಸೆಕೆಂಡುಗಳಲ್ಲಿ 0 ದಿಂದ 100 ಸ್ಪೀಡ್ ವೇಗವನ್ನು ಪಡೆದುಕೊಳ್ಳುತ್ತದೆ, ಇದು ಅತ್ಯುತ್ತಮವಾದ ಕಾರ್ಯಕ್ಷಮತೆಯ ಅಂಕಿ ಅಂಶಗಳಾಗಿದ್ದು, ಸ್ಟ್ಯಾಂಡರ್ಡ್ ಮಾದರಿಯ ಟಾಪ್ ಸ್ಪೀಡ್ 250 ಕಿ.ಮೀ ವೇಗಕ್ಕೆ ಸೀಮಿತಗೊಳಿಸಿದೆ.


Click it and Unblock the Notifications








