ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಬೆಸ್ಟ್ ಎಂದೇ ಜನಪ್ರಿಯವಾಗಿರುವ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ ಆಡಳಿತ ಮಂಡಳಿಯು ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಎಸಿ ಬಸ್‌ಗಳನ್ನು ಮಾತ್ರ ಖರೀದಿಸುವುದಾಗಿ ಘೋಷಿಸಿದೆ. ಬೆಸ್ಟ್‌ನ ಈ ಘೋಷಣೆಯನ್ನು ಪರಿಸರವನ್ನು ರಕ್ಷಿಸುವ ಪ್ರಮುಖ ಕ್ರಮಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

2022 ರ ಅಂತ್ಯದ ವೇಳೆಗೆ 45% ನಷ್ಟು ಬೆಸ್ಟ್ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸಲಾಗುವುದು ಎಂದು ಘೋಷಿಸಲಾಗಿದೆ. ಹಾಗೆಯೇ ಬೆಸ್ಟ್ ಮಾಲೀಕತ್ವದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 250 ಡೀಸೆಲ್ ಬಸ್ಸುಗಳನ್ನು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಸಲುವಾಗಿ ಸಿ‌ಎನ್‌ಜಿಗೆ ಪರಿವರ್ತಿಸಲಾಗುವುದು.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಈಗ ದೇಶಾದ್ಯಂತ ಎಲೆಕ್ಟ್ರಿಕ್ ಹಾಗೂ ಸಿ‌ಎನ್‌ಜಿ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂಬುದು ಗಮನಾರ್ಹ. ಈ ಬಗ್ಗೆ ಮಾತನಾಡಿರುವ ಬೆಸ್ಟ್‌ನ ಜನರಲ್ ಮ್ಯಾನೇಜರ್ ಲೋಕೇಶ್ ಚಂದ್ರ, ಇದೊಂದು ಪ್ರಮುಖ ನಿರ್ಧಾರವಾಗಿದೆ. ಪರಿಸರ ಸ್ನೇಹಿಯಾಗಿರುವ ವಾಹನಗಳಿಗೆ ನಾವು ಬದಲಾಗುತ್ತಿದ್ದೇವೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಇದರ ಜೊತೆಗೆ ಈ ಬಸ್ಸುಗಳು ಡೀಸೆಲ್ ಬಸ್ಸುಗಳಂತೆ ಹೆಚ್ಚು ಶಬ್ದವನ್ನುಂಟು ಮಾಡುವುದಿಲ್ಲವೆಂದು ಹೇಳಿದರು. ಬೆಸ್ಟ್ ಇತ್ತೀಚೆಗಷ್ಟೇ ಹೆಚ್ಚು ಉದ್ದವಾಗಿರುವ 31 ಎಲೆಕ್ಟ್ರಿಕ್ ಬಸ್‌ಗಳನ್ನು ತನ್ನ ಬಳಕೆಗಾಗಿ ಸೇರ್ಪಡೆಗೊಳಿಸಿಕೊಂಡಿದೆ. ಈ ಬಸ್ಸುಗಳು 12 ಮೀಟರ್ ಉದ್ದವನ್ನು ಹೊಂದಿವೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಈ ಮೂಲಕ ಬೆಸ್ಟ್ ಬಳಿ ಇರುವ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 297 ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾತನಾಡಿದ ಲೋಕೇಶ್ ಚಂದ್ರ, ನಾವು ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಬಳಕೆಗೆ ತರುವ ಭರವಸೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಈ ವರ್ಷದ ಡಿಸೆಂಬರ್ ವೇಳೆಗೆ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು 411 ಕ್ಕೆ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. 2022 ರ ವೇಳೆಗೆ ನಾವು ಹೆಚ್ಚುವರಿಯಾಗಿ 1,800 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುತ್ತೇವೆ. ಇದರಿಂದ ಮುಂದಿನ ವರ್ಷದ ಅಂತ್ಯದ ವೇಳೆಗೆ ನಮ್ಮ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 2,211 ಕ್ಕೆ ಹೆಚ್ಚಲಿದೆ ಎಂದು ಹೇಳಿದರು.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

2022 ರ ಅಂತ್ಯದ ವೇಳೆಗೆ ಬೆಸ್ಟ್‌ನ ಒಟ್ಟಾರೆ ಬಸ್‌ಗಳ ಸಂಖ್ಯೆ 4,900 ಕ್ಕೆ ತಲುಪುವ ನಿರೀಕ್ಷೆಗಳಿವೆ. ಇವುಗಳಲ್ಲಿ 2,211 ಬಸ್ಸುಗಳು ಎಲೆಕ್ಟ್ರಿಕ್ ಬಸ್ ಆಗಿರಲಿವೆ. ಈ ಮೂಲಕ ಒಟ್ಟಾರೆ ಬಸ್‌ಗಳ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಪ್ರಮಾಣವು 45% ನಷ್ಟು ಆಗಿರಲಿದೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಬೆಸ್ಟ್‌ನ ಈ ಕ್ರಮದಿಂದಾಗಿ ಪರಿಸರವನ್ನು ಸಂರಕ್ಷಿಸುವ ಜೊತೆಗೆ ಇಂಧನಗಳ ಮೇಲೆ ಮಾಡುವ ಖರ್ಚಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಬೆಸ್ಟ್‌ನ ಈ ಕ್ರಮದಿಂದಾಗಿ ಮುಂಬೈನಲ್ಲಿ ಗಾಳಿಯ ಗುಣ ಮಟ್ಟವೂ ಸಹ ಸುಧಾರಿಸಲಿದೆ ಎಂದು ಹೇಳಲಾಗಿದೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಭಾರತದಲ್ಲಿ ಡೀಸೆಲ್ ಚಾಲಿತ ಬಸ್ಸುಗಳು ಕೂಡ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗುತ್ತಿವೆ. ಈ ಕಾರಣಕ್ಕೆ ಮುಂಬೈನಲ್ಲಿ ಮಾತ್ರವಲ್ಲದೆ ಭಾರತದ ಎಲ್ಲಾ ಭಾಗಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಗಮನಿಸಬೇಕಾದ ಸಂಗತಿಯೆಂದರೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಇತ್ತೀಚೆಗೆ ಸಿಎನ್‌ಜಿ ಬಸ್‌ಗಳನ್ನು ಪರಿಚಯಿಸಲಾಗಿದೆ. ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿಬಸ್‌ಗಳನ್ನು ಚಾಲನೆ ಮಾಡಲು ಡೀಸೆಲ್‌ನಲ್ಲಿ ಚಾಲನೆ ಮಾಡುವುದಕ್ಕಿಂತ ಕಡಿಮೆ ವೆಚ್ಚವಾಗುತ್ತದೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಭಾರತದಲ್ಲಿ ಡೀಸೆಲ್ ಬೆಲೆ ಸದ್ಯಕ್ಕೆ ರೂ. 100 ರ ಸಮೀಪ ತಲುಪಿದೆ. ಇದರಿಂದ ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ಬಸ್ಸುಗಳನ್ನು ನಿರ್ವಹಿಸುವುದು ಹೊರೆಯಾಗುತ್ತಿದೆ. ಡೀಸೆಲ್ ಬಸ್ಸುಗಳನ್ನು ಹಂತಹಂತವಾಗಿ ರದ್ದುಗೊಳಿಸಿ, ಎಲೆಕ್ಟ್ರಿಕ್ ಹಾಗೂ ಸಿ‌ಎನ್‌ಜಿ ಬಸ್ ಗಳನ್ನು ಬಳಸಿದರೆ ಸಾರಿಗೆ ಸಂಸ್ಥೆಗಳಿಗೆ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಭಾರತದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ರೂ. 100 ಗಳ ಗಡಿ ದಾಟಿದೆ. ಪೆಟ್ರೋಲ್, ಡೀಸೆಲ್ ಬೆಲೆಯಿಂದ ಕಂಗಾಲಾಗಿರುವ ವಾಹನ ಸವಾರರು ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಕೇಂದ್ರ ಸರ್ಕಾರವು ಫೇಮ್ ಇಂಡಿಯಾ 2 ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ. ಇದರ ಜೊತೆಗೆ ಕೆಲವು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಿವೆ.

ಭವಿಷ್ಯದಲ್ಲಿ ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಲಿದೆ ಈ ಸಾರಿಗೆ ಸಂಸ್ಥೆ

ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿಗೆ ವಿನಾಯಿತಿ ನೀಡಲಾಗಿದೆ. ಈ ಕಾರಣಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಬಳಸುತ್ತಿದ್ದವರು ಈಗ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಭಾರತದ ಬಹುತೇಕ ಎಲ್ಲಾ ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿವೆ. ಅದರಲ್ಲೂ ದೆಹಲಿ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿ ಜಾರಿಯಲ್ಲಿ ಇತರ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶುಲ್ಕ ಹಾಗೂ ನವೀಕರಣ ಶುಲ್ಕಗಳಿಗೆ ವಿನಾಯಿತಿ ನೀಡಿದೆ. ಇದರಿಂದಲೂ ಸಹ ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Best to purchase only electric ac buses in future details
Story first published: Thursday, August 12, 2021, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X